ದೃಶ್ಯಕ್ಕೊಂದು ನುಡಿಗಟ್ಟು

ಕಬಡ್ಡಿ ‘ಯೂತ್ ಸಿನಿಮಾ’

kabaddi best kannada film,ಕಬಡ್ಡಿ , ಕಿ ರಂ ನಾಗರಾಜನಮ್ಮ ನಿರೀಕ್ಷೆ ಸುಳ್ಳಾಗಲಿಲ್ಲ! ೨೦೦೯ರಲ್ಲಿ ಅದಾಗಲೇ ಫ್ಲಾಪ್ ಎಂದು ಬಿಂಬಿಸಲಾಗಿದ್ದ ‘ಕಬಡ್ಡಿ’ ಚಿತ್ರವನ್ನು ನಾವು ಸಂವಾದಕ್ಕೆ ಆಯ್ಕೆ ಮಾಡಿದಾಗ ಬಂದ ಪ್ರತಿಕ್ರಿಯೆಗಳಲ್ಲಿ ಟೀಕೆಗಳೇ ಬಹಳಷ್ಟಿದ್ದವು. ಕಬಡ್ಡಿ ಒಂದು ಕೆಟ್ಟ ಚಿತ್ರ ಎಂದು ಹೇಳುವ ಧೈರ್ಯವನ್ನು ಟೀಕಾಕಾರರು ತೋರದಿದ್ದರೂ ಅದು ನಮಗೆ ಇಷ್ಟವಾಗಲಿಲ್ಲ. ಅದರಲ್ಲಿ ತಾಂತ್ರಿಕ ದೋಷಗಳಿವೆ ಇತ್ಯಾದಿ,  ಹೀಗೆ.  ನಮಗೂ ಗೊತ್ತಿತ್ತು. ಕಬಡ್ಡಿ ಚಿತ್ರದಲ್ಲಿ ಅವೆಲ್ಲಾ ದೋಷಗಳಿವೆ. ಆದರೆ ಆ ಎಲ್ಲಾ flawಗಳ ನಡುವೆಯೂ ಅದು ಒಳ್ಳೆಯ ಚಿತ್ರವಾಗಿತ್ತು. ನಮ್ಮ ನಡುವಿನ ಆಟೋಟಗಳ ರಾಜಕೀಯಗಳು, ಹಳ್ಳಿಗಳಲ್ಲಿನ ಪ್ರತಿಷ್ಠಿತ ಕುಟುಂಬಗಳ ಹುಂಬತನ, ಕ್ರೀಡೆಯನ್ನು ನಂಬಿಕೊಂಡವರ ಸಂಕಟಗಳು ಇತ್ಯಾದಿಗಳೆಲ್ಲವನ್ನು ಅದು ಸಮರ್ಥವಾಗಿ ಹಿಡಿದಿಟ್ಟಿತ್ತು. ಇಷ್ಟೆ ಆಗಿದ್ದರೆ ಅದು ಬೋರು ಹೊಡೆಸಬಹುದಿತ್ತೇನೋ. ಆದರೆ ಅಲ್ಲೂ ಒಂದು ನವಿರು ಪ್ರೇಮಕಥೆಯಿತ್ತು. ಅದು ಕಬಡ್ಡಿ ಆಟದ ಜೊತೆಜೊತೆಗೆ ಸಾಗುತ್ತಾ ಆಟದೊಂದಿಗೆ ತನ್ನನ್ನು ಸಮೀಕರಿಸಿಕೊಂಡ ಕಾರಣ ಯಶಸ್ವೀ ಪ್ರೇಮಕಥೆಯಾಯಿತು.

kabaddi best kannada film,ಕಬಡ್ಡಿ , ಕಿ ರಂ ನಾಗರಾಜ

ಚಿತ್ರ ನಿರ್ಮಾಣದ ಹಂತದಲ್ಲಿ ನಿರ್ಮಾಪಕರು ಮತ್ತು ನಿರ್ದೇಶಕರ ನಡುವೆ ತಲೆದೋರಿದ್ದ ಸಣ್ಣ ತಿಕ್ಕಾಟವೊಂದು ಇಡೀ ಚಿತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ತೀರಾ ಕಡಿಮೆ ಸಂಖ್ಯೆಯ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಎರಡನೇ ವಾರಕ್ಕೆ ‘ಕಬಡ್ಡಿ’ ತನ್ನ ಪ್ರಯಾಣ ನಿಲ್ಲಿಸುವಂತಾಯಿತು. ಚಿತ್ರದ ಬಿಡುಗಡೆಯ ಹಂತದಲ್ಲಿ ಸಿಗಬಹುದಾಗಿದ್ದ ಪ್ರಚಾರದ ಸಾಧ್ಯತೆಗಳನ್ನು ಚಿತ್ರತಂಡದ ಒಗ್ಗಟ್ಟಿನ ಕೊರತೆ ದೂರ ಮಾಡಿತು.  ಒಂದು ಹಂತದಲ್ಲಿ ಮಾಧ್ಯಮಗಳು ಚಿತ್ರವನ್ನು ಒಳ್ಳೆಯ ವಿಮರ್ಶೆ ಕೊಡುವ ಮೂಲಕ ಬೆಂಬಲಿಸಿದವಾದರೂ ಚಿತ್ರತಂಡದ ನಿತ್ಯ ಜಗಳ ನೋಡಿ ಚಿತ್ರದೆಡೆಗೆ ನಿರ್ಲಕ್ಷ್ಯ ವಹಿಸಿದವು. ಮಾಧ್ಯಮದ ಅಭಿಪ್ರಾಯವೇ ಜನರದೂ ಆಯಿತು. ಹಾಗೆ ಒಳ್ಳೆಯ ಸಿನಿಮಾವೊಂದು ಜನರಿಗೆ ಥಿಯೇಟರ್‌ಗಳಲ್ಲಿ ನೋಡಲಿಕ್ಕೆ ಸಿಗಲಿಲ್ಲ. ಟಿ ವಿಯಲ್ಲಿ ಪ್ರಸಾರವಾದ ಮೇಲೇನೇ ಕಬಡ್ಡಿ ಒಂದಷ್ಟು ಜನರಿಗೆ ತಲುಪಿದ್ದು.

೨೦೦೯ರ ಆಗಸ್ಟ್ ೯ರಂದು ಬಾದಾಮಿ ಹೌಸ್‌ನಲ್ಲಿ ನಡೆದ ಕಬಡ್ಡಿ ಚಿತ್ರ-ಸಂವಾದಕ್ಕೆ ಕಿ ರಂ ನಾಗರಾಜರವರು ಬಂದಿದ್ದರು. ಚಿತ್ರತಂಡದ ಜೊತೆ ಚಿತ್ರವನ್ನು ವೀಕ್ಷಿಸಿ ನಂತರ ನಡೆದ ಸಂವಾದದಲ್ಲಿ  ಕಬಡ್ಡಿಯನ್ನು ‘ಯೂತ್ ಸಿನಿಮಾ’ ಎಂದಿದ್ದರು. ಅವರ ಮಾತು ನಿಜವಾಗಿದೆ. ಕಬಡ್ಡಿಯಲ್ಲಿದ್ದ ಯೂತ್ ಎಲಿಮೆಂಟ್‌ಗೆ ಅತ್ಯುತ್ತಮ ಚಿತ್ರವಾಗುವ ಎಲ್ಲಾ ಅರ್ಹತೆಯಿತ್ತು ಎಂಬುದು kabaddi best kannada film,ಕಬಡ್ಡಿ , ಕಿ ರಂ ನಾಗರಾಜಸಂವಾದ ತಂಡದ ನಂಬಿಕೆ.

ಕಬಡ್ಡಿ ಚಿತ್ರಕ್ಕೆ ಕೆಲಸ ಮಾಡಿದ ಎಲ್ಲ ಹೊಸ ತಾಂತ್ರಿಕ/ನಟವರ್ಗದವರಿಗೆ ಪ್ರಶಸ್ತಿ ಪಡೆದ ಈ ಸಂಭ್ರಮದ ಸಮಯದಲ್ಲಿ ಶುಭಾಶಯಗಳು.

ಕಬಡ್ಡಿ ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿ ಸಂವಾದ ಡಾಟ್ ಕಾಂನ ಗೆಳತಿ ‘ಹೂ ಪಟ್ಟಣಶೆಟ್ಟಿ’ ಯವರಿಗೂ ಪ್ರಶಸ್ತಿ ಬಂದಿದೆ. ಅವರು ನರೇಂದ್ರ ಬಾಬು ಜೊತೆಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳು.

ನಿರ್ದೇಶಕ ನರೇಂದ್ರ ಬಾಬು ಅವರ ಅಪರಿಮಿತ ಖುಷಿ ಅನಂತವಾಗಲಿ.

ನಮ್ಮ ಆಕ್ಷೇಪ: ಯಾರ ಪಾಲಿನದೋ ಪ್ರಶಸ್ತಿ ಕಿತ್ತು ಅದನ್ನು ಕಾರ್ನಾಡರಿಗೆ ಕೊಡುವುದರ ಮೂಲಕ ಅವರನ್ನು ಆ ಪರಿ ಅವಮಾನಿಸಬಾರದಿತ್ತು. ಅದನ್ನು ಸ್ವೀಕರಿಸದಿರುವ ಕಾರ್ನಾಡರ ನಡೆ ಸರಿಯಾಗಿದೆ. ಮತ್ತು ಕನ್ನಡ ಚಿತ್ರರಂಗಕ್ಕೆ ಕಾರ್ನಾಡರಿಗಿಂತ ಹೆಚ್ಚು ಕೆಲಸ ಮಾಡಿದ ಬಹುಜನರಿದ್ದರು. ಪ್ರಶಸ್ತಿ ಕಮಿಟಿಯೂ ಕೋಟಾ ಪದ್ಧತಿಯಿಂದ ಆಯ್ಕೆಯಾಗುವುದರ ಪರಿಣಾಮ ಇದು.

ಹಾಗೆಯೇ ಕಬಡ್ಡಿ ಚಿತ್ರದಲ್ಲಿ ಕಬಡ್ಡಿ ಕೋಚ್ ಆಗಿ ಅಮೋಘ ಅಭಿನಯ ನೀಡಿದ್ದ ನಟ ಕಿಶೋರ್‌ಗೂ ಪ್ರಶಸ್ತಿ ಬರಬೇಕಾಗಿತ್ತು. ಮುಂದಿನ ಕೋಟಾದಲ್ಲಿ ಅವರಿಗೆ ಪ್ರಾಶಸ್ತ್ಯವಿರಲಿ.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು