ದೃಶ್ಯಕ್ಕೊಂದು ನುಡಿಗಟ್ಟು

ಜಾಕಿ ಅಂದ್ರೆ ಜಾಕಿ

jackie fim review, punit, ಜಾಕಿ ಚಿತ್ರ ವಿಮರ್ಶೆ, ಪುನೀತ್, ಸೂರಿ, ಯೋಗರಾಜಭಟ್, ಹರಿಕೃಷ್ಣ,

ಎರಡು ವಿಶಿಷ್ಟ ಪ್ರತಿಭೆಗಳು ಒಂದು ಸೃಜನಶೀಲ ಸೃಷ್ಟಿಯ ಕ್ರಿಯೆಯೆಡೆ ಸೇರಿದಾಗ ಒಂದೋ ಅಪಘಾತ ಇಲ್ಲವೇ ಅಪರೂಪದ ಕಲಾಕೃತಿ ಜನ್ಮ ತಾಳುತ್ತದೆ. ಶಂಕರ್‌ನಾಗ್ , ರಾಜ್‌ಕುಮಾರ್‌ಗಾಗಿ ‘ಒಂದು ಮುತ್ತಿನ ಕಥೆ’ ಮಾಡಿದಾಗ ಇದ್ದಷ್ಟೇ ಕುತೂಹಲ ಸೂರಿ, ಪುನೀತ್ ಜೋಡಿಯ ‘ಜಾಕಿ’ಗೂ ಇತ್ತು. ಹಿಂದೆಂದೂ ಕಂಡಿರದ ರಾಜಕುಮಾರ್‌ರನ್ನು ಒಂದು ಮುತ್ತಿನ ಕಥೆಯಲ್ಲಿ ಶಂಕರ್‌ನಾಗ್ ಅನಾವರಣ ಮಾಡಿದ್ದರೇ, `ಜಾಕಿ’ ಸೂರಿಯ ಪ್ರಯತ್ನವಾಗಿಯಷ್ಟೆ ಉಳಿದಿದೆ. ಹೊಸ ರೀತಿಯ ಪುನೀತ್ ಇಲ್ಲಿ ಕಾಣಿಸಲ್ಲ!

ಪುನೀತ್ ಪ್ರತಿಭಾವಂತನ ಜೊತೆಗೆ ಸ್ಟಾರ್ ಕೂಡ ಅನ್ನೋದು , ಸೂರಿಯಂತಹ ಕ್ರಿಯಾಶೀಲ ನಿರ್ದೇಶಕನಿಗೆ ಒಂದು ಸವಾಲು ಮತ್ತು ತಲೆನೋವು. ಸುಮ್ಮನೇ ರೀಲು ಸುತ್ತುವ ನಿರ್ದೇಶಕನಿಗಾದರೇ ಸ್ಟಾರ್ ಅನ್ನ ನಿಭಾಯಿಸುವುದು ಕಷ್ಟವಾಗಲಿಕ್ಕಿಲ್ಲ; ಆದರೇ ಒಬ್ಬ ಸೃಜನಶೀಲನಿಗೆ ತನ್ನ ಕೃತಿಗೂ ಮೊಸಮಾಡದೇ, ಸ್ಟಾರ್ ಪಟ್ಟಕ್ಕೂ ಕಳಂಕಬಾರದಂತೆ ನಿರ್ವಹಿಸಬೇಕಾದ ತಾಕಲಾಟ ಇದ್ದೇ ಇರುತ್ತದೆ.

ಸ್ಟಾರ್ ಇಮೇಜ್ ಮತ್ತು ಸಿನೆಮಾದಲ್ಲಿ ಮೆಸೇಜ್ ಇರಲೇಬೇಕೆಂಬ ಕೆಟ್ಟ ಹಠದಿಂದ ಮಾಡಿಕೊಂಡ ಕಾಂಪ್ರಮೈಸ್‌ಗಳನ್ನ ಹೊರಗಿಟ್ಟು ನೋಡಿದರೆ, ಜಾಕಿ ಒಂದು ವಿಶಿಷ್ಟ ಪ್ರಯತ್ನ.

ಊರು ಬಿಟ್ಟು ಪ್ರಿಯಕರನೊಟ್ಟಿಗೆ ಓಡಿ ಹೋದ ಗೆಳತಿಯನ್ನ, ಅಮ್ಮನ ಆದೇಶದ ಮೇರೆಗೆ ಜಾಕಿ ಹುಡುಕಿಕೊಂಡು ಬರುವುದು ಚಿತ್ರದ ಒನ್ ಲೈನ್ ಎಳೆ. ತೀರಾ ಕೌತುಕದ ಕಥೆಯಾಗಬಲ್ಲ ಚಿತ್ರದಲ್ಲಿ ನಿರ್ದೇಶಕ ಉದ್ದೇಶಪೂರ್ವಕವಾಗಿಯೇ ಕುತೂಹಲವನ್ನ ಕಾಪಾಡಿಸುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ಇಲ್ಲಿ ಚಿತ್ರದ ಅಂತ್ಯ ಮುಖ್ಯವಲ್ಲವೇ ಅಲ್ಲ.

ಪಯಣದುದ್ದಕ್ಕೂ ಜಾಕಿಗೆ ಹತ್ತಾರು ಪಾತ್ರಗಳು ಸಿಕ್ಕುತ್ತವೆ. ಅದರಲ್ಲಿ ರಂಗಾಯಣ ರಘು ಪಾತ್ರ ಅಷ್ಟಿಷ್ಟು ಕಾಡುವುದು ಬಿಟ್ಟರೆ, ಇನ್ಯಾವ ಪಾತ್ರಗಳೂ ಚಿತ್ರದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲದೇ, ಹಾ

jackie fim review, punit, ಜಾಕಿ ಚಿತ್ರ ವಿಮರ್ಶೆ, ಪುನೀತ್, ಸೂರಿ, ಯೋಗರಾಜಭಟ್, ಹರಿಕೃಷ್ಣ,

ಗೆ ಬಂದು ಹೀಗೆ ಹೋಗುತ್ತವೆ. ನಮ್ಮ ದೈನಿಕದಂತೆ ಸಾಗುವ ಚಿತ್ರಕಥೆ ಕೇವಲ ಜಾಕಿಯ ದೃಷ್ಟಿಕೋನದಲ್ಲೇ ಸಾಗುವುದರಿಂದ ಮಿಕ್ಕೆಲ್ಲ ಪಾತ್ರಗಳೂ ಮುಖ್ಯವಾಗಿದ್ದೂ ಆಳಕ್ಕಿಳಿಯದೇ ಹೋಗುತ್ತವೆ. ಇದು ಚಿತ್ರದ ವೈಶಿಷ್ಟ್ಯವೂ ಹೌದು, ಚಿತ್ರದ ದೌರ್ಬಲ್ಯವೂ ಇದೇ.
 ದೌರ್ಬಲ್ಯ ಏಕೆಂದರೇ, ಪಾತ್ರಗಳು ವಿಸ್ತರಿಸಿಕೊಳ್ಳದೇ ಹೋದರೆ ಅವು ಪ್ರೇಕ್ಷಕನಲ್ಲಿ ಯಾವುದೇ ಭಾವಗಳನ್ನ ಸೃಷ್ಠಿಸಲಾರವು. ನಮ್ಮ ಚಿತ್ರಗಳ ಕಮರ್ಷಿಯಲ್ ಯಶಸ್ಸು ನಿಂತಿರುವುದೇ ಭಾವ ಪ್ರಪಂಚದ ಮೇಲೆ. ಬಹುಷಃ ಇದೇ ಕಾರಣಕ್ಕೆ ಚಿತ್ರ ಬೋರೂ ಹೊಡೆಸುತ್ತದೆ.


ಕಮರ್ಷಿಯಲ್ ಲೆಕ್ಕಾಚಾರಗಳನ್ನ ಬಿಟ್ಟು ನೋಡಿದರೆ, ಪ್ರತಿ ಫ್ರೇಮಿನಲ್ಲೂ ಸೂರಿಯ ಛಾಪಿದೆ. ಮಗನನ್ನೇ ನಂಬದ ತಾಯಿಯ ಪಾತ್ರವನ್ನ ಸೂರಿಯಂತಹ ನಿರ್ದೇಶಕ ಮಾತ್ರ ತೋರಿಸಬಲ್ಲ. ಒಂದು ದೃಶ್ಯವನ್ನ , ಆ ಸನ್ನಿವೇಶದ ಹೊರಗೆ ನಿಂತು ಚಿತ್ರಿಸುವಲ್ಲಿ ಸೂರಿಗೆ ಹೆಚ್ಚಿನ ಆಸಕ್ತಿ ಇದ್ದಂತಿದೆ. ಇದು ಪ್ರೇಕ್ಷಕನನ್ನ ಚಿತ್ರದಿಂದ ಒಂದು ಅಂತರ ಕಾಪಾಡಿಕೊಳ್ಳುವಂತೆ ಮಾಡುತ್ತದೆ.

ಜಾಕಿ ಚಿತ್ರಕ್ಕೆ ಯಶಸ್ಸಿನ ದಂಡೇ ಸೇರಿಕೊಂಡಿದೆ. ಅದಕ್ಕೆ ತಕ್ಕಂತೆ ರಾಜ್ಯದ ನೂರಾ ಮೂವತ್ತು ಚಿತ್ರಮಂದಿರಗಳನ್ನು ಆವರಿಸಿ ಕುಳಿತುಕೊಂಡಿದೆ. ಮೊನ್ನೆ ಎಂದಿರನ್ ಇಂದು ಜಾಕಿ. ಸಣ್ಣ ಚಿತ್ರಗಳ ನಿರ್ಮಾಪಕರು, ಹೊಸ ಪ್ರತಿಭೆಗಳು ಇನ್ನೂ ಸ್ವಲ್ಪ ದಿನ ಆಕಾಶ ನೋಡಬೇಕು. ಜಾಕಿ ಚಿತ್ರದ ಬಗೆಗಿನ ಟಾಕ್ ಬಹಳ ಜೋರಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡದ ಚಿತ್ರಗಳ ಕುರಿತಾಗಿ ಈ ತೆರನಾದ ಟಾಕ್ ಯಾವತ್ತೂ ಆಗಿರಲಿಲ್ಲ; ಮುಂಗಾರು ಮಳೆಯ ಬಗೆಗೂ.

 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು