ರಂಗಭೂಮಿಗೆ ಹೊಸ ಪ್ರೇಕ್ಷಕರನ್ನು ಗುರುತಿಸಿ ಸ್ವಾಗತಿಸಲು ಕಲಾ ಸೌಧದ ಆಯೋಜಕರಾದ ಫೋರ‍್ತ್ ಕಾರ್ನರ್ ಸಂಸ್ಥೆಯು “ಹೊಸಬೆಳಕು” ನಾಟಕವನ್ನು ಕೈಗೆತ್ತಿಕೊಂಡಿದ್ದಾರೆ. “ಹೊಸಬೆಳಕು” ಅಕ್ಟೋಬರ್ ೩೦, ೩೧, ನವಂಬರ್ ೧, ೨೦೧೦ ರಂದು ಕಲಾಸೌಧದಲ್ಲಿ ಪ್ರದರ್ಶನಗೊಳ್ಳಲಿದೆ. ವಾಣಿಯವರ ಕಾದಂಬರಿ ಆಧಾರಿತ ಚಲನಚಿತ್ರದ ರಂಗರೂಪ ಭರದಿಂದ ಸಾಗಿದೆ. ಸೆಪ್ಟಂಬರ್ ೧೮, ೨೦೧೦ ರಂದು ಕಲಾಸೌಧದಲ್ಲಿ ನಟ ನಟಿಯರ ಆಯ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಹೊಸಬೆಳಕು ರಂಗರೂಪ ಕಾದಂಬರಿ ಹಾಗೂ ಚಲನಚಿತ್ರದಲ್ಲಿ ಅಳವಡಿಸಿರುವ ಎರಡು ಕತೆಗಳ ಹದವಾದ ಮಿಶ್ರಣ ಹೊಂದಿದೆ. ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ನವಂಬರ್ ೧ ರಂದು ಈ ನಾಟಕ ಪ್ರದರ್ಶನಗೋಳ್ಳಲಿದೆ.
ಬೆಂಗಳೂರು ದಕ್ಷಿಣದ ಕಲಾಪ್ರಿಯರನ್ನು ಕಲಾಸೌಧಕ್ಕೆ ಸೆಳೆಯುವ ಧ್ಯೇಯೋದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಾದಂಬರಿ ಹಾಗೂ ಬೆಳ್ಳಿತೆರೆಯಲ್ಲಿ ಯಶಸ್ಸು ಕಂಡಿರುವ ಈ ಕಥೆ ಜನರ ಮನಮುಟ್ಟವಲ್ಲಿ
ಯಾವ ಶಂಕೆಯು ಇಲ್ಲ. ಸಾಮಾನ್ಯ ಜನರ ನಿರೀಕ್ಷೆಯನ್ನು ಮುಟ್ಟುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಎಲ್ಲ ಪ್ರಯತ್ನದ ನಂತರವು ರಂಗದ ಮೇಲೆ ಬರುವವರು ಡಾ. ರಾಜ್ ಮತ್ತು ಸರಿತಾ ಅಲ್ಲ ಎಂದು ಪ್ರೇಕ್ಷಕರಿಗೆ ನಂಬಿಸುವ ಸವಾಲು ನಮ್ಮ ಮುಂದಿದೆ. ಕಳೆದ ಎಂಟು ವರ್ಷಗಳಲ್ಲಿ ನಿರ್ದೇಶಿಸಿರುವ ನಾಟಕಗಳಲ್ಲಿ ಇದು ಅತಿ ಕ್ಲಿಷ್ಟವಾದ ನಾಟಕ ಇದಾಗಿದೆ ಎಂದು ಕಲಾಸೌಧ ಹಾಗೂ ನಾಟಕದ ನಿರ್ದೇಶಕರಾದ ಪಿ.ಡಿ. ಸತೀಶ್ ಚಂದ್ರ ರವರ ಅನಿಸಿಕೆ.
ಈ ನಾಟಕದಲ್ಲಿ ಒಂಬತ್ತು ಪಾತ್ರಗಳಿದ್ದು ಎಲ್ಲಾ ಪಾತ್ರಗಳು ಕತೆಯನ್ನು ಸಾಕಾರಗೊಳಿಸುವಲ್ಲಿ ಸಹಕಾರಿಯಾಗಲಿವೆ. ಹೆಚ್ಚಿನ ಮಾಹಿತಿಗಾಗಿ khkalasoudha@gmail.comಗೆ ಈ-ಮೇಲ್ ಮಾಡಿ ಅಥವಾ ಕಲಾಸೌಧದ ಆಫೀಸ್‌ಗೆ ಕರೆಮಾಡಿ 98804 87682 / 64505457.