
ನಾಟಕ: ಹೊಸಬೆಳಕು (ಕಾದಂಬರಿ ಹಾಗು ಚಲನಚಿತ್ರ ಆಧರಿಸಿದೆ)
ಯಾವಾಗ: ನವೆಂಬರ್ 13, 2010.
ವೇಳೆ: ಸಂಜೆ 7 - 30ಕ್ಕೆ
ಎಲ್ಲಿ: ಕೆ. ಎಚ್. ಕಲಾ ಸೌಧದಲ್ಲಿ
ಕನ್ನಡ ರಂಗಭೂಮಿ ಇತಿಹಾಸದಲ್ಲಿ ಮೊದಲಬಾರಿಗೆ ಕಾದಂಬರಿ ಹಾಗು ಚಲನಚಿತ್ರ ಆಧಾರಿತ ನಾಟಕ ಪ್ರಯೋಗ ಹೊಸಬೆಳಕು ೬೦ರ ದಶಕದ ಪ್ರಖ್ಯಾತ ಮಹಿಳಾ ಲೇಖಕರಲ್ಲಿ ಒಬ್ಬರಾದ ವಾಣಿ ಅವರ ಕಾದಂಬರಿ ಆಧಾರಿತ ಚಿತ್ರ. ಇದನ್ನು ಯಾರು ತಾನೆ ಮರೆಯಕ್ಕೆ ಆಗುತ್ತೆ? ಹೊಸಬೆಳಕು ಮೊದಲ ಪ್ರತಿ ೧೯೬೯ ರಲ್ಲಿ ಅಚ್ಚಾಗಿ ಅಪಾರ ಯಶಸ್ಸು ಕಂಡಿತ್ತು. ಇದನ್ನ ಆಗಿನ ಪ್ರಬುದ್ಧ ನಿರ್ದೇಶಕರಾದ ದೊರೈ ಭಗವಾನ್ ಜೋಡಿ ಬೆಳ್ಳಿತೆರೆಯ ಮೇಲೆ ಮೂಡಿಸಿದರು.
ಕನ್ನಡದ ಕಣ್ಮಣಿ ಡಾ. ರಾಜ್ಕುಮಾರ್ ಹಾಗು ಸರಿತ ಜೋಡಿಯಲ್ಲಿ ೧೯೮೨ರಲ್ಲಿ ಮೂಡಿಬಂದ ’ಹೊಸಬೆಳಕು’ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬಹು ದೊಡ್ಡ ಯಶಸ್ಸು ಕಂಡ ಚಿತ್ರ. ಕೋಟ್ಯಾಂತರ ಕನ್ನಡಿಗರು ನೋಡಿ ಮೆಚ್ಚಿದ ಈ ಚಿತ್ರವನ್ನು, ನಾವು ಅಂದ್ರೆ ಫೊರ್ತ್ ಕಾರ‍್ನರ್ ತಂಡ ಕೂಡ ನೋಡಿದ್ದೇವೆ ಹಾಗೂ ಮೆಚ್ಚಿದ್ದೇವೆ. ಇಲ್ಲಿಗೆ ಸುಮ್ಮನೆ ಕೂರಲಾರದ ನಾವು, ಈ ಚಿತ್ರದ ರಂಗ ರೂಪಕವನ್ನು ಇಂದಿನ ಪೀಳಿಗೆಗೆ ನೀಡುವ ಮಹದಾಸೆಯೊಂದಿಗೆ ’ಹೊಸಬೆಳಕು’ ನಾಟವನ್ನ ನಿಮ್ಮ ಮುಂದೆ ತರಲು ತಯಾರಿ ನಡೆಸಿದ್ದೇವೆ. ನಮ್ಮ ನಾಟಕ, ಕಾದಂಬರಿ ಹಾಗೂ ಚಲನಚಿತ್ರದ ಹದವಾದ ಒಂದು ಮಿಶ್ರಣ. ಇದು ಫೊರ್ತ್ ಕಾರ‍್ನರ್ ಕಲಾ ಸೌಧಕ್ಕಾಗಿ ಸಾದರ ಪಡಿಸುವ ಚೊಚ್ಚಲ ಕಾಣಿಕೆ. ಹೊಸಬೆಳಕು ೧೯೮೨ರಲ್ಲಿ ತೆರೆ ಕಂಡಿತ್ತಾದರೂ, ಈ ಕಥೆ ನಮ್ಮ ನಿಮ್ಮೆಲ್ಲರ ಸುತ್ತಲು ಪ್ರಸ್ತುತವಾಗಿ ನಡೆಯುತ್ತಿರುವ ಕಥೆಯೇ ಆಗಿದೆ. ಈ ಕಥೆಯನ್ನು ಮತ್ತೆ ನಿಮ್ಮ ಮುಂದೆ ತರಲು ಇದು ಮುಖ್ಯವಾದ ಪ್ರೇರಣೆ. ಬೇರೆಯವರಿಗೆ ಪ್ರೇರಣೆ ಆಗಬಲ್ಲ ಜನರು ನಮ್ಮ ನಡುವೆ ಎಲೆಮರೆಕಾಯಿಗಳಂತೆ ಜೀವನ ನಡೆಸುತ್ತಿದಾರೆ. ನಮ್ಮ ನಾಟಕ ಈ ತರಹದ ಜನರ ಜೀವನದಾಗತ್ಯೆಯನ್ನ ನಿಮ್ಮ ಮುಂದೆ ಇಡುವ ಒಂದು ಪ್ರಯತ್ನವಾಗಿದೆ. ಬದಲಾಗಿರುವ ಸಾಮಾಜಿಕ ಪರಿಸ್ಥಿತಿಗಳನ್ನ ಅಳವಡಿಸಿ ಕಥೆಯನ್ನಆಧುನಿಕ ರೀತಿಯಲ್ಲಿ ಮತ್ತೆ ನಿಮ್ಮ ಮುಂದೆ ತರುತಿದ್ದೇವೆ. ರಂಗಭೂಮಿಯಂತ ಹೊಸಬೆಳಕಿನ ಮೂಲಕ ಹೊಸ ಪ್ರೇಕ್ಷಕರನ್ನ ಕರೆತರುವ ಉದ್ದೇಶ ನಮ್ಮದಾಗಿದೆ. ಕಥೆ ತಿಳಿದಿರುವುದೇ ಆದರು ಅದನ್ನು ಸಂಸ್ಕರಿಸಿ, ಅದರಲ್ಲಿ ಸ್ವಾರಸ್ಯಕರವಾದ ಅಂಶಗಳನ್ನು ತುಂಬಿ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವುದೇ ನಮ್ಮ ಉದ್ದೇಶವಾಗಿದೆ.
ನಿರ್ದೇಶಕರ ನುಡಿ (ಪಿ.ಡಿ.ಸತೀಶ್ ಚಂದ್ರ)-
ನಾನು ಕಳೆದ ೫ ವರ್ಷಗಳಿಂದಂದ ಕಂಡಿರುವ ಸತ್ಯವೇನೆಂದರೆ, ಇಂಗ್ಲೀಷು ಅಥವಾ ಕನ್ನಡ ರಂಗಭೂಮಿಗೆ ಹೊಸ ಪ್ರೇಕ್ಷಕರ ಆಗಮನ ಆಗದೆ ಇರುವುದು. ಈ ಬದಲಾದ ಪ್ರೇಕ್ಷಕರಲ್ಲಿ ೭೦% ಜನರು ಬೆಂಗಳೂರಿನಲ್ಲಿ ಯಾವುದೇ ನಾಟಕವಾಗಲಿ ಅದನ್ನು ನೋ
ಡುತ್ತಾರೆ. ರಂಗಭೂಮಿಗೆ ಹೊಸಬರನ್ನು ಪರಿಚಯಿಸದಿರುವುದು ಆದರ ಬೆಳವಣಿಗೆಗೆ ಆರೋಗ್ಯಕರವಾಗಲಾರದು. ಭಾರತದಲ್ಲಿನ ಮುಂಬೈ ಆಗಲಿ ಕೋಲ್ಕತ ಆಗಲಿ, ಬೆಂಗಳೂರಿನ ರಂಗಭೂಮಿಯಿಂದ ವಿಭಿನ್ನವಾಗಿರುವುದು ಈ ನಿಟ್ಟಿನಲ್ಲಿ ಎಂಬುದು ಕಟು ಸತ್ಯ. ರಂಗಭೂಮಿಗೆ ಹಳಬನಾಗಿರುವ ನನಗೆ ಇದರೆ ಬಗ್ಗೆ ಚರ್ಚೆ ಮಾಡಿ, ಆಥವ ಟೀಕೆ ಮಾಡಿ ಸುಮ್ಮನಾಗುವುದಕ್ಕಿಂತ, ಹೊಸ ಪ್ರೇಕ್ಷಕರನ್ನ ರಂಗಭೂಮಿಯತ್ತ ಸೆಳೆಯಬೇಕೆಂಬ ತವಕ ಮೊದಲಾಯಿತು. ಬೆಂಗಳೂರಿನ ಹಲವಾರು ತಂಡಗಳು ಇನ್ನೂ ಕಾರ್ನಡ, ಕಾರಂತ, ಷೇಕ್ಸ್‌ಸ್ಪಿಯರ್ ಗಳಿಗೆ ಸೀಮಿತವಾಗಿದ್ದಾರೆ. ಹಲವಾರು ತಂಡಗಳು, ಹಾಗೂ ನಾಟಕರಂಗದ ಘಟಾನುಘಟಿಗಳೂಂದಿಗೆ ಇದರ ಬಗ್ಗೆ ಚರ್ಚಿಸಿದ ನಂತರ ನನ್ನ ದಾರಿಯನ್ನು ನಾನೇ ಹುಡುಕ ಹೊರಟೆ. ನಾನು, ನನ್ನ ಸ್ನೇಹಿತರು ಮತ್ತು ನಮ್ಮ ‘ಫೊರ್ತ್ ಕಾರ‍್ನರ್’ ಬಳಗದವರು ಸೇರಿ ಕಥೆಯ ಮೊದಲ ರೂಪವನ್ನು ರಚಿಸಿದೆವು. ಇದಾದ ಮೇಲೆ ಹಲವಾರು ಸುದೀರ್ಘ ಚರ್ಚೆಗಳನ್ನು ನಡೆಸಿ ಕಥೆಯನ್ನು ಹೆಣೆದು ರಂಗರೂಪಕ್ಕೆ ತರಲಾಯಿತು. ಇವೆಲ್ಲದರಿಂದ ಮೂಡಿದ ‘ಹೊಸಬೆಳಕು’, ಚಲನಚಿತ್ರ ಹಾಗೂ ಕಾದಂಬರಿ ಎರಡರ ಕಥೆಯನ್ನು ಒಳಗೊಂಡಿದ್ದು ಕನ್ನಡ ರಂಗಭೂಮಿಗೆ ಹೊಸ ಪ್ರೇಕ್ಷಕರನ್ನು ಕರೆತರುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.
ನಾಟಕದ ಟಿಕೆಟ್ ಮತ್ತು ಹೆಚ್ಚಿನ ವಿವರಗಳಿಗೆ ಕರೆಮಾಡಿ: ೯೮೮೦೩೮೮೮೬೮ / ೯೮೮೦೪೮೭೬೮೨