ಗಿರೀಶ್ ಕಾಸರವಳ್ಳಿಯವರ "ಕನಸೆಂಬ ಕುದುರೆಯನೇರಿ" ಮೊದಲ ಪ್ರದರ್ಶನ
ಎರಡು ದೇಶಗಳು - ಏಕತೆರೆ ಎಲ್ಲಿ: ಲಾವಣ್ಯ ಚಿತ್ರಮಂದಿರ ಚಿತ್ರೋತ್ಸವದಲ್ಲಿ ಕ್ಲಾಸಿಕ್ ಎನ್ನಬಹುದಾದ ಹೊಸ ಮತ್ತು ಹಳೆಯ ಜರ್ಮನ್ ಚಿತ್ರಗಳನ್ನು ಭಾರತೀಯ ಸಿನಿಮಾಗಳ ಜೊತೆ ಪ್ರದರ್ಶಿಸಲಾಗುತ್ತದೆ. ಆಗಸ್ಟ್ ೨೦ರ ಉದ್ಘಾಟನೆ ದಿನದಂದು ಸಂಜೆ ೬ಗಂಟೆಗೆ ಗಿರೀಶ್ ಕಾಸರವಳ್ಳಿಯವರ ಹೊಸ ಚಿತ್ರ "ಕನಸೆಂಬ ಕುದುರೆಯನೇರಿ" ತನ್ನ ಮೊದಲ ಅಧಿಕೃತ ಪ್ರದರ್ಶನ ಕಾಣಲಿದೆ. ಆಹ್ವಾನಿತರ ಪಾಸ್‍ಗಳಿಗಾಗಿ ನೊಂದಾಯಿಸಲು ಅರ್ಜಿಗಳನ್ನು ಗೋಥೆ ಸಂಸ್ಥೆ, ಮ್ಯಾಕ್ಸ್ ಮುಲ್ಲರ್ಸ್ ಭವನ ಮತ್ತು ಸುಚಿತ್ರ ಫಿಲ್ಮ್ ಸೊಸೈಟಿ ಇಲ್ಲಿಂದ ಪಡೆಯಬಹುದು. ನೊಂದಾವಣೆಯಾದವರಿಗೆ ಕಾರ್ಯಕ್ರಮದ ದಿನದಂದು ಪಾಸ್‍ಗಳನ್ನು ವಿತರಿಸಲಾಗುವುದು.
|
|