ದೃಶ್ಯಕ್ಕೊಂದು ನುಡಿಗಟ್ಟು

Sleuth

sleuthಸ್ಲೂತ್ ಸಿನೆಮಾ ಆಂಥೋನಿ ಶೆಫರ್ ಎಂಬ ಜ್ಯೂ ನಾಟಕಕಾರನ ಶ್ರೇಷ್ಠ ಮತ್ತು ಜನಪ್ರಿಯ ನಾಟಕಗಳಲ್ಲೊಂದು. ೧೯೭೦ ರಲ್ಲಿ ಬಂದ ಈ ನಾಟಕ ಟೋನಿ ಪ್ರಶಸ್ತಿಯನ್ನೂ ಬಾಚಿಕೊಂಡಿತಲ್ಲದೇ ಲಂಡನ್ನಿದಾದ್ಯಂತ ಅಪಾರ ಜನಪ್ರಿಯತೆಗಳಿಸಿತ್ತು. ೯೦ ರ ದಶಕದಲ್ಲಿ ಈ ರಂಗಪ್ರಯೋಗವನ್ನ ಬೆಂಗಾಲಿ ಭಾಷೆಗಿಳಿಸಿದ ಸೌಮಿತ್ರ ಚಟರ್ಜಿ ಮತ್ತು ಕೌಶಿಕ್ ಸೇನ್ ಇದನ್ನ ಟಿಕ್ ಟಿಕಿ (ಹಲ್ಲಿ) ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಪ್ರದರ್ಶಿಸಿದರು.

೧೯೭೨ ರಲ್ಲಿ ಸ್ಲೂತ್ ಚಲನಚಿತ್ರವಾದಾಗ, ಅಂಥೋನಿ ಶೆಫರ್ ನೇ ಚಿತ್ರ ಕಥೆ ಬರೆದ. ೧೯೭೨ ರ ಹಿಚ್ ಕಾಕ್ ನ ಥ್ರಿಲ್ಲರ್ ಫ್ರೆಂಜ್ ಗೂ ಇವನೇ ಚಿತ್ರಕಥೆ ಬರೆದದ್ದು.

ಸ್ಲೂತ್ ಅನ್ನ ಮೊದಲು ಬೆಳ್ಳಿತೆರೆಗೆ ಇಳಿಸಿದವನು ಜೊಸೆಫ್ ಮಾಂಕವಿಜ್. ಶೆಕ್ಷಪಿಯರ್ ಸಿನೆಮಾಗಳಲ್ಲೇ ಅತ್ಯುತ್ತಮವಾದದ್ದು ಎಂದು ಪರಿಗಣಿಸಲ್ಪಟ್ಟ ೧೯೫೩ ರ ಜೂಲಿಯಸ್ ಸೀಸರ್ ನ ನಿರ್ದೇಶಕ ಕೂಡ ಇವನೇ. ಸ್ಲೂತ್ ಮಾಡುವ ಮೊದಲೇ ಈತ ೧೯೫೦ ರಲ್ಲಿ ’ಆಲ್ ಎಬೌಟ್ ಈವ್’ ಎಂಬ ಚಿತ್ರಕ್ಕೆ ಆಸ್ಕರ್ ಕೂಡ ಪಡೆದಿದ್ದ.

ಕೇವಲ ಎರಡೇ ಪಾತ್ರಗಳು ಇಡೀ ಚಿತ್ರವನ್ನ ಹಿಡಿದಿಡುವ ಈ ಅಸದೃಶ ಸಿನೆಮಾದ ಹಿಂದೆ ಈ ಇಬ್ಬರ ಶ್ರಮವಲ್ಲದೇ, ಆ ಪಾತ್ರಗಳಲ್ಲಿ ಅಭಿನಯಿಸಿದ ಇಬ್ಬರು ಮಹಾನ್ ಬ್ರಿಟಿಶ್ ಕಲಾವಿದರ ಕೊಡುಗೆಯೂ ಇದೆ.

ಮೈಕೆಲ್ ಕೇನ್ ಮತ್ತು ಲಾರೆನ್ಸ್ ಓಲಿವರ್ ಆ ಇಬ್ಬರು ನಟರು.

ಇದಾದ ೩೫ ವರುಷಗಳ ನಂತರ ಕೆನ್ನೆತ್ ಬ್ರಾಂಗ್ ಸ್ಲೂತ್ ಚಿತ್ರವನ್ನ ಪುನಃ ತೆರೆಗೆ ತಂದ. ಈ ಬಾರಿ ಲಾರೆನ್ಸ್ ಓಲಿವರ್ ನ ಪಾತ್ರವನ್ನ ಮೈಕೇಲ್ ಕೇನ್ ಮಾಡಿದರೆ, ಕೇನ್ ನ ಪಾತ್ರವನ್ನ ಜೂಡ್ ಲಾ ಎಂಬ ತರುಣ ನಟ ಅಭಿನಯಿಸಿದ್ದ. ಸಮಕಾಲೀನ ಸಂದರ್ಭಕ್ಕೆ ಪಾತ್ರಗಳನ್ನ ಒಗ್ಗಿಸುವಲ್ಲಿ ಸಾಕಷ್ಟು ಮಟ್ಟಿಗೆ ಸಫಲನೂ ಆದ ಕೆನ್ನೆತ್ ಈ ಚಿತ್ರಕ್ಕಾಗಿ ಮಿಶ್ರ ಪ್ರತಿಕ್ರಿಯೆ ಪಡೆದ.

ಈ ಎರಡೂ ಚಿತ್ರಗಳನ್ನಿಟ್ಟುಕೊಂಡು ಸಂವಾದ ಡಾಟ್ ಕಾಂ ತನ್ನ ಮುಂದಿನ ಶಿಬಿರದ ತಯಾರಿ ನಡೆಸಿದ. ಈ ಚಿತ್ರದ ಕುರಿತಾದ ಹಲವಾರು ಗಂಭೀರ ಲೇಖನಮಾಲೆ ಸಂವಾದ ಡಾಟ್ ಕಾಂ ನಲ್ಲಿ ಹರಿದು ಬರಲಿದೆ.

೦೮-೧೦-೨೦೧೦

 

 

 




ಇಲ್ಲಿವರೆಗಿನ ಅಭಿಪ್ರಾಯಗಳು

pradeep
2011-04-07 02:52:48

rather than we sitting in a corner and throwing up a meeting online will fetch us nothing apart from more brilliant movies done by others and not us!!! when we can sit here and talk about the movie for soo long....just imagine the power of that particular movie???i liked both the versions ..brilliant....thats because they are so passionate abt their movies!! if given a chance and made a movie like this here in karnataka...i bet people will surely watch it...rather than these few pathetic kannada movies which are good for nothing...we have set the mind of the spectators that way....don we need few revolutionary movies here???? i proudly appreciate malayalam for their constant crave for changing the mind set of the people who are watching the movies....and now they are prepared and they are big enough to criticize other industry with ease!!! think it over....we need to change...we will change :)


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು