ದೃಶ್ಯಕ್ಕೊಂದು ನುಡಿಗಟ್ಟು

‘ನವಿಲಾದವರು’ ಚಿತ್ರದ ಪ್ರದರ್ಶನ ಮತ್ತು ಚಿತ್ರ-ವಿಚಾರ-ಸಂಕಿರಣ

navilaadavaru,u r ananthamurthy, lahari velu, kesari haravu, g b harish, samvaada.com, surana college ವಿವರಗಳು ಕೆಳಕಂಡಂತಿವೆ-
 ವಿಚಾರ ಸಂಕಿರಣದ ವಿಷಯ: "ಎಂಧಿರನ್ ಸಂದರ್ಭದಲ್ಲಿ ನವಿಲಾದವರು"
ದಿನಾಂಕ: ನವಂಬರ್ ೨೮ ಭಾನುವಾರ
ಸಮಯ: ಬೆಳಿಗ್ಗೆ ೧೧ ರಿಂದ ೨-೩೦ ರವರೆಗೆ
ಸ್ಥಳ: ಸುರಾನ ಕಾಲೇಜು, ಸೌತ್ ಎಂಡ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-೦೪ 

ವಿಚಾರಸಂಕಿರಣದಲ್ಲಿ ಮಾತನಾಡುವವರು:

ಜಿ ಬಿ ಹರೀಶ್(ಪ್ರಾಧ್ಯಾಪಕರು, ತುಮಕೂರು ವಿ ವಿ, ಬರಹಗಾರರು) 
ಜಾನ್ ದೇವರಾಜ್ (ಬೀದಿಮಕ್ಕಳು, ಬಾಲಕಾರ್ಮಿಕರ ಪರ ಹೋರಾಟಗಾರರು)
ಕೇಸರಿ ಹರವು (ಚಿತ್ರ ನಿರ್ದೇಶಕರು, ಭೂಮಿಗೀತ ಚಿತ್ರ ಖ್ಯಾತಿ, ರಂಗಕರ್ಮಿ)
ಡೇವಿಡ್ ಬಾಂಡ್(ಫ್ರೆಂಚ್ ಚಿತ್ರಾಸಕ್ತರು, ಅತಿಥಿ ಪ್ರಾಧ್ಯಾಪಕರು, ಕುವೆಂಪು ವಿ ವಿ)
ಶೇಖರಪೂರ್ಣ (ಹಿರಿಯ ಚಿತ್ರ ವಿಮರ್ಶಕರು)

ಮುಖ್ಯ ಅತಿಥಿಗಳು:
ಲಹರಿ ವೇಲು (ಲಹರಿ ಆಡಿಯೋ ಕಂಪನಿ ಮಾಲೀಕರು)
ನರೇಂದ್ರ ಬಾಬು (ನಿರ್ದೇಶಕರು, ಕಬ್ಬಡ್ಡಿ ಚಿತ್ರ ಖ್ಯಾತಿ)
‘ಗಿರಿರಾಜ್ ಬಿ ಎಂ ಜೊತೆ ನವಿಲಾದವರು’ ಚಿತ್ರತಂಡ,

ಪ್ರದರ್ಶನ ಮತ್ತು ಚಿತ್ರ-ವಿಚಾರಸಂಕಿರಣದಲ್ಲಿ ಭಾಗವಹಿಸಲು ಸಂಪರ್ಕಿಸಿ: ಅರೇಹಳ್ಳಿ ರವಿ-99004 39930, ಕಿರಣ್-97317 55966

 
ವಿಚಾರಸಂಕಿರಣದಲ್ಲಿ ಮಾತನಾಡುವವರ ಪ್ರೊಫ಼ೈಲ್‍ಗಳು ಇಂತಿವೆ:
  u r anantamurty, g b harish, john devaraj, kesari haravu, David Bond,Shekharapoorna, narendra babu, Lahari Velu, Lahari Audio


ಜಿ ಬಿ ಹರೀಶ್: ತುಮಕೂರು ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿ ಕೆಲಸ. ಅಪಾರವಾದ ಓದು ಮತ್ತು ಸಿನೆಮಾದ ಕುರಿತು ಆಳವಾದ ಕುತೂಹಲ ಹಾಗೂ ಅಧ್ಯಯನ. ಹರೀಶ್ ಈ ಗೋಷ್ಠಿಯಲ್ಲಿ ಸಿನೆಮಾಗಳಲ್ಲಿ ಪ್ರಾದೇಶಿಕತೆ ಮತ್ತು ಅದರ ಇಲ್ಲದಿರುವಿಕೆಯಿಂದ ಸಾಧ್ಯವಾಗುವ ವಿಸ್ತಾರ ವ್ಯಾಪಾರೀಕರಣದ ಅಪಾಯಗಳ ಕುರಿತು ಮಾತನಾಡಲಿದ್ದಾರೆ. "ಎಂದಿರನ್ ಸಂದರ್ಭದಲ್ಲಿ ನವಿಲಾದವರು" ಎನ್ನುವ ಕೇಂದ್ರ ವಿಷಯವನ್ನು ಅವರು ಈ ದೃಷ್ಟಿಕೋನದಿಂದ ಪರೀಕ್ಷಿಸಲಿದ್ದಾರೆ.   

ಜಾನ್ ದೇವರಾಜ್: ಜಾನ್ ಒಬ್ಬ ಆಕ್ಟಿವಿಸ್ಟ್ ಆಗಿ ನವಿಲಾದವರು ಎತ್ತಿಕೊಂಡಿರುವ ಒಂದು ಜ್ವಲಂತ ಪ್ರಶ್ನೆಯನ್ನು ತಮ್ಮ ಮಾತುಗಳಲ್ಲಿ ಪರಿಶೀಲನೆಗೊಡ್ಡಲಿದ್ದಾರೆ. ನಮ್ಮ ಇವತ್ತಿನ ಬದುಕಲ್ಲಿ ನಾವೆಲ್ಲ ಸಮಚಿತ್ತದ ಹೋರಾಟದಲ್ಲಿ ಬಗೆಹರಿಸಿಕೊಳ್ಳಬೇಕಾದ ಈ ಸಮಸ್ಯೆಯನ್ನು ಹೇಗೆ ಎದುರಿಸುವುದು ಎನ್ನುವುದು ಅವರ ಮಾತಿನ ವಸ್ತುವಾಗಿರಲಿದೆ. 

ಕೇಸರಿ ಹರವು: "ಭೂಮಿಗೀತ" ಚಿತ್ರದಿಂದ ಕನ್ನಡದ ಸೂಕ್ಷ್ಮ ನಿರ್ದೇಶಕನಾಗಿ ತಮ್ಮನ್ನು ತಾವು ಗುರುತಿಸಿಕೊಂಡ ಕೇಸರಿ ಹರವು ತಮ್ಮ ಚಿತ್ರ-ಸಾಕ್ಷ್ಯಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಮುಖ್ಯ ಪುರಸ್ಕಾರಗಳನ್ನು ಪಡೆದವರು. ಜಪಾನ್ ಮತ್ತು ಬ್ರೆಝಿಲ್‍ನ ಚಿತ್ರೋತ್ಸವಗಳಲ್ಲಿ ಇವರ ಚಿತ್ರಗಳು ಪ್ರದರ್ಶನಕಂಡಿವೆ.  ಇವರು ಈಗಿನ ಸಿನೆಮಾಗಳ ತಾಂತ್ರಿಕ ಶ್ರೀಮಂತಿಕೆ ಮತ್ತು ಅದಕ್ಕೆ ವಿರುದ್ಧವಾದ ನೆಲೆಯಲ್ಲಿ ಸರಳ ಸಿನೆಮಾವಾಗಿ ನವಿಲಾದವರು ಎಂಬ ನೋಟದಲ್ಲಿ ಮಾತನಾಡಲಿದ್ದಾರೆ.

ಡೇವಿಡ್ ಬಾಂಡ್: ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಉನ್ನತಪದವಿ. ಕಳೇದ ೧೫ ವರ್ಷದಿಂದ ಫ್ರಾನ್ಸ್‌ನಲ್ಲಿ ವಾಸಿಸುತ್ತಿರುವ ಬ್ರಿಟಿಷ್ ಪ್ರಜೆ. ಸದ್ಯ ಎರಡೂವರೆ ವರುಷಗಳಿಂದ ಭಾರತದಲ್ಲಿ ಉಪನ್ಯಾಸಕನಾಗಿ ಮತ್ತು ಫ್ರೆಂಚ್ ಭಾಷಾ ಅಧ್ಯಾಪಕನಾಗಿ ಕೆಲಸ. ತಮ್ಮನ್ನು ತಾವು A film enthousiast ಎಂದು ಕರೆದುಕೊಳ್ಳುವ ಡೇವಿಡ್ ಭಾರತದ ಸಿನೆಮಾಗಳ ಬಗ್ಗೆ ಆಳವಾದ ಅಧ್ಯಯನ ಮತ್ತು ಕುತೂಹಲಕರ ಒಳನೋಟಗಳಿರುವವರು. ಈ ಸಂವಾದದಲ್ಲಿ ಅವರು "ಭಾರತದ ಕಮರ್ಷಿಯಲ್ ಸಿನೆಮಾ: ಎಂದಿರನ್ ಸಂದರ್ಭದಲ್ಲಿ ನವಿಲಾದವರು" ಎಂಬ ದೃಷ್ಟಿಕೋನದದಿಂದ ಮಾತನಾಡಲಿದ್ದಾರೆ.

ಶೇಖರ್ ಪೂರ್ಣ:ನಕಾರಾತ್ಮಕ ವಿಮರ್ಶೆಯ ಮೂಲಕವೇ ಸಿನೆಮಾವನ್ನು ಬಗೆಯುವುದು ಅಗತ್ಯ ಮತ್ತು ಆರೋಗ್ಯಕರ ಎಂದು ಪ್ರತಿಪಾದಿಸುವ ಶೇಖರ್ ಪೂರ್ಣ ಸಧ್ಯದ ಕನ್ನಡದಲ್ಲಿ ಆಳವಾದ ಮತ್ತು ಸ್ಪಷ್ಟವಾದ ಸಿನೆಮಾ ವಿಮರ್ಶೆಯನ್ನು ಮಾಡಬಲ್ಲ ಕೆಲವೇ ಕೆಲವರ ಪೈಕಿ ಒಬ್ಬರು. ಡೆಕ್ಕನ್ ಹೆರಲ್ಡ್ ಮತ್ತು ವಾರಪತ್ರಿಕೆಯಲ್ಲಿ ಅಪರೂಪದ ಸಂದರ್ಶನ ಮತ್ತು ವಿಮರ್ಶೆಗಳನ್ನು ಬರೆಯುತ್ತಿದ್ದರು. ಕನ್ನಡಸಾಹಿತ್ಯ ಡಾಟ್ ಕಾಂ ನ ಸಂಸ್ಥಾಪಕ. ಈ ಸಂವಾದದಲ್ಲಿ ಶೇಖರ್ ಅವರು ಒಟ್ಟಾರೆಯಾಗಿ "ಎಂದಿರನ್ ಸಂದರ್ಭದಲ್ಲಿ ನವಿಲಾದವರು" ಎಂಬ ಪ್ರಸ್ತಾವನೆಯನ್ನು ಇಟ್ಟು ಮಾತನಾಡಲಿದ್ದಾರೆ.

ಧನ್ಯವಾದಗಳು

 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು