ದೃಶ್ಯಕ್ಕೊಂದು ನುಡಿಗಟ್ಟು

ಕಲಾಸೌಧದಲ್ಲಿ 'ಹುಡುಕಾಟ' ನಾಟಕ

hudukaata kannada playವಿನಯ್ ಶೇಷಾದ್ರಿ ನಿರ್ದೇಶನದ ಡುಂಡಿರಾಜ್ ರಚಿತ "ಹುಡುಕಾಟ" ನಾಟಕವನ್ನು ’ಕಲೆ’ ತಂಡ ದಿನಾಂಕ 07 - 10 - 2010ರಂದು  ಪ್ರಸ್ತುತಪಡಿಸಲಿದೆ.

ವಿವರಗಳು ಕೆಳಕಂಡಂತಿವೆ.


ಎಲ್ಲಿ: ಕೆ ಎಚ್ ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ

ದಿನಾಂಕ: 07 - 10 - 2010ರಂದು

ಸಮಯ: 7-30PM - 8.30PM

ತಾಂತ್ರಿಕ ತಂಡದ ವಿವರ:

ನಿರ್ದೇಶನ: ವಿನಯ್ ಶೇಷಾದ್ರಿ

ಬೆಳಕು:  ಅರುಣ್ ಮೂರ್ತಿ, ರಾಘವೇಂದ್ರ ರಾಜೇ ಆರಸ್

ಸಂಗೀತ : ಸುಜಯ್ ಶಾಸ್ತ್ರಿ, ರಾಜಗುರು ಹೊಸಕೋಟೆ

ನಿರ್ಮಾಣ:  ಅನುನಿತ್ಯಾ, ವಾಸುಕೇಶನ್, ಸಿದ್ದಾರ್ಥ ಯು ಬಿ

ಟಿಕೆಟ್ ಬೆಲೆ:  100/-

ಟಿಕೆಟ್‍ಗಳಿಗೆ ಸಂಪರ್ಕಿಸಿ: 99001 92272,  99001 92273

ನಾಟಕದ ಬಗೆಗೆ:

ಮನುಷ್ಯನ ದ್ವಂದ್ವ, ಗೊಂದಲ, ತಡಕಾಟಗಳ ಜೀವನದಲ್ಲಿ ಅವನು ಆ ದಾರಿ ಹಿಡಿಯುವುದೋ ಅಥವಾ ಈ ದಾರಿ ಹಿಡಿಯುವುದೋ ಎಂದು ಪರದಾಡುವ ಸ್ಥಿತಿಗೆ ತಲುಪುತ್ತಾನೆ. ಈ ಮಧ್ಯೆ ಅವನನ್ನು ನಿಯಂತ್ರಿಸುವ ಒಂದು ಯೋಚನೆ ಆಗಾಗ ಮುಂಬರುತ್ತದೆ. ಇವೆಲ್ಲವನ್ನು ಮೀರಿದ ಒಂದು ಯೋಚನೆ ಅಲ್ಲಲ್ಲಿ ಅಲೆದಾಡುತ್ತಿರುತ್ತದೆ.  ತನ್ನ ಜೀವನದುದ್ದಕ್ಕೂ ಹುಡುಕಾಟ ನಡೆಸುವ ಮನುಷ್ಯ, ಮೊದಲಿಗೆ ತಾನು ಕಳೆದುಕೊಂಡಿರುವುದಾದರೂ ಏನು ಎಂದು ಹುಡುಕಾಡುವ ಭರದಲ್ಲಿ ಅದು ಏನೆಂಬುದನ್ನೇ ಮರೆತಿರುತ್ತಾನೆ. 
     
 ಆ ದಾರಿಯಲ್ಲಿ ಹೋಗುವುದೇ ಉತ್ತಮ ಎಂದು; ಆಧ್ಯಾತ್ಮ, ದೇವರು ಎಂದೆಲ್ಲ ಯೋಚಿಸುವ “ಆ ದಾರಿಯವ”. ಇದು ಸುಳ್ಳು, ಇದರಲ್ಲಿ ಹುರುಳಿಲ್ಲ, ಕಣ್ಣಿಗೆ ಕಾಣುವುದೇ ಸತ್ಯ ಎನ್ನುವ “ಈ ದಾರಿಯವ”. ಇವರ ನಡುವೆ ನುಸುಳಿ ಇವರ ಆಲೋಚನೆಗಳಿಗೆ ಹಿಡಿತ ತರುವ ನಿರ್ದೇಶಕ. ಇವೆಲ್ಲವನ್ನೂ ಮೀರಿದ ಕೋಡಂಗಿ - ಇವುಗಳು ಈ ನಾಟಕದ ಪಾತ್ರಗಳು.
ಎಚ್. ಡುಂಡಿರಾಜರು ಇವೆಲ್ಲವನ್ನೂ ಅತಿ ಮನರಂಜನಾತ್ಮಕ ರೀತಿಯಲ್ಲಿ ತಲುಪಿಸಿದ್ದಾರೆ. ರಜನಿಕಾಂತ್ ’ಆ ದಾರಿಯವ’ನಾಗಿದ್ದಾರೆ. ಪ್ರದೀಪ್. ಬಿ.ವಿ. ’ಈ ದಾರಿಯವ’. ಲೋಕೇಶ್ ಬಸವಟ್ಟಿ ನಿರ್ದೇಶಕನಾಗಿ ಹಾಗು ಸುಜಯ್ ಶಾಸ್ತ್ರಿ ಕೋಡಂಗಿಯಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ.
       ನಾಂದಿ ಪದದಿಂದ ಆರಂಭವಾಗುವ ನಾಟಕ, ನಡುವೆ ಎರಡು ಹಾಡುಗಳನ್ನು ತೆರೆಡಿಡುತ್ತವೆ. ಅಂತ್ಯಕ್ಕೆ ಮಂಗಳ ಪದವೂ ಇದೆ. ನಡುವೆ ಬರಹದಲ್ಲಿರದ ಎರಡು ವಿಶೇಷ ಪಾತ್ರಗಳು ಬಂದು ಮನರಂಜಿಸಿ ಹೋಗುತ್ತವೆ.
       ಈ ನಾಟಕದ, ಪಾತ್ರಗಳ ಹುಡುಕಾಟ ಒಂದು ಘಂಟೆಗಳ ಮನೋರಂಜನೆ ಎನ್ನುವುದು ಮಾತ್ರ ಸತ್ಯ.
 

 

 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು