ದೃಶ್ಯಕ್ಕೊಂದು ನುಡಿಗಟ್ಟು

ನನ್ನ ಚಿತ್ರದ ಬಗ್ಗೆ ನಾನೂ ನೋಡದ ಆಯಾಮಗಳು ಗೋಚರಿಸಿದವು - ಗಿರಿರಾಜ್

ನವಿಲಾದವರು, navilaadavaru, idu sadhya, giriraj, shshank. krishnan love story, pancharangi ಗಾಂಧಿ ಜಯಂತಿಯಂದು  ಸಂವಾದ ಡಾಟ್ ಕಾಂನವರು ಆಯೋಜಿಸಿದ್ದ  ನನ್ನ ಚಿತ್ರ, 'ನವಿಲಾದವರು’  ಪ್ರದರ್ಶನ ಮತ್ತು ಸಂವಾದದ ಕುರಿತು ನನ್ನ ಅನಿಸಿಕೆಗಳು ಈ ರೀತಿ ಇವೆ.

ಮೊದಲನೆಯದಾಗಿ, ಈ ಸಲದ ಚಿತ್ರ ಪ್ರದರ್ಶನಕ್ಕೆ ಬಂದಂತವರ ಸಂಖ್ಯೆ ನನ್ನ ಹಿಂದಿನ ಚಿತ್ರ ಪ್ರದರ್ಶನಕ್ಕೆ ಬಂದಂತಹ ಜನರ ಸಂಖ್ಯೆಗಿಂತ ಅಧಿಕವಾಗಿತ್ತು. ಇದು ಸಂವಾದ ಡಾಟ್ ಕಾಂನವರ ಸಂಘಟನೆಯ ಫಲ. ನನ್ನ ಚಿತ್ರವನ್ನು ಸಂಪೂರ್ಣ ಭಿನ್ನ ಚಿತ್ರವೆಂದು ಮಾರ್ಕೆಟಿಂಗ್ ಮಾಡಿ, ಬಿಜಾಪುರ, ರಾಯಚೂರಿನಂತಹ ದೂರದ ಜಾಗಗಳಿಂದ ಜನರು ಬರುವಂತೆ ಮಾಡಿದ್ದರು.

'ಸಂವಾದ’ದ ಚರ್ಚೆಯ ವಿಷಯವಾಗಿ ಹೇಳುವುದಾದರೆ, ಶ್ರೀ ಶೇಖರಪೂರ್ಣರ ವಿದ್ವತ್ಪೂರ್ಣ ವಿಶ್ಲೇಷಣೆ ನೋಡುಗರಿಗೆ ನೋಡಿದ ಚಿತ್ರವನ್ನು ಇನ್ನೂ ಭಿನ್ನ ನೆಲಗಟ್ಟಲ್ಲಿ ನೋಡಲು ಪ್ರೇರೇಪಿಸಿತು. ನಾನೂ ನೋಡದ ಎಷ್ಟೋ ಆಯಾಮಗಳು ನನಗೆ ಗೋಚರಿಸಿದವು

ಅತಿಥಿಗಳಾಗಿ ಬಂದಿದ್ದಂತಹ ಶ್ರೀ ಸುಚೇಂದ್ರ ಪ್ರಸಾದರ ಮಾತುಗಳು ನನಗೆ ಅರ್ಥವಾಗಿಲ್ಲ.

ಪ್ರೇಕ್ಷಕರ ವರ್ಗದವರು ನಡೆಸಿದ ಸಂವಾದ ಅವರು ಸಿನಿಮಾವನ್ನುನವಿಲಾದವರು, navilaadavaru, idu sadhya, giriraj, shshank. krishnan love story, pancharangi ಕೂಲಂಕುಷವಾಗಿ ನೋಡಿದ್ದಕ್ಕೆ ಸಾಕ್ಷಿಯಾಗಿತ್ತು.

ಮುಖ್ಯವಾಗಿ, ಇದು ಸಂಘಟಕರ ಸಂಘಟನಾ ಕೌಶಲದ ಸಾಕ್ಷಿಯಾಗಿ ಅದು ನನ್ನ ಸಿನಿಮಾದಿಂದಾಯಿತು ಎನ್ನುವುದರ ಬಗ್ಗೆ ನನಗೆ ಅದಮ್ಯ ಸಂತಸವಿದೆ.

ನನ್ನ ಸಿನಿಮಾವನ್ನು ಮತ್ತೊಮ್ಮೆ ಪ್ರದರ್ಶನ ಹಾಗು ಸಂವಾದದ ಮೂಲಕ ಒರೆಗೆ ಹಚ್ಚಬೇಕಾಗಿ ವಿನಂತಿ. 

-ಗಿರಿರಾಜ್ ಬಿ ಎಂ,  `ನವಿಲಾದವರು’ ಚಿತ್ರದ ನಿರ್ದೇಶಕರು

07-10-2010

 

 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು