ದೃಶ್ಯಕ್ಕೊಂದು ನುಡಿಗಟ್ಟು

ರವೀಂದ್ರ ಕಲಾಕ್ಷೇತ್ರದಲ್ಲಿ ಸಾದತ್ ಹಸನ್ ಮಾಂಟೊ ನಾಟಕ "ಟೋಬಾ ಟೇಕ್ ಸಿಂಗ್"

ಎಂದು : ಡಿಸೆಂಬರ್ 4, ಶನಿವಾರ

ರವೀಂದ್ರ ಕಲಾಕ್ಷೇತ್ರ, ಹಸನ್ ಮಾಂಟೋ, ನಾಟಕ, ತೋಬಾ ತೇಕ್ ಸಿಂಗ್, ಅಭಿನಯ ತರಂಗ, ಗೌರಿ ದತ್ತು, ಜೆ ಬಾಲಕೃಷ್ಣ್, ಚರಣ್ ಚನ್ನರಾಯಪಟ್ಟಣ, sadat hasan mantoಎಲ್ಲಿ : ರವೀಂದ್ರ ಕಲಾಕ್ಷೇತ್ರ

ಯಾವಾಗ  : 7ರಿಂದ 8-30ರವರೆಗೆ

ತಂಡ : ಅಭಿನಯ ತರಂಗ

ರಚನೆಸಾದತ್ ಹಸನ್ ಮಾಂಟೊ

ನ್ನಡಕ್ಕೆ :  ಜೆ ಬಾಲಕೃಷ್ಣ

ವಿನ್ಯಾಸ, ನಿರ್ದೇಶನ   :  ಚರಣ್ ಚನ್ನರಾಯಪಟ್ಟಣ

ಹಾಡುಗಳು, ರಾಗ ಸಂಯೋಜನೆ : ದಿಗ್ಷಡ್ಜ        

ಸಂಗೀತ : ಅರುಣ್ ಕುಮಾರ್

ವಿವರಕ್ಕೆ ಸಂಪರ್ಕಿಸಿ : 98458 25217

ಟೋಬಾ ಟೇಕ್ ಸಿಂಗ್ ಕತೆಯ ಕುರಿತು

abhinaya taranga, gouri dattu, a s murty, satdat hasan mantoಭಾರತ  ಮತ್ತು  ಪಾಕಿಸ್ತಾನಗಳ  ವಿಭಜನೆಯ  ನಂತರದ ಸಂದರ್ಭದಿಂದ ಆರಂಭವಾಗುವ   ಕತೆಯು  ಹುಚ್ಚರ  ವಿನಿಮಯದ  ವಿಷಯವನ್ನು  ಕೇಂದ್ರವಾಗಿಸಿಕೊಂಡಿದೆ.

ಲಾಹೋರ್ ನಲ್ಲಿನ  ಹುಚ್ಚಾಸ್ಪತ್ರೆಗೆ  ಹುಚ್ಚರ  ವಿನಿಮಯದ  ಸುದ್ದಿ  ತಲುಪಿದಾಗ  ಅಲ್ಲಿ  ಇದು  ಚರ್ಚೆಯ  ವಿಷಯವಾಗಿ ಪರಿಣಮಿಸುತ್ತದೆ.  ನಂತರ  ಹುಚ್ಚರ  ಸ್ಥಿತಿಯನ್ನು  ಬಿಚ್ಚಿಡುತ್ತಾ  ಮುಂದುವರೆಯುವ  ಕತೆಯು ,  ಕತೆಯ  ನಾಯಕ  ಬಿಶನ್ ಸಿಂಗ್ ತೊಳಲಾಟವನ್ನು ವ್ಯಕ್ತಪಡಿಸುತ್ತ ಅವನ ಸಾವಿನೊಂದಿಗೆ ಕೊನೆ ಗೊಳ್ಳುತ್ತದೆ.

ರಂಗಪ್ರಯೋಗ ಕುರಿತು 

ಸಾದತ್ ಹಸನ್ ಮಾಂಟೊ ಟೋಬಾ ಟೇಕ್ ಸಿಂಗ್ ಕತೆಯಲ್ಲಿನ ಭಾರತ ಪಾಕಿಸ್ತಾನ ವಿಭಜನೆಯ ಸನ್ನಿವೇಶದ ಪರಿಣಾಮವನ್ನೇ ಕೇಓದ್ರವಾಗಿಟ್ಟುಕೊಂಡು,ವಿವೇಚನಾ ಶೂನ್ಯ ಅಸಂಭದ್ಧ ಸಮಕಾಲೀನ ಕ್ರಿಯೆ ಪ್ರಕ್ರಿಯೆ ಗಳನ್ನು ಹುಡುಕುವ ಒಂದು ಸಣ್ಣ ಪ್ರಯತ್ನ ರಂಗ ಪ್ರಯೋಗ.

ತಂಡ ಕುರಿತು 

ಕಳೆದ ೩೦ ವರ್ಷಗಳಿಂದ ಒಂದು ವರ್ಷದ ಡಿಪ್ಲೊಮ ತರಗತಿಗಳನ್ನ ನಡೆಸುತ್ತಾ ಹೊಸ ಪ್ರತಿಭೆ ಗಳನ್ನು ನಾಟಕ ರಂಗಕ್ಕೆ ಕೊಡುತ್ತಾ ಬಂದಿರುವ ಆಭಿನಯ ತರಂಗದ ವರ್ಷದ ನಾಟಕಗಳು                              

.ವೆಂ.ರಾಜಗೋಪಾಲ್ ಅವರ    ಕೊರಿಯೋಲೇನಸ್  ಮೂಲ ಶೇಕ್ ಸ್ಪಿಯರ್  ನಿ: ಪ್ರಕಾಶ್ ಬೆಳವಾಡಿ                                                                                                                                                                                                            

ಪ್ರಸನ್ನ ಅವರ                    ಮಹಿಮಾಪುರ                                       ನಿ: ರಾಘು ಶಿವಮೊಗ್ಗ    

.ಎಸ್.ಮೂರ್ತಿ ಅವರ           ಕಾಶಿ ಕಿಟ್ಟಿ ಕಂತೆ ಪುರಾಣ ಮೂಲ ಸತ್ಯಜಿತ್ ರಾಯ್ ನಿ: ಜೋಸೆಫ್                 

ವರ್ಷದ ನಾಟಕ ಹಸನ್ ಮಾಂಟೊ ಅವರ ಕಥೆ    ಟೋಬಾ ಟೇಕ್ ಸಿಂಗ್ ಅನು : ಜೆ. ಬಾಲಕೃಷ್ಣ         ನಿ: ಸಿ.ಎಸ್. ಚರಣ


ನಿರ್ದೇಶಕರ ಕುರಿತು

ಚರಣ್ ಸಿ.ಎಸ್. : ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರಾದ ಚರಣ್ ನೀನಾಸಂ ರಂಗ ಶಿಕ್ಷಣ ಕೇಂದ್ರ , ಎಸ್.ಜೆ.ಎಮ್. ನಾಟಕ- ಸಂಗೀತ ಶಾಲೆ ಚಿತ್ರದುರ್ಗ, ಆಟ್ಟಕಲರಿ ಸೆಂಟರ್ ಫಾರ್ ಮೂವ್ ಮೆಂಟ್ಸ್ ಇವುಗಳಲ್ಲಿ ಡಿಪ್ಲೊಮ ಆರ್ಟ್ಸ್, ಜೂನಿಯರ್ ಮ್ಯೂಸಿಕ್,  ಡಿಪ್ಲೊಮ ಇನ್ ಡ್ಯಾನ್ಸ್ ತರಬೇತಿಯನ್ನು ಮುಗಿಸಿದ್ದು, ಅಭಿನಯ, ಆಂಗಿಕ ಚಲನೆ, ಯೋಗ, ಸಮಕಾಲೀನ ನೃತ್ಯ, ಭರತ ನಾಟ್ಯ, ಕಲರಿಪಯಟ್ಟು ತಿಳಿದಿದ್ದು, ನೀನಾಸಂ ತಿರುಗಾಟ, ಲಂಡನ್ನಿನ ಡ್ರೀಮ್ ಕಂಪನಿ, ಜನಮನದಾಟ, ಲೋಕಧರ್ಮಿ ಮುಂತಾದ ತಂಡಗಳಲ್ಲಿ ನಟ ,ತಂತ್ರಜ಼಼ ನಾಗಿ ರಾಷ್ಟ್ರೀಯ , ಅಂತರಾಷ್ಟ್ರೀಯ ನಾಟಕ , ನೃತ್ಯ, ನಿರ್ದೇಶಕರೊಂದಿಗೆ ಕೆಲಸ ನಿರ್ವಹಿಸುತ್ತ ಅನೇಕ ಕಾರ್ಯಾಗಾರ ದಲ್ಲಿ ಭಾಗವಹಿಸಿ , ನಡೆಸಿದ್ದು, ಈಗ ನಟ ,ನಿರ್ದೇಶಕ ನೃತ್ಯಗಾರ, ಭೋಧಕ ನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಪಾತ್ರವರ್ಗ 

 ಮನು, ಅರವಿಂದ್,  ದರ್ಶನ್ ಅಪೂರ್ವ, ನಿರಂಜನ್, ಕೃಷ್ಣಪ್ರಕಾಶ್, ಕೃಷ್ಣ ರಾಜು, ಅಶೋಕ್, ಶಿವಶಂಕರ  ನಾಯಕ್, ಶಶಿಕುಮಾರ್, ರವಿ ಕೆ.ಆರ್.ನಗರ, ಬಾಲಮುರುಗ, ರಘುನಂದನ್                                                                                                      


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು