ದೇಶದ ಮಹತ್ವದ ದಿಗ್ದರ್ಶಕ ಗಿರೀಶ್ ಕಾಸರವಳ್ಳಿಯವರ ನೂತನ ಚಿತ್ರ ’ಕನಸೆಂಬೋ ಕುದುರೆಯನೇರಿ’ ಪ್ರದರ್ಶನ ಮತ್ತು ಸಂವಾದ ಇದೇ ಬರುವ ಅಕ್ಟೋಬರ್ ೧೭ ರಂದು ಆಯೋಜಿಸಲಾಗುವುದು.
ಸ್ಥಳ: ಪ್ರಿಯದರ್ಶಿನಿ ಚಿತ್ರ ಮಂದಿರ (ಬಾದಾಮಿ ಹೌಸ್)
ಹೆಚ್ಚಿನ ವಿವರಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು.
ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯುತ್ತಿರುವ ಯೋಗರಾಜ ಭಟ್ಟರ ’ಪಂಚರಂಗಿ’ ಚಿತ್ರದ ಸಂವಾದವನ್ನೂ ಈ ತಿಂಗಳಲ್ಲಿ ನಡೆಸಲು ಯೋಜಿಸಲಾಗಿದೆ. ದಿನಾಂಕ ಮತ್ತು ಸ್ಥಳವನ್ನ ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಗಿರಿರಾಜ್, ಕನ್ನಡದ ಭರವಸೆಯ ನಿರ್ದೇಶಕ. ಕೃಷ್ಣನ ಲವ್ ಸ್ಟೋರಿ, ಮೊಗ್ಗಿನ ಮನಸಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಇವರು ಇತ್ತೀಚೆಗೆ ನವಿಲಾದವರು ಎಂಬ ಚಿತ್ರ ನಿರ್ಮಿಸಿದ್ದಾರೆ. ತಮಗಿರುವ ಸೀಮಿತ ಅವಕಾಶಗಳಲ್ಲಿ ಒಂದು ಅದ್ಭುತವೇ ಎನ್ನಬಹುದಾದ ಚಿತ್ರ ಮಾಡಿದ್ದಾರೆ. ಸಂವಾದ ಡಾಟ್ ಕಾಂ , ಗಿರಿರಾಜ್ ರ ಈ ಪ್ರಯತ್ನವನ್ನ ಬೆಂಬಲಿಸುವುದು ತನ್ನ ಕರ್ತವ್ಯವೆಂದು ಭಾವಿಸಿದೆ. ಈ ಚಿತ್ರದ ಪ್ರದರ್ಶನವನ್ನ ಮತ್ತು ಸಂವಾದವನ್ನ ಕೂಡ ಸದ್ಯದಲ್ಲೇ ನಡೆಸಲಾಗುವುದು.
ಮೇಲಿನ ಮೂರೂ ಚಿತ್ರ-ಸಂವಾದ ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳನ್ನ ನಿರೀಕ್ಷಿಸಿ.
ಪ್ರಕಟಣೆಯ ದಿನಾಂಕ: ೧೪ನೇ ಸೆಪ್ಟೆಂಬರ್ ೨೦೧೦