ದೃಶ್ಯಕ್ಕೊಂದು ನುಡಿಗಟ್ಟು

ಎಂಧಿರನ್ ಅಮಲು

ಕಳೆದ ಶುಕ್ರವಾರ ರಜನೀಕಾಂತ್ ರ ಹೊಸ ಚಿತ್ರ "ಎಂಧಿರನ್ ’ಎಂಧಿರನ್,endiran, rajanikanth, iashwary rai’ ಬಿಡುಗಡೆಯಾಗಿದೆ. ಸುಮಾರು 200 ಕೋಟಿ ರೂಪಾಯಿ ವೆಚ್ಚದ ಈ ಸಿನೆಮಾದ 3000 ಕ್ಕೂ ಹೆಚ್ಚು ಪ್ರಿಂಟ್ ಗಳು ಜಗತ್ತಿನಾದ್ಯಂತ ತಲುಪಿದೆ.  ಒಂದು ಮೂಲದ ಪ್ರಕಾರ ರಜನೀಕಾಂತ್ ರ ಸಂಭಾವನೆ ಸುಮಾರು 45 ಕೋಟಿ (ಜೊತೆಗೆ ಲಾಭಾಂಶ) ಯಾದರೆ, ಐಶ್ವರ್ಯಾ ರೈ ಸಂಭಾವನೆ 6 ಕೋಟಿ.

(ಕಳೆದ ಶನಿವಾರ ಸಂವಾದ ಡಾಟ್ ಕಾಂ, ‘ನವಿಲಾದವರು’ ಎಂಬ ಚಲನಚಿತ್ರದ ಪ್ರದರ್ಶನ ಏರ್ಪಡಿಸಿತ್ತು. ಈ ಚಿತ್ರದ ಒಟ್ಟು ವೆಚ್ಚ ೩೫ ಸಾವಿರ ರೂಪಾಯಿಗಳು.)

ಸುಮಾರು ೨೦೦ ಕೋಟಿ ಬಂಡವಾಳವನ್ನ ೧೫೦ ನಿಮಿಷದ ಸಿನೆಮಾಗೆ ಹೂಡಲಾಗಿದೆ. (ಪ್ರತಿ ನಿಮಿಷದ ವೆಚ್ಚ ಒಂದು ಕೋಟಿಗೂ ಮಿಗಿಲು) ಅಂದ ಮೇಲೆ, ನಿರ್ಮಾಪಕರು ಬಂಡವಾಳವನ್ನ ಹಿಂತೆಗೆಯುವುದರ ಜೊತೆಗೆ ಲಾಭವನ್ನೂ ಕಂಡುಕೊಳ್ಳಬೇಕಾಗುತ್ತದೆ. ನಿರ್ಮಾಪಕ ಈ ಬಂಡವಾಳವನ್ನ ಹೂಡಿರುವುದು ರಜನೀಕಾಂತ‌ರ ಅಭಿಮಾನಿಗಳನ್ನ ನಂಬಿ. ನವಿಲಾದವರು,navilaadavaru, giriraj b m, shashank,

ರಜನೀಕಾಂತ್ ಭಾರತ ಚಿತ್ರರಂಗದ ಜನಪ್ರಿಯ ನಟ. ದಕ್ಷಿಣ ಭಾರತದಲ್ಲಿ ಅವರನ್ನ ಅಮಿತಾಭ್‌ರ ಪರ್ಯಾಯವಾಗಿ ನೋಡಲಾಗುತ್ತದೆ. ಭಾರತದ ಅತಿ ದುಬಾರಿ ಚಿತ್ರವೊಂದು , ಬಾಲಿವುಡ್ ನ ಹಿಂದಿಕ್ಕಿ ತಮಿಳು ಚಿತ್ರರಂಗದಿಂದ ಬಂದಿರುವುದು ಕುತೂಹಲಕಾರಿ.

 ರಜನಿಕಾಂತ್ ರ ಹೆಚ್ಚಿನ ಅಭಿಮಾನಿಗಳು ಬಡ ಮಧ್ಯಮ ಮತ್ತು ಕೆಳವರ್ಗದವರು. ಒಬ್ಬ ಭಾರತೀಯ ನ ಸರಾಸರಿ ಆದಾಯ ತಿಂಗಳಿಗೆ ಮೂರು ಸಾವಿರ. ಅಂದರೆ ದಿನಕ್ಕೆ ೧೦೦ ರೂಪಾಯಿ. ಈ ಚಿತ್ರಕ್ಕೆ ಬಹುವಾಗಿ ಬೇಡಿಕೆ ಇರುವುದರಿಂದ ಚಿತ್ರ ಮಂದಿರಗಳೇ, ಟಿಕೆಟ್ ದರವನ್ನ ಮೂರು ಪಟ್ಟು ಹೆಚ್ಚಿಸಿವೆ. ಅಂದರೆ, ನೂರು ರೂಪಾಯಿ ಇರುವ ಕಡೆ ಮುನ್ನೂರು ರೂಪಾಯಿ ಕೊಟ್ಟು ಸಿನೆಮಾ ನೋಡಬೇಕಾಗಿದೆ(ಬ್ಲ್ಯಾಕ್ ಟಿಕೆಟ್ ನ ಬಿಟ್ಟು). ಜೊತೆಗೆ ಚಿತ್ರ ಮಂದಿರಗಳ ಪಾನೀಯ, ಮತ್ತು ಇತರ ತಿನಿಸುಗಳ ಬೆಲೆ ಕೂಡ ಹೆಚ್ಚಿಸಲಾಗಿದೆ. ಒಂದು ಕುಟುಂಬ (ನಾಲ್ಕು ಜನ ಅಂದಿಟ್ಟುಕೊಳ್ಳೋಣ) ಎಂಧಿರನ್ ಸಿನೆಮಾವನ್ನ ಒಮ್ಮೆ ನೋಡಬೇಕೆಂದರೆ ಸುಮಾರು ೨೦೦೦ ರೂಪಾಯಿಗಳನ್ನ ಸಾಮಾನ್ಯ ಚಿತ್ರಮಂದಿರಗಳಲ್ಲಿ ವ್ಯಯಿಸಬೇಕಾಗುತ್ತದೆ.

ಇದರ ಜೊತೆ ಜೊತೆಗೆ ಈ ಸಿನೆಮಾ ಒಂದು ಐತಿಹಾಸಿಕ ಘಟನೆಯಂತೆ ಅಮಿತಾಭ್ ಆದಿಯಾಗಿ ಎಲ್ಲ ಸೆಲೆಬ್ರಿಟಿಗಳು, ಮಾಧ್ಯಮದವರು ಸಾರುತ್ತಿವೆ. ಚಿತ್ರಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿಗಳನ್ನ ರೋಚಕವಾಗಿ ಹರಿ ಬಿಡಲಾಗಿದೆ. ಹೀಗೆ ಇಡೀ ದೇಶವೇ ಈ ಚಿತ್ರಕ್ಕೆ ಪುಕ್ಸಟ್ಟೆ ಜಾಹೀರಾತು ಕೊಡುವುದರ ಮೂಲಕ ನಿರ್ಮಾಪಕರಿಗೆ ಬಂಡವಾಳವನ್ನ ಹಿಂತೆಗೆದುಕೊಡುವಲ್ಲಿ ಸಹಕರಿಸುತ್ತಿವೆ.

ಎಂಧಿರನ್ ಚಿತ್ರದ ಅಬ್ಬರದಲ್ಲಿ, ಎಲ್ಲ ಭಾರತೀಯ ಭಾಷೆಗಳ ಇತರ ಚಿತ್ರ ನಿರ್ಮಾಪಕರು ತಮ್ಮ ಚಿತ್ರವನ್ನ ಬಿಡುಗಡೆ ಮಾಡದೇ ವ್ಯಯಿಸಿರುವ ಬಂಡವಾಳಕ್ಕೆ ಬಡ್ಡಿ ಕಟ್ಟಿಕೊಂಡು ಸುಮ್ಮನಾಗಿದ್ದಾರೆ.

ಎಂಧಿರನ್ ಗಳಿಸಬಹುದಾದ ೩೦೦-೪೦೦ ಕೋಟಿ ಹಣದಲ್ಲಿ ಬಡ ಪ್ರೇಕ್ಷಕ ಮಾತ್ರವಲ್ಲ, ಬಿಡುಗಡೆ ಮಾಡಲಾಗದೆ ಲಕ್ಷಾಂತರ ಕಳಕೊಂಡ ಬಡ ನಿರ್ಮಾಪಕರ ಪಾಲೂ ಇದೆ!

08-10-2010


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು