ಸ್ನೇಹಿತರೆ, ಈ ಚಿತ್ರವು ಚಿತ್ರವರ್ಷದ ವಾರಾಂತ್ಯ ಚಿತ್ರಪ್ರದರ್ಶನದ ಅಂಗವಾಗಿ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಇದೇ ಮೇ ೫ ಮತ್ತು ೬ ರ ಶನಿವಾರ ಮತ್ತು ಭಾನುವಾರ ಪ್ರದರ್ಶನವಾಗಲಿದೆ.
ಬೇಲಿ ಮತ್ತು ಹೊಲ - (ನಿರ್ದೇಶನ: ಪಿ.ಆರ್.ರಾಮದಾಸನಾಯ್ಡು)
ಪ್ರದರ್ಶನ ಸಮಯ: ಸಾಯಂಕಾಲ ೬.೩೦
ಟಿಕೆಟ್ ಬೆಲೆ ೪೦ ರೂಪಾಯಿ
ಸಂಪರ್ಕಿಸಿ: ರಾಜಶೇಖರ್, ೯೭೪೩೫೩೧೨೨೩
ಕಥಾ ಸಾರಾಂಶ: ‘ಬೇಲಿ ಮತ್ತು ಹೊಲ ನ್ಯಾಯ, ಅನ್ಯಾಯ, ಅಥವಾ ನ್ಯಾಯದಾನದ ಚರ್ಚೆಗೇ ಸೀಮಿತಗೊಳ್ಳುವುದಿಲ್ಲ. ನಮ್ಮನ್ನಾಳುವ ವ್ಯವಸ್ಥೆ ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎನಿಸಿದರೂ ಆಂತರ್ಯದಲ್ಲಿ ಗೆದ್ದಲುಗೂಡಾಗಿದೆ. ಕಾನೂನು, ನಿಯಮ, ನಿಬಂಧನೆ, ಸಾಮಾಜಿಕ ಮೌಲ್ಯಗಳು ನಮ್ಮನ್ನು ಕಾಪಾಡುತ್ತವೆ ಎಂಬ ಭ್ರಮೆಯ ಹಿಂದೆ ಅಡಗಿರುವ ಆಳುವ ವ್ಯವಸ್ಥೆಯ ಕ್ರೌರ್ಯ ಹೇಗೆ ಜನಸಾಮಾನ್ಯರನ್ನು ಕಾಡುತ್ತದೆ ಎಂಬ ವಾಸ್ತವತೆಯನ್ನು ಅನಾವರಣಗೊಳಿಸುವ ಪ್ರಯತ್ನ ಈ ಚಿತ್ರದ್ದು. ಕಾನೂನಿನಡಿ ನುಸುಳುವ ಹಾಗೂ ಭ್ರಷ್ಠತೆಯನ್ನು ನಿಭಾಯಿಸುವ ಕಲೆ ಕರಗತ ಮಾಡಿಕೊಂಡವನು, ಹೇಗೆ ಆಳುವ ವ್ಯವಸ್ಥೆಯಲ್ಲಿ ಅಂತರ್ಗತನಾಗಿದ್ದಾನೆ ಎಂಬುದು ಗಂಭೀರ ವಾಸ್ತವ. ಕಾನೂನು ಮತ್ತು ವ್ಯವಸ್ಥೆಯ ಪ್ರತಿನಿಧಿಯಾಗಿ ಪೊಲೀಸ್ ಅಧಿಕಾರಿ ಪೋತರಾಜು, ದಲ್ಲಾಳಿ ವ್ಯವಸ್ಥೆಯ ಹರಿಕಾರನಾಗಿ ವಿಠೋಬ, ಮಾಧ್ಯಮ ಪ್ರವರ್ತಕನಾಗಿ ಪತ್ರಕರ್ತ ರುದ್ರಪ್ಪ, ಇಂದಿನ ರಾಜಕೀಯ ವ್ಯವಸ್ಥೆಯ ಪ್ರತಿನಿಧಿಯಾಗಿ ಭೀಮಣ್ಣ, ಇವರೆಲ್ಲರೂ ಸಾಮಾನ್ಯ ಪ್ರಜೆಗಳ ಪ್ರತಿನಿಧಿಗಳಾದ ಚಂಬಸ್ವ, ಮಲ್ಲಕ್ಕ, ಬಡಕೊಟ್ರಯ್ಯ ಹಾಗೂ ಹಳ್ಳಿಗರ ಮೇಲೆ ನಡೆಸುವ ಹಿಂಸೆ, ಶೋಷಣೆ, ಅನ್ಯಾಯಗಳನ್ನು ಚಿತ್ರ ಸಮರ್ಥವಾಗಿ ಮಂಡಿಸುತ್ತದೆ. ಚಿತ್ರೋತ್ಸವ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ ೨೦೦೯ ಏಷ್ಯನ್ ಚಿತ್ರೋತ್ಸವ ಮುಂಬೈ ೨೦೦೯ ಚೆನ್ನೈ ಅಂತಾರಾಷ್ಟ್ರೀಯ ಚಿತ್ರೋತ್ಸವ ೨೦೦೯ ಪೂನಾ ಅಂತಾರಾಷ್ಟ್ರೀಯ ಚಿತ್ರೋತ್ಸವ ೨೦೦೯ ನಿರ್ದೇಶಕರ ನುಡಿ ಬೇಲಿ ಮತ್ತು ಹೊಲ ಒಂದು ಸಾಮಾಜಿಕ, ರಾಜಕೀಯ ಚಿತ್ರ. ನನಗೆ ಈ ಚಿತ್ರ ನಿರ್ಮಿಸಿ, ನಿರ್ದೇಶಿಸಲು ಪ್ರೇರಣೆ ದೊರೆತದ್ದು ಇಂದಿನ ಆಳುವ ವ್ಯವಸ್ಥೆಯಲ್ಲಿ ನಾಶವಾಗುತ್ತಿರುವ ನತದೃಷ್ಟರ ಸ್ಥಿತಿ. ಜೊತೆಗೆ ಪ್ರತಿದಿನವೂ ದೇಶದ ಒಂದಲ್ಲ ಒಂದುಕಡೆ ಕಾನೂನಿನ ನೆರಳಿನಡಿ ವಿಜೃಂಭಿಸುತ್ತಿರುವ ಕ್ರೌರ್ಯ. ಅದರಲ್ಲೂ ಹಳ್ಳಿಗಾಡಿನ ಅಮಾಯಕ ಜನ ಈ ವ್ಯವಸ್ಥೆಗೆ ಹರಕೆಯ ಕುರಿಗಳಾಗುತ್ತಿರುವ ವಾಸ್ತವತೆ. ಈ ಚಿತ್ರದಲ್ಲಿ ಎಲ್ಲವನ್ನೂ ಕಳೆದುಕೊಂಡು ನ್ಯಾಯ ಸಿಗುವುದೆಂಬ ಭ್ರಮೆಯಿಂದ ಪೋಲೀಸ್ ಠಾಣೆಯ ಮೆಟ್ಟಲು ಹತ್ತಿ ದಿವಾಳಿಯಾದ ಚೆಂಬಸ್ವ ಈ ವ್ಯವಸ್ಥೆಯ ನಡವಳಿಕೆಯಲ್ಲಿ ಭಿಕಾರಿಯಾಗುವ ದಾರುಣ ಘಟನೆ ಮನಕಲಕುವಂಥದ್ದು. ಕಾನೂನು ಪಾಲಕರನ್ನು ಹದ್ದುಬಸ್ತಿನಲ್ಲಿಟ್ಟು ಕಾನೂನು ವ್ಯವಸ್ಥೆ ಕಾಪಾಡಲು ನೇಮಿತವಾದ ಮಾನವ ಹಕ್ಕು ಆಯೋಗಗಳೂ ನಿಷ್ಕ್ರಿಯವಾಗಿ, ಅಮಾಯಕರು ಕಾನೂನು ಪಾಲಕರ ಉಕ್ಕಿನ ಪಾದದಡಿ ನಲುಗಿ ಹೋಗುತ್ತಿದ್ದಾರೆ ಎಂಬುದನ್ನು ಇಲ್ಲಿ ಪ್ರತಿಬಿಂಬಿಸಲಾಗಿದೆ. ಇದು ನಾಗರೀಕ ಸಮಾಜವನ್ನೂ, ಪ್ರಜ್ಞಾವಂತರನ್ನೂ ಗಂಭೀರ ಯೋಚನೆಗೆ ತಳ್ಳುವ ವಿಚಾರ. ಇದೇ ಈ ಚಿತ್ರಸೃಷ್ಟಿಗೆ ಕಾರಣ. ತಾಂತ್ರಿಕ ವರ್ಗನಿರ್ಮಾಣ : ನಾಯ್ಡು ಸ್ಟುಡಿಯೋಕಥೆ : ಕುಂವೀಸಂಕಲನ : ತುಳಸಿ ಕಿಶೋರ್ ಸಂಗೀತ : ರಾಜು ಉಪೇಂದ್ರಕುಮಾರ್‌ಛಾಯಾಗ್ರಹಣ : ಎಸ್ ರಾಮಚಂದ್ರ ಐತಾಳ್‌ಚಿತ್ರಕಥೆ, ನಿರ್ದೇಶನ : ಪಿ. ಆರ್. ರಾಮದಾಸ ನಾಯ್ಡು ತಾರಾಗಣ ಅಚ್ಚುತಕುಮಾರ್, ಹುಲಿಗೆವ್ವ ಕಟ್ಟೀಮನಿ, ಶ್ರೀನಿವಾಸ್ ಮೇಷ್ಟ್ರು, ವೆಂಕಟ ರಾವ್, ನಂಜುಂಡಯ್ಯ ನಿರ್ಮಾಪಕರುನಾಯ್ಡು ಸ್ಟೂಡಿಯೋಸ್ ಹಲವಾರು ದಶಕಗಳಿಂದ ಟೀವೀ ಸೀರಿಯಲ್ಸ್ ಗಳನ್ನೂ ಸಾಕ್ಷ್ಯ ಚಿತ್ರಗಳನ್ನೂ ಮಾಡುವುದರಲ್ಲೂ ತೊಡಗಿಕೊಂಡ ಸಂಸ್ಥೆ. ರಾಮದಾಸ ನಾಯ್ಡು ಅವರ ಸ್ವಂತ ಪರಿಶ್ರಮದ ಫಲವಾಗಿದೆ. ಈ ಹಿಂದೆ ಅವರು ಇದೇ ಲಾಂಛನದ ಅಡಿ ಹಲವಾರು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದ್ದಾರೆ. ನಿರ್ದೇಶಕರು ಪಿ.ಆರ್.ರಾಮದಾಸನಾಯ್ಡು ಹಲವು ಚಿತ್ರಗಳ ಹಿಂದಿನ ಪ್ರೇರಕ ಶಕ್ತಿಯಾಗಿ ದುಡಿದು ೧೯೮೨ರಲ್ಲಿ ‘ಅಮರ ಮಧುರ ಪ್ರೇಮ’ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು. ಸುರೇಶ್‌ಹೆಬ್ಳೀಕರ್ಶೋಭಾ ತಾರಾಗಣವಿದ್ದ ಈ ಚಿತ್ರದ ನಂತರ ‘ಜೀವನ ಸಂಗ್ರಾಮ ಚಿತ್ರ ನಿರ್ದೇಶಿಸಿದರು. ತೆಲುಗಲ್ಲಿ ‘ಪ್ರೇರಣ ನೀಡಿದರು. ಚಿತ್ರೀಕರಣಕ್ಕೆ ನೆರವಾಗುವ ಉದ್ದೇಶದಿಂದ ತಮ್ಮದೇ ಆದ ಸುಸಜ್ಜಿತ ಹೊರಾಂಗಣ ಚಿತ್ರೀಕರಣ ಘಟಕವನ್ನು ಸ್ಥಾಪಿಸಿದರು. ಕಿರುತೆರೆಯಲ್ಲೂ ಸಾಕಷ್ಟು ಹೆಸರಾಗಿದ್ದಾರೆ. ಫಿಲಂ ಡಿವಿಷನ್‌ನವರಿಗಾಗಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ೨೦೦೦ನೇ ವರ್ಷದಲ್ಲಿ ನಿರ್ದೇಶಿಸಿದ ‘ಮುಸ್ಸಂಜೆ’ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಯಿತು. ನಂತರದ ಅವರ ಚಿತ್ರಗಳು ‘ಪ್ರವಾಹ, ‘ಮೊಗ್ಗಿನ ಜಡೆ ಮತ್ತು ‘ಬೇಲಿ ಮತ್ತು ಹೊಲ. ಮೂರೂ ಚಿತ್ರಗಳು ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ಪ್ರದರ್ಶನ ಕಂಡುದೇ ಅಲ್ಲದೆ ಇತರ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಗಮನ ಸೆಳೆಯಿತು. ಚಲನಚಿತ್ರ ಮಾಧ್ಯಮದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಚಿತ್ರಗಳು ಅಮರ ಮಧುರ ಪ್ರೇಮ (೧೯೮೦) ಜೀವನ ಸಂಗ್ರಾಮ (೧೯೮೬) ಪ್ರೇರಣ (ತೆಲುಗು) (೧೯೯೮) ಮುಸ್ಸಂಜೆ (೨೦೦೧) ಪ್ರವಾಹ (೨೦೦೪) ಮೊಗ್ಗಿನ ಜಡೆ (೨೦೦೭) ಬೇಲಿ ಮತ್ತು ಹೊಲ (೨೦೦೮)