ದೃಶ್ಯಕ್ಕೊಂದು ನುಡಿಗಟ್ಟು

ಡಿಜಿಟಲ್ ಬಳಸಲು ಅದರ ಸಾಧ್ಯತೆಗಳ ಅರಿವು ಅವಶ್ಯಕ

(ನವಿಲಾದವರು ಚಿತ್ರದ ನಿರ್ದೇಶಕ ಗಿರಿರಾಜರ "ಹೊಸ ತಲೆಮಾರು, ಹಳೇ ತಲೆಗಳು ಮತ್ತು ನವಿಲಾದವರು ಸಿನಿಮಾ" ಎಂಬ ಲೇಖನಕ್ಕೆ 'ಮಂಸೋರೆ' ಪ್ರತಿಕ್ರಿಯೆ) giriraj navilaadavaru, kannada cinema,

ನಿಮ್ಮ ವಿಚಾರಗಳ ಬಗ್ಗೆ ನನ್ನ ಸಹಮತವಿದೆ. ಹೌದು ನೀವು ಹೇಳಿದಂತೆ ಕೆಲವು ತಲೆಗಳಲ್ಲಿ ಆಳವಾಗಿ ಬೇರೂರಿರುವ ಅಪ್ಪ ಹಾಕಿದ ಆಲದಮರದಿಂದಾಗಿ ಹೊಸದನ್ನು ಒಪ್ಪಿಕೊಳ್ಳಲು ಹಿಂದೆ ಸರಿಯುತ್ತಾರೆ. ಅದರಲ್ಲೂ ಈಗಿನ ಡಿಜಿಟಲ್ ಯುಗದಲ್ಲಿ update ಆಗುವ ಬದಲು ಅದೇ ಮೋಷನ್ ಕ್ಯಾಮರಾಗಳೇ ಸರಿ ಎಂದು ವಾದಿಸುವವರ ದೊಡ್ಡ ದಂಡೇ ಇದೆ. ಅವರ ವಾದದಲ್ಲಿ ಸ್ವಲ್ಪ ಮಟ್ಟಿಗೆ ತಿರುಳಿದೆ.
ಅಂದರೆ..ಡೈಮೆನ್ಶನ್ ಮತ್ತು ಡೆಪ್ತ್ ಗೆ ಸಂಬಂಧಿಸಿದಂತೆ ವ್ಯತ್ಯಾಸಗಳು ಇವೆಯಾದರೂ, ಅದು ನೆಗೆಟಿವ್ ಎಂದು ಭಾವಿಸದೆ.. ಡಿಜಿಟಲ್ನಲ್ಲಿ ಸಿಗುವ ಡೆಪ್ತ್ ಮತ್ತು ಡೈಮೆನ್ಶನ್‌ನ ಸಾಧ್ಯತೆಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡಲ್ಲಿ ಇದರಲ್ಲೂ ಅದ್ಭುತ ಎನ್ನುವಂತ ದೃಶ್ಯಗಳನ್ನು ಕಟ್ಟಿಕೊಡಬಹುದು ಎಂಬುದನ್ನು ನೀವೇ ಉದಾಹರಿಸಿರುವಂತಹ ರಕ್ತಚರಿತ್ರ ಮತ್ತು ಸೋಷಿಯಲ್ ನೆಟ್ವರ್ಕ್ ಸಿನಿಮಾಗಳು ನಿರೂಪಿಸಿವೆ.
 
ತೊಂದರೆ ಇರುವುದು ಡಿಜಿಟಲ್ನಲ್ಲಿ ಅಲ್ಲ, ಅದನ್ನು ಬಳಸುವ ಚಾಕಚಕ್ಯತೆಯಲ್ಲಿ. ಇದಕ್ಕೆ ನನಗಾದ ಅನುಭವವನ್ನೇ ಉದಾಹರಿಸಿರುವುದಾದರೆ ಇತ್ತೀಚೆಗೆ ಒಂದು ಜಾಹಿರಾತಿಗೆ ಕೆಲಸ ಮಾಡಿದಾಗ ಅದರಲ್ಲಿ ಬಳಸಿದ್ದು ರೆಡ್ ಕ್ಯಾಮೆರಾ. ಆ ಸಿನೆಮಾಟೋಗ್ರಾಫರ್ಗೆ ಡಿಜಿಟಲ್ನಲ್ಲಿ ಆಸಕ್ತಿಯೇನೊ ತುಂಬಾ ಇತ್ತು ಆದರೆ ಅದರ ಔಟ್‌ಪುಟ್ ಮಾತ್ರ ತುಂಬಾ ಕಡಿಮೆ ಬಂದಿತ್ತು. 
ಅದಾದ ನಂತರ ನನ್ನ ಸ್ನೇಹಿತನೊಂದಿಗೆ ಇನ್ನೊಂದು ಪ್ರೋಮೋ ಮಾಡಿದ್ವಿ. ಅದನ್ನ DSLR550 ಯಲ್ಲಿ ಮಾಡಿದ್ದು ಅದು ಕೊಟ್ಟ ರಿಸಲ್ಟ್ ಅದ್ಭುತವಾಗಿತ್ತು. ಅದೂ ಎರಡೇ ಮಲ್ಟಿ 10 ಲೈಟ್ಸ್ ಬಳಸಿ. ಆಗ ನನಗನಿಸಿದ್ದು ಡಿಜಿಟಲ್ ಬಳಸಲು ಅದರ ಸಾಧ್ಯತೆಗಳ ಅರಿವು ಅವಶ್ಯಕ ಎಂದು. ಇಲ್ಲವಾದರೆ ಡಿಜಿಟಲ್ ವಿರೋಧಿಸುವವರಿಗೆ ಮತ್ತಷ್ಟು ಕಾರಣಗಳು ಸಿಗುತ್ತಾ ಹೋಗುತ್ತದೆ, ಡಿಜಿಟಲ್ ನಿರಾಕರಿಸಲು.

 

 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು