ದೃಶ್ಯಕ್ಕೊಂದು ನುಡಿಗಟ್ಟು

ಕಲಾ ಸೌಧದ ಬಗ್ಗೆ

ಕೆ ಎಚ್ ಕಲಾ ಸೌಧ ಎಂದೇ ಖ್ಯಾತಿಯನ್ನು ಹೊಂದಿರುವ ಕೆಂಗಲ್ ಹನುಮಂತಯ್ಯ ಕಲಾ ಸೌಧವು ಈಗ ಬೆಂಗಳೂರು ದಕ್ಷಿಣದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ.  ಕಲಾ ಸೌಧವು ೩೦೦ ಸುಖಾಸನಗಳನ್ನು ಹೊಂದಿದ್ದು ಕೇಂದ್ರೀಕೃತ ಹವಾನಿಯಂತ್ರಣವನ್ನು ಹೊಂದಿದೆ. ಇನ್ನಿತರ ಪ್ರಮುಖ ಸೌಲಭ್ಯಗಳಲ್ಲಿ ಕಲಾ ಸೌಧದ ಬೆಳಕು, ಕ್ಯಾಟ್‌ವಾಕ್, ಬಾಲ್ಕನಿ ಆಸನ ವ್ಯವಸ್ಥೆ ಹಾಗು ಅಂಗವಿಕಲರಿಗೆ ಅನುಕೂಲಕರ ಪ್ರವೇಶದ್ವಾರವನ್ನು ಹೊಂದಿದೆ. ಪುಸ್ತಕದ ಮಳಿಗೆ, ಕ್ಯಾಂಟಿನ್‌ಗೆ ಸ್ಥಳ ಹಾಗೂ ೨೩೦೦ ಚದರ ಅಡಿ ಆರ್ಟ್ ಗ್ಯಾಲರಿ ಜಾಗವನ್ನು ಒಳಗೊಂಡಿದೆ. ರಾಮಾಂಜನೇಯ ದೇವಸ್ಥಾನದ ಸುತ್ತಮುತ್ತಲ ವಿಶಾಲವಾದ ಸ್ಥಳದಲ್ಲಿ ಪಾರ್ಕಿಂಗ್ ಸೌಲಭ್ಯಹೊಂದಿದೆ. ಪ್ರದರ್ಶನಕ್ಕೆ ಆಡಚಣೆಯಾಗದಂತೆ ೨೦೦ ಕೆ ವಿ ಎ ಜನರೇಟರ್ ಹೊಂದಿದೆ. ಕಲಾಸಕ್ತರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಾಡಿಗೆ ಪಡೆಯಬಹುದಾಗಿದೆ.  ಫೋರ‍್ತ್ ಕಾರ್ನರ್ ಕನ್ಸಲ್ಟೆಂಟ್ ಸಂಸ್ಥೆಯು ಬಿಬಿ‌ಎಂಪಿ ಯಿಂದ ಕಲಾಸೌಧವನ್ನು ಜನವರಿ ೨೦೧೦ ರಲ್ಲಿ ಗುತ್ತಿಗೆ ಪಡೆದಿದ್ದು, ಇದುವರೆಗೂ ೯೦ ಕ್ಕೂ ಹೆಚ್ಚು ನಾಟಕ, ನೃತ್ಯ, ಸಂಗೀತ ಹಾಗು ಸಿನಿಮಾ ಕಾರ‍್ಯಕ್ರಮಗಳು ಕಳೆದ ಎಂಟು ತಿಂಗಳಲ್ಲಿ ನಡೆದಿವೆ. 

ಮಾಧ್ಯಮ ಪ್ರತಿನಿಧಿ: ಸಲೀಲ ಕಪ್ಪನ್ ೯೯೮೦೧೮೮೯೩೮
ಹೆಚ್ಚಿನ ವಿವರಗಳಿಗಾಗಿ: ಸತೀಶ್ ಚಂದ್ರ ೯೮೪೫೦೩೧೪೧೩


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು