ದೃಶ್ಯಕ್ಕೊಂದು ನುಡಿಗಟ್ಟು

ಚಿತ್ರ ವರ್ಷ: ಗಗ್ಗರ ಚಿತ್ರ ಪ್ರದರ್ಶನ

ಸ್ನೇಹಿತರೆ,

ಗಗ್ಗರ (ತುಳು) ಚಿತ್ರವು ‘ಚಿತ್ರವರ್ಷ’ದ ವಾರಾಂತ್ಯ ಚಿತ್ರಪ್ರದರ್ಶನದ ಅಂಗವಾಗಿ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಇದೇ ಜೂನ್ ೧೯ ಮತ್ತು ೨೦ ರ ಶನಿವಾರ ಮತ್ತು ಭಾನುವಾರ ಪ್ರದರ್ಶನವಾಗಲಿದೆ.

ಪ್ರದರ್ಶನ ಸಮಯ: ಸಾಯಂಕಾಲ ೬.೩೦

ಟಿಕೆಟ್ ಬೆಲೆ ೪೦ ರೂಪಾಯಿ
ಸಂಪರ್ಕಿಸಿ: ರಾಜಶೇಖರ್, ೯೭೪೩೫೩೧೨೨೩

ಕಥಾ ಸಾರಾಂಶಭೂತಕೋಲ ಕರಾವಳಿ ಕರ್ನಾಟಕದಲ್ಲಿ ರೂಢಿಯಲ್ಲಿರುವ ಧಾರ್ಮಿಕ ಆರಾಧನೆ. ‘ಗಗ್ಗರ ಭೂತ ಕಟ್ಟುವ ಮಂದಿ ಎದುರಿಸುವ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಭೂತ ಕಟ್ಟುವವನನ್ನು ಕೆಳಜಾತಿಯವನೆಂದು ಸಮಾಜದಲ್ಲಿ ನಿಕೃಷ್ಟವಾಗಿ ಕಾಣಲಾಗುತ್ತಿದೆ. ಜನರೊಡನೆ ಮುಕ್ತವಾಗಿ ಆರ ಬೆರೆಯುವಂತಿಲ್ಲ. ಉಳಲು ಹೋಗುವಂತಿಲ್ಲ, ಕೂಲಿ ಮಾಡುವಂತಿಲ್ಲ. ವರ್ಷದಲ್ಲಿ ಕೇವಲ ಐದು ತಿಂಗಳು ಮಾತ್ರ ಅವರಿಗೆ ಉದ್ಯೋಗ. ಅದಕ್ಕಾಗಿ ಅಲ್ಪಮೊತ್ತ ಮತ್ತು ಆಹಾರವಷ್ಟೇ ಸಂಬಳ. ವರ್ಷದ ಇತರ ದಿನಗಳಲ್ಲಿ ಭಿಕ್ಷೆ ಎತ್ತಿಕೊಂಡು ಬದುಕಬೇಕಾದ ಪರಿಸ್ಥಿತಿ ಅವರದು. ಭೂತ ಕಟ್ಟುವ ಶಂಕರ ಎನ್ನುವವನ ಕುರಿತ ಚಿತ್ರ ಇದು. ಆತ ಓದಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುತ್ತಾನೆ. ತಂದೆಯ ನಿಧನದ ನಂತರ ಭೂತ ಕಟ್ಟುವ ಕೆಲಸವನ್ನೂ ಮುಂದುವರಿಸುತ್ತಾನೆ. ಸಮಾಜ ಉಳಿದವರಂತೆ ತಮ್ಮನ್ನೂ ಕಾಣಬೇಕು ಎಂದು ಆಗ್ರಹಿಸುತ್ತಾನೆ. ಇದರಿಂದ ಈ ಮಂದಿಗೆ ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ಮೇಲೇಳಲು ಸಾಧ್ಯವಾಗುತ್ತದೆ. ಪ್ರಶಸ್ತಿ‌ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿ -೨೦೦೮ಚಿತ್ರೋತ್ಸವಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ, ಗೋವಾ -೨೦೦೯ನಿರ್ದೇಶಕರ ನುಡಿಕರ್ನಾಟಕದ ಕರಾವಳಿ, ತುಳುನಾಡಿನಲ್ಲಿ ಭೂತಾರಾಧನೆ ಸಾಮಾನ್ಯ ದೃಶ್ಯ. ವೇಷ-ಭೂಷಣ, ಹಾಡು, ನೃತ್ಯ, ಮಾತುಗಳ ಮೂಲಕ ಬೇರೆಯೇ ಆದ ವಾತಾವರಣವನ್ನು ಇದು ಸೃಷ್ಟಿಸುತ್ತದೆ. ನಂಬಿಕೆ, ಆಚರಣೆ, ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯ ಸಂಗಮ ಎಂದು ಭೂತಕೋಲವನ್ನು ವಿಶ್ಲೇಷಿಸಲಾಗುತ್ತಿದೆ. ಭೂತ ವೇಷಧಾರಿ ತಾನು ಕಟ್ಟಿದ ಭೂತದ ಅವತಾರವೆನ್ನುವಂತೆ ವರ್ತಿಸಿ, ಭಕ್ತರ ಕಷ್ಟಗಳನ್ನು ಕೇಳಿ, ಸಮಸ್ಯೆಗಳನ್ನು ನೀಗಿಸಿ, ಎಚ್ಚರಿಕೆ ಕೊಡುವ ಕೆಲಸ ಮಾಡುತ್ತಾನೆ. ಕಾನೂನು ಮತ್ತು ಸಾಮಾಜಿಕ ಸಮಸ್ಯೆಗಳನ್ನೂ ಪರಿಹರಿಸುವ ಕೆಲಸ ಇಲ್ಲಿ ಆಗುತ್ತದೆ. ತಾಂತ್ರಿಕ ವರ್ಗನಿರ್ಮಾಪಕರು : ಗುರುದತ್ ಮತ್ತು ದುರ್ಗಾನಂದಸಂಕಲನ  : ಕೆ.ಎಂ. ಪ್ರಕಾಶ್‌ಛಾಯಾಗ್ರಹಣ  : ಸುರೇಶ್ ಬೈರಸಂದ್ರಚಿತ್ರಕಥೆ, ಸಂಗೀತ, ನಿರ್ದೇಶನ  : ಶಿವಧ್ಜಜ ಶೆಟ್ಟಿತಾರಾಗಣ ಸುಚೇಂದ್ರ ಪ್ರಸಾದ್, ಎಂ.ಕೆ ಮಠ, ಜಯಶೀಲನಿರ್ಮಾಪಕರುಗುರುದತ್ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಟಿವಿ ಧಾರಾವಾಹಿಗಳಲ್ಲಿ ನಿರ್ದೇಶನ, ನಿರ್ಮಾಣ ಮತ್ತು ಸಂಕಲನ ಮಾಡುತ್ತಿದ್ದಾರೆ. ಸುವರ್ಣ ಕನ್ನಡ ವಾಹಿನಿಯ ಕಾರ್ಯಕ್ರಮಗಳ ಉಪಾಧ್ಯಕ್ಷರಾಗಿ ಕಾರ್ಯ ಕೂಡ ನಿರ್ವಹಿಸಿದ್ದಾರೆ.ಎಂ.ದುರ್ಗಾನಂದ್ ಇವರು ಕನ್ನಡದಲ್ಲಿ ಈತನಕ ಐದು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಗಗ್ಗರ ಇವರ ಮೊದಲ ತುಳು ಭಾಷೆಯ ಚಿತ್ರ.ನಿರ್ದೇಶಕರುಶಿವಧ್ವಜ್ ಶೆಟ್ಟಿ ಚಿತ್ರರಂಗದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ೨೨ ಕನ್ನಡ, ಒಂದು ಮಲಯಾಂ ಹಾಗೂ ಒಂದು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ನೀನೆ ನೀನೆ (ಕನ್ನಡ) ಇವರು ನಿರ್ದೇಶನದ ಮೊದಲ ಚಿತ್ರ. ಇವರು ‘ಪ್ರೊಡಕ್ಷನ್ ಹೌಸ್ ಎಂಬ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ.ಚಿತ್ರUಳ ಪರಿವಿಡಿ
ನೀನೇ ನೀನೇ
ಗಗ್ಗರ ತ್ಸವಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ, ಗೋವಾ -೨೦೦೯ನಿರ್ದೇಶಕರ ನುಡಿಕರ್ನಾಟಕದ ಕರಾವಳಿ, ತುಳುನಾಡಿನಲ್ಲಿ ಭೂತಾರಾಧನೆ ಸಾಮಾನ್ಯ ದೃಶ್ಯ. ವೇಷ-ಭೂಷಣ, ಹಾಡು, ನೃತ್ಯ, ಮಾತುಗಳ ಮೂಲಕ ಬೇರೆಯೇ ಆದ ವಾತಾವರಣವನ್ನು ಇದು ಸೃಷ್ಟಿಸುತ್ತದೆ. ನಂಬಿಕೆ, ಆಚರಣೆ, ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯ ಸಂಗಮ ಎಂದು ಭೂತಕೋಲವನ್ನು ವಿಶ್ಲೇಷಿಸಲಾಗುತ್ತಿದೆ. ಭೂತ ವೇಷಧಾರಿ ತಾನು ಕಟ್ಟಿದ ಭೂತದ ಅವತಾರವೆನ್ನುವಂತೆ ವರ್ತಿಸಿ, ಭಕ್ತರ ಕಷ್ಟಗಳನ್ನು ಕೇಳಿ, ಸಮಸ್ಯೆಗಳನ್ನು ನೀಗಿಸಿ, ಎಚ್ಚರಿಕೆ ಕೊಡುವ ಕೆಲಸ ಮಾಡುತ್ತಾನೆ. ಕಾನೂನು ಮತ್ತು ಸಾಮಾಜಿಕ ಸಮಸ್ಯೆಗಳನ್ನೂ ಪರಿಹರಿಸುವ ಕೆಲಸ ಇಲ್ಲಿ ಆಗುತ್ತದೆ. ತಾಂತ್ರಿಕ ವರ್ಗನಿರ್ಮಾಪಕರು : ಗುರುದತ್ ಮತ್ತು ದುರ್ಗಾನಂದಸಂಕಲನ  : ಕೆ.ಎಂ. ಪ್ರಕಾಶ್‌ಛಾಯಾಗ್ರಹಣ  : ಸುರೇಶ್ ಬೈರಸಂದ್ರಚಿತ್ರಕಥೆ, ಸಂಗೀತ, ನಿರ್ದೇಶನ  : ಶಿವಧ್ಜಜ ಶೆಟ್ಟಿತಾರಾಗಣ ಸುಚೇಂದ್ರ ಪ್ರಸಾದ್, ಎಂ.ಕೆ ಮಠ, ಜಯಶೀಲನಿರ್ಮಾಪಕರುಗುರುದತ್ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಟಿವಿ ಧಾರಾವಾಹಿಗಳಲ್ಲಿ ನಿರ್ದೇಶನ, ನಿರ್ಮಾಣ ಮತ್ತು ಸಂಕಲನ ಮಾಡುತ್ತಿದ್ದಾರೆ. ಸುವರ್ಣ ಕನ್ನಡ ವಾಹಿನಿಯ ಕಾರ್ಯಕ್ರಮಗಳ ಉಪಾಧ್ಯಕ್ಷರಾಗಿ ಕಾರ್ಯ ಕೂಡ ನಿರ್ವಹಿಸಿದ್ದಾರೆ.ಎಂ.ದುರ್ಗಾನಂದ್ ಇವರು ಕನ್ನಡದಲ್ಲಿ ಈತನಕ ಐದು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಗಗ್ಗರ ಇವರ ಮೊದಲ ತುಳು ಭಾಷೆಯ ಚಿತ್ರ.ನಿರ್ದೇಶಕರುಶಿವಧ್ವಜ್ ಶೆಟ್ಟಿ ಚಿತ್ರರಂಗದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ೨೨ ಕನ್ನಡ, ಒಂದು ಮಲಯಾಂ ಹಾಗೂ ಒಂದು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ನೀನೆ ನೀನೆ (ಕನ್ನಡ) ಇವರು ನಿರ್ದೇಶನದ ಮೊದಲ ಚಿತ್ರ. ಇವರು ‘ಪ್ರೊಡಕ್ಷನ್ ಹೌಸ್ ಎಂಬ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ.ಚಿತ್ರUಳ ಪರಿವಿಡಿ
ನೀನೇ ನೀನೇ
ಗಗ್ಗರ
 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು