ದೃಶ್ಯಕ್ಕೊಂದು ನುಡಿಗಟ್ಟು

’ಬೆಟ್ಟದ ಜೀವ’- ಶೇಷಾದ್ರಿ ಮುಂದಿನ ಚಿತ್ರ

ಜನಪ್ರಿಯ ಚಿತ್ರಗಳಶಿವರಾಮ ಕಾರಂತರ ‘ಬೆಟ್ಟದ ಜೀವ, ಪಿ.ಶೇಷಾದ್ರಿ ಚಿತ್ರ, p sheshadri, ಗೋಪಾಲಕೃಷ್ಣ ಪೈನ್ನು ನೋಡುವುದೆಂದರೆ ಮಹಾ ‘ಬೋರಿನ ಸಂಗತಿ.’ ಏಕೆಂದರೆ, ಚಿತ್ರದ ಅಂತ್ಯವೇನೆಂದು ಈಗಾಗಲೇ ಗೊತ್ತಾಗಿ ಹೋಗಿರುತ್ತದೆ"- ನಿರ್ದೇಶಕ ಅದೂರ್ ಗೋಪಾಲಕೃಷ್ಣನ್ ಇತ್ತೀಚೆಗಿನ ಸಂದರ್ಶನವೊಂದರಲ್ಲಿ (ಡೆಕ್ಕನ್ ಹೆರಾಲ್ಡ್: ೦೩-೧೦-೨೦೧೦) ಉದ್ಗರಿಸುತ್ತಾರೆ. ಕಾದಂಬರಿಯೊಂದನ್ನು, ಚಿತ್ರವೊಂದು ಆಧರಿಸಿದೆಯೆಂದರೆ, ಚಿತ್ರದ ಪ್ರಧಾನ ಘಟನಾವಳಿಗಳು, ವಸ್ತು, ಆಶಯ, ಅಂತ್ಯವೆಲ್ಲವೂ ಪ್ರೇಕ್ಷಕನಿಗೆ ತಿಳಿದು ಹೋಗಿರುತ್ತದೆ. ಇಂತಹ ಸನ್ನಿವೇಶವೊಂದು ಕೌತುಕವನ್ನು ಕಾಯ್ದಿಟ್ಟುಕೊಳ್ಳಬಲ್ಲದೆ?  ಖಂಡಿತವಾಗಿಯೂ. ಅಕ್ಷರಗಳು, ದೃಶ್ಯಗಳಾಗುವ ಮಾಂತ್ರಿಕತೆ ಎಂದೆಂದಿಗೂ ಬೆರಗನ್ನು ತರಬಲ್ಲದು. ಸಾಹಿತ್ಯವೇ ಬೇರೆ, ಸಿನಿಮಾನೆ ಬೇರೆ. ಎರಡನ್ನೂ ಬೇರೆ ಬೇರೆ ನೆಲೆಯಲ್ಲಿ ಗ್ರಹಿಸ ಬೇಕು.

ಇಷ್ಟೆಲ್ಲ, ಪ್ರಸ್ತಾವನೆ ಏಕೆಂದರೆ, ಕನ್ನಡದ ಹಿರಿ ಜೀವಗಳಲ್ಲೊಬ್ಬರಾದ ಶಿವರಾಮ ಕಾರಂತರ ‘ಬೆಟ್ಟದ ಜೀವ’ ಕೃತಿಯನ್ನು ತೆರೆಗೆ ಅಳವಡಿಸಲಾಗುತ್ತಿದೆ. ಅಳವಡಿಸುತ್ತಿರುವವರು: ನಿರ್ದೇಶಕ ಪಿ.ಶೇಷಾದ್ರಿ. ಚಿತ್ರಕಶಿವರಾಮ ಕಾರಂತರ ‘ಬೆಟ್ಟದ ಜೀವ, ಪಿ.ಶೇಷಾದ್ರಿ ಚಿತ್ರ, ಗೋಪಾಲಕೃಷ್ಣ ಪೈತೆ ರಚನೆಯ ಚಟುವಟಿಕೆಯ ಕೆಲಸ ಭರದಿಂದ ಸಾಗಿದೆ. ಶೇಷಾದ್ರಿಯವರೊಂದಿಗೆ, ಚಿತ್ರರಚನೆಯಲ್ಲಿ ಕೈ ಜೋಡಿಸಿರುವವರು, ಈ ಬಾರಿಯ ಚಿತ್ರಕತೆ ವಿಭಾಗದ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ರವರು.

ಪಾತ್ರವರ್ಗಕ್ಕೆ ಹಾಗು ಇತರ ತಾಂತ್ರಿಕ ವರ್ಗಕ್ಕೆ ಆಯ್ಕೆ ಅಂತಿಮಗೊಂಡಿಲ್ಲವಾದರೂ ದತ್ತಣ್ಣನವರು ಪ್ರಧಾನ ಪಾತ್ರದಲ್ಲಿರುವುದು ಖಚಿತವಾಗಿದೆ. ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ "ಕನಸೆಂಬ ಕುದುರೆಯನೇರಿ" ಅತ್ಯುತ್ತಮ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಗಳಿಸಿದ  ಬಸಂತಕುಮಾರ್ ಪಾಟೀಲ್‌ರವರೇ ‘ಬೆಟ್ಟದ ಜೀವ’ದ ನಿರ್ಮಾಪಕರು.

ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ "ಬೆಟ್ಟದ ಜೀವ"ವೂ ನಿಲ್ಲಲಿದೆ ಎಂದೆನ್ನುವ ಭರವಸೆ ‘ಸಂವಾದ ಡಾಟ್ ಕಾಂ’ ಬಳಗಕ್ಕಂತೂ ಇದೆ.

ನವೆಂಬರ್ ಕೊನೆ ವೇಳೆಗೆ ಚಿತ್ರ ತೆರೆ ಕಾಣುವ ಸಾಧ್ಯತೆ ಇದೆ.

03-10-2010


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು