ಕಾಸರವಳ್ಳಿ ಕುಟುಂಬ ಈ ದು:ಖದ ಘಳಿಗೆಯಲ್ಲಿ ಧೈರ್ಯ ತಾಳಲಿ
ಕಳೆದ ಹಲವು ದಿನಗಳಿಂದ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ಅವರು ಕೋಮಾವಸ್ಥೆ ತಲುಪಿದ್ದರು. ವಾರದ ಹಿಂದೆ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಲೆಂದು ಗಿರೀಶ್ ಅವರಿಗೆ ಕರೆ ಮಾಡಿದಾಗ ಕೇಳಿದ್ದು ಅವರ ದುಃಖಪೂರಿತ ಆರ್ದ್ರ ಧ್ವನಿ. ಮುಂದೆ ಹೆಚ್ಚು ಮಾತನಾಡಲಾಗದೆ ಫೋನ್ ಕಟ್ ಮಾಡಿದ್ದರು. ಕಳೆದ ಮೂರು ವರ್ಷಗಳಿಂದ ಕಾಸರವಳ್ಳಿ ಮನೆಯ ಬಳಿ ವಾಸಿಸುತ್ತಿರುವ ಕಾರಣ ಅವರ ಮನೆ, ಜನ ಇತ್ಯಾದಿ ನಮ್ಮ ಗಮನಕ್ಕೆ ಬೀಳುತ್ತಿದ್ದುದು ಆಕಸ್ಮಿಕವೇನಲ್ಲ. ಅವರ ಮನೆ ಮುಂದಿನ ಟೀ ಅಂಗಡಿ ನಮಗೆ ಮರಮಾಪ್ತ ಜಾಗ. ಇರಲಿ ಅವರ ಮನೆ "kasaravallis" ಮತ್ತೆ ಮೊದಲಿನಂತಾಗಲಿ. ವಿಶೇಷ ಸೂಚನೆ: ಅಕ್ಟೋಬರ್ ೧೭ರಂದು ಆಯೋಜಿಸಲಾಗಿದ್ದ ’ಕನಸೆಂಬ ಕುದುರೆಯನೇರಿ’ ಚಿತ್ರದ ಪ್ರದರ್ಶನ ಮತ್ತು ಸಂವಾದವನ್ನು ರದ್ದುಗೊಳಿಸಲಾಗಿದೆ. 27-09-2010
|
|