ವಿಭಿನ್ನವಾಗುಳಿದು, ವ್ಯಾವಹಾರಿಕವಾಗಿಯೂ ಯಶಸ್ವಿಯಾಗಿರುವ ಶಶಾಂಕ್‌ರವರು "ಜರಾಸಂಧ" ಎಂದೆನ್ನುವ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ವಿಜಯ್ ನಾಯಕನಾಗಿರುವ, ಈ ಚಿತ್ರದ ಚಿತ್ರೀಕರಣ ಜನವರಿ ಎರಡನೆ ವಾರದಿಂದ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ಉಳಿದ ತಾರಾಗಣಕ್ಕೆ ಆಯ್ಕೆ ನಡೆಯುತ್ತಿರುವಾಗ ದೂರವಾಣಿಯಲ್ಲಿ ಸಿಕ್ಕಿದ ಶಶಾಂಕ್ "ನಿಮಗೆ ಯಾರಾದರೂ ಕಲಾವಿದರ ಹೊಸ ಮುಖಗಳ ಪರಿಚಯವಿದ್ದರೆ ತಿಳಿಸಿ" ಎಂದು ಕೇಳಿದ್ದಾರೆ. ಇಪ್ಪತ್ತೈದು ವರ್ಷಗಳಿಂದ ಐವತ್ತು ವರ್ಷಗಳೊಳಗಿರುವ, ರಂಗಾಸಕ್ತರು, ನಾಟಕಗಳ ಅನುಭವವುಳ್ಳವರಿಗೆ ಆದ್ಯತೆಯೆಂದೂ ತಿಳಿದ್ದಾರೆ. ನಿರ್ದೇಶಕ ಶಶಾಂಕ್‌ರವರೊಂದಿಗೆ ಕೆಲಸ ಮಾಡಬಯಸುವವರು ಯಾರಾದರೂ ಇದ್ದರೆ, ತಮ್ಮ ಹಿನ್ನೆಲೆ, ಅನುಭವ, ಭಾವ ಚಿತ್ರಗಳನ್ನು ಕಳುಹಿಸಿಕೊಡಿ. ಕಳುಹಿಸಬೇಕಾದ ವಿಳಾಸ: webmasterATsamvaadaDotCom