ಸುಚಿತ್ರಾ : ಕಾಡ ಬೆಳದಿಂಗಳು ಚಿತ್ರ ಪ್ರದರ್ಶನ
ಎಲ್ಲಿಃಸುಚಿತ್ರಾದಲ್ಲಿ ಯಾವತ್ತುಃ ಆಗಸ್ಟ್ 21 ಮತ್ತು 22 ರಂದು ಸಮಯಃಎರಡೂ ದಿನ ಸಂಜೆ 6.3೦ಕ್ಕೆ ಟಿಕೆಟ್ ಬೆಲೆಃ ೪೦ರೂಗಳು. ಸಂಪರ್ಕಃ ಚಿತ್ರಸಮೂಹ-Mob 9743531223 ಜಾಗತೀಕರಣ ಮತ್ತು ನಗರ ಸಂಸ್ಕೃತಿಯ ಆಕರ್ಷಣೆ ನಿಧಾನವಾಗಿ ನಮ್ಮ ಗ್ರಾಮಗಳನ್ನು ವೃದ್ಧಾಶ್ರಮಗಳನ್ನಾಗಿಸುವುದನ್ನು ‘ಕಾಡಬೆಳದಿಂಗಳು’ ಹೇಳುತ್ತದೆ. ಶಿಕ್ಷಣ ಮತ್ತು ಆಧುನಿಕತೆಯ ಪರಿಣಾಮ ಇದು. ಅಭಿವೃದ್ಧಿಶೀಲ ನಾಗರಿಕತೆ ಎದುರಿಸುತ್ತಿರುವ ಈ ಸಮಸ್ಯೆಯನ್ನು ಈ ಚಿತ್ರ ಹೇಳುವ ಪ್ರಯತ್ನ ಮಾಡುತ್ತದೆ. ‘ಕಾಡ ಬೆಳದಿಂಗಳು’ ಈ ಪ್ರಕ್ರಿಯೆಯನ್ನು ಸುಧೇಷ್ಣೆ ಎಂಬ ಹೆಸರಿನ ವರದಿಗಾರ್ತಿಯ ಸಾಕ್ಷಿಪ್ರಜ್ಞೆಯ ಮೂಲಕ ನೋಡುತ್ತದೆ. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಉದ್ಯೋಗ ಅರಸಿಕೊಂಡು ಬಂದ ಆಕೆಗೆ ತಾನು ಹುಟ್ಟಿ ಬೆಳೆದ ಪರಿಸರದ ಸಂಪರ್ಕವನ್ನು ಕಳೆದುಕೊಂಡೆ ಎಂದು ಪರಿತಪಿಸುವ ವೇಳೆ ಆಕಸ್ಮಿಕವಾಗಿ ಮತ್ತೆ ಹಳ್ಳಿಗೆ ಮರಳಬೇಕಾಗುತ್ತದೆ. ನಗರದಲ್ಲಿ ನಡೆದ ಘಟನೆಯೊಂದರ ಬೆನ್ನು ಹತ್ತಿ ವರದಿಗಾರಿಕೆಗಾಗಿ ಬಂದ ಆಕೆಗೆ ಗ್ರಾಮೀಣ ಬದುಕಿನ ಮೌಲ್ಯಗಳು ಅವಸಾನದತ್ತ ಮುಖ ಮಾಡಿರುವುದರ ಪರಿಚಯವಾಗುತ್ತದೆ. ನಗರದತ್ತ ಹೊರಟ ಯುವಕರು, ವೃದ್ಧಾಶ್ರಮವಾಗುತ್ತಿರುವ ಹಳ್ಳಿಗಳು ಇವುಗಳ ನಡುವೆ ತಮ್ಮ ಸ್ವಾರ್ಥ ಸಾಧಿಸುವ ವರ್ಗ - ಸುಧೇಷ್ಣೆ ಇವುಗಳ ನಡುವೆ ಹೇಗೆ ಕಾರ್ಯಪ್ರವೃತ್ತಳಾಗುತ್ತಾಳೆ ಎನ್ನವುದು ‘ಕಾಡಬೆಳದಿಂಗಳು' ಬೆಂಗಳೂರು ಕಂಪೆನಿ ಸದಭಿರುಚಿಯ ಚಿತ್ರನಿರ್ಮಾಣವನ್ನು ಗುರಿಯಾಗಿಸಿಕೊಂಡು ಹುಟ್ಟಿಕೊಂಡ ಸಂಸ್ಥೆ ಬೆಂಗಳೂರು ಕಂಪೆನಿ. ನಿರ್ದೇಶಕ ಲಿಂಗದೇವರು, ಛಾಯಾಗ್ರಾಹಕ ಪತ್ರಕರ್ತ ಕೆ. ಎಂ. ವೀರೇಶ್, ಸಿದ್ಧಲಿಂಗಯ್ಯ ಮತ್ತು ಗೆಳೆಯರ ಬಳಗ ಜೊತೆ ಸೇರಿ ಸ್ಥಾಪಿಸಿದ ಬೆಂಗಳೂರು ಕಂಪೆನಿಯ ಮೊದಲ ಚಿತ್ರ ‘ಕಾಡಬೆಳದಿಂಗಳು’. ಮೊದಲ ಚಿತ್ರಕ್ಕೇ ರಾಜ್ಯ, ರಾಷ್ಟ್ರಗಳ ಗೌರವ ದೊರೆತಿದೆ. ಬಿ.ಎಸ್. ಲಿಂಗದೇವರುಃಫಾರ್ಮಸಿ ಡಿಪ್ಲೊಮಾ ಓದಿದ ಬಿ.ಎಸ್. ಲಿಂಗದೇವರು ಆರಿಸಿದ್ದು ದೃಶ್ಯಮಾಧ್ಯಮವನ್ನು. ಕಿರುಚಿತ್ರಗಳ ಮೂಲಕ ಈ ಕ್ಷೇತ್ರಕ್ಕೆ ಪರಿಚಯವಾದ ಲಿಂಗದೇವರು ಮೂವತ್ತಕ್ಕೂ ಹೆಚ್ಚು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತಮ್ಮ ಕಿರುಚಿತ್ರಗಳಿಗೆ ಹೆಚ್ಚಾಗಿ ಕನ್ನಡದ ಕಾದಂರಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವ ಅವವರು ಕೈಗೆತ್ತಿಕೊಂಡ ಮೊದಲ ರೂಪಕ ಚಿತ್ರ ‘ಮೌನಿ’. ಡಾ. ಯು ಆರ್ ಅನಂತಮೂರ್ತಿ ಅವರ ಕಥೆ ಆಧರಿಸಿದ ‘ಮೌನಿ’ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿವೆ. ‘ಕಾಡಬೆಳದಿಂಗಳು’ ಅವರ ನಿರ್ದೇಶನದ ಎರಡನೆಯ ಚಿತ್ರ. ನಿರ್ಮಾಪಕರು : ಬೆಂಗಳೂರು ಕಂಪನಿ
ನಿರ್ದೇಶನ : ಬಿ. ಎಸ್. ಲಿಂಗದೇವರು ಛಾಯಾಗ್ರಹಣ : ಎಚ್. ಎಂ. ರಾಮಚಂದ್ರ ಸಂಕಲನ | ಅನಿಲ್ ನಾಯ್ಡು ಸಂಗೀತ : ರಾಜೇಶ್ ರಾಮನಾಥನ್ ತಾರಾಗಣ : ಲೋಕನಾಥ್, ಎಚ್ ಜಿ ದತ್ತಾತ್ರೇಯ, ಅನನ್ಯ ಕಾಸರವಳ್ಳಿ, ಭಾರ್ಗವಿ ನಾರಾಯಣ್
ಪ್ರಶಸ್ತಿಗಳು · ಅತ್ಯುತ್ತಮ ಪ್ರಾದೇಶಿಕ ಚಿತ್ರ – ರಾಷ್ಟ್ರಪ್ರಶಸ್ತಿ ೨೦೦೬ · ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ ರಾಜ್ಯ ಪ್ರಶಸ್ತಿ ೨೦೦೬-೨೦೦೭
|
|