ದೃಶ್ಯಕ್ಕೊಂದು ನುಡಿಗಟ್ಟು

ಕಿರು ಮತ್ತು ಡಾಕ್ಯುಮೆಂಟರಿ ಚಿತ್ರಗಳ ಸ್ಪರ್ಧೆ

ಕಿರು ಚಿತ್ರಗಳು ಮತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಲು ಆಸಕ್ತಿಯಿರುವ ಸ್ನೇಹಿತರಿಗೊಂದು ಆಹ್ವಾನ.
ಏನೆಂದರೆ ಅಹಮದಾಬಾದಿನ ರಾಷ್ಟ್ರೀಯ ವಿನ್ಯಾಸ ಸಂಸ್ಥೆಯ ಚಲನಚಿತ್ರ ಸಂವಹನ ವಿಭಾಗ "ಅಲ್ಪವಿರಾಮ ೨೦೧೧" ಎಂಬ ಶೀರ್ಷಿಕೆಯ ಕಿರು ಮತ್ತು ಡಾಕ್ಯುಮೆಂಟರಿ ಚಿತ್ರಗಳ ಸ್ಪರ್ಧೆಯೊಂದನ್ನು ಏರ್ಪಡಿಸಿದೆ.
ಸ್ಪರ್ಧೆಯ ಕೆಲವು ರೂಲ್ಸುಗಳು ಇಂತಿವೆ:

ಸಿನಿಮಾ 3ರಿಂದ 30ನಿಮಿಷಗಳ ಅವಧಿಯದ್ದಾಗಿರಬೇಕು.
1ನೇ ಜನವರಿ 2009ರಿಂದೀಚೆಗೆ ನಿರ್ಮಾಣವಾಗಿರಬೇಕು.
ನಿರ್ದೇಶಕನ ವಯಸ್ಸು ಮೂವತ್ತು ಮೀರಿರಬಾರದು (ಪರವಾಗಿಲ್ಲ ಯುವಕರನ್ನು ಗುರುತಿಸುವ ಕ್ರಮ ಚೆನ್ನಾಗಿದೆ, 30 ದಾಟಿದವರೆಲ್ಲಾ ಪ್ರೌಢರೇ ಸರಿ)
ನಿರ್ದೇಶಕ SAARC(ಭಾರತ ಮತ್ತು ಇತರೆ) ದೇಶದವನಾಗಿರಬೇಕು.alpavirama 2001 Short Film and Documentary competition
ಚಿತ್ರದ ವಸ್ತು ಭಾರತದಂಥಹ ಆಗ್ನೇಯ ಏಷ್ಯಾ ರಾಷ್ಟ್ರಗಳ ಜನಜೀವನದ ಕುರಿತಾಗಿರಬೇಕು.
ಅನಿಮೇಷನ್ ಚಿತ್ರಗಳನ್ನು ಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ.

ಸ್ಪರ್ಧೆಗೆ ಚಿತ್ರ(DVD)ಗಳನ್ನು ಅಕ್ಟೋಬರ್ 4, 2010ರ ಹೊತ್ತಿಗೆ ತಲುಪುವಂತೆ ಕಳುಹಿಸಬೇಕು.

ಸ್ಪರ್ಧೆಯ ನಿರ್ಣಾಯಕರು ಚಿತ್ರರಂಗಕ್ಕೆ ಸಂಬಂಧಿಸಿದ ಖ್ಯಾತನಾಮರಾಗಿರುತ್ತಾರೆ.

ಗೆದ್ದರೆ ಏನು ಸಿಗುತ್ತೆ?
ಸ್ಪರ್ಧೆಯಲ್ಲಿ ಗೆದ್ದ ಸಿನಿಮಾಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಮುಖ್ಯವಾಗಿ ನಗದು ಬಹುಮಾನವಿರುತ್ತೆ(ಎಷ್ಟೂಂತ ಹೇಳಿಲ್ಲ-ಬುದ್ದಿವಂತರು!).
ಸ್ಪರ್ಧೆಗೆ ಆಯ್ಕೆಯಾದ ಎಲ್ಲಾ ಸಿನಿಮಾಗಳಿಗೂ ಸರ್ಟಿಫಿಕೇಟ್ ಕೊಡಲಾಗುತ್ತೆ.

 ಸ್ಪರ್ಧೆಯ ಇನ್ನಿತರೆ ವಿವರ ಮತ್ತು ಫಾರ್ಮನ್ನು ಇಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಿ

 

published on: 20-09-2010


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು