ಜನವರಿ ೧೫ಕ್ಕೆ ಕನಸಿನ ಕುದುರೆಯ ಬೆನ್ನೇರಲು ಬನ್ನಿ..ಕನಸೆಂಬೋ ಕುದುರೆಯನೇರಿ ಚಿತ್ರ ಪ್ರದರ್ಶನ ಮತ್ತು ಸಂವಾದ.
ದಿನಾಂಕ: ೧೫ನೇ ಜನವರಿ ೨೦೧೦ ಸ್ಥಳ: ಬಾದಾಮಿ ಹೌಸ್, (ಪ್ರಿಯದರ್ಶಿನಿ ಚಿತ್ರ ಮಂದಿರ), ಬೆಂಗಳೂರು ಪ್ರದರ್ಶನ: ಬೆಳಿಗ್ಗೆ ೧೧ ರಿಂದ ೧ ಲಘು ಉಪಹಾರ: ೧ ರಿಂದ ೧.೩೦ ೧.೩೦ ರಿಂದ ೨ ೨ ರಿಂದ ೨.೩೦ ೨.೩೦ ರ ನಂತರ ಚರ್ಚೆ: "ಮಾರುಕಟ್ಟೆಯ ಅಂಚಿಗೆ ದೂಡಲ್ಪಟ್ಟವರು"
ಸಿನೆಮಾ ಕುರಿತು ಮಾತನಾಡಲಿರುವ ಪ್ರೊಫೈಲ್ಮಹೇಶ್.ಎನ್.ಸಿ ಮಹೇಶ್ ಮೂರು ವರ್ಷಗಳಿಂದ ನ್ಯಾಶನಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿನೆಮಾ, ರಂಗಭೂಮಿಗಳಲ್ಲಿ ಆಸಕ್ತಿ. ಪ್ರಕಟವಾದ ಪುಸ್ತಕಗಳು ಬೆಳಕು ಸದ್ದುಗಳನ್ನು ಮೀರಿ ಕತಾ ಸಂಕಲನ ತಮ್ಮ ತೊಟ್ಟಿಲುಗಳ ತಾವೇ ಜೀಕಿ ಕಾದಂಬರಿ ಬಿಡಿ ನಾನು ದೇವರಾಗಿರಬಲ್ಲೆ ನಾಟಕ ಅಮಿತಾಭ್ ಕಲಾಗಾಥೆ ಅಮಿತಾಭ್ ಬಚ್ಚನ್ ಜೀವನ ಚಿತ್ರಣ ವಿಮೋಚನೆಯ ಹರಿಕಾರ: ಬಾಬು ಜಗಜೀವನ್ ರಾಮ್ ರವರ ಬರಹಗಳ ಕನ್ನಡ ಅನುವಾದ ಸಂಪಾದಕರು ಕೆ.ಎನ್.ಗಣೇಶಯ್ಯನವರ ಧರ್ಮಸ್ಥಂಭ ಕಥೆಯ ರಂಗ ರೂಪ .
ಡಾ|| ಎಂ.ಎಸ್.ಆಶಾದೇವಿ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಎರಡು ವರ್ಷಗಳಿಂದ ಕನ್ನಡ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಆಶಾರಾಣಿಯವರು, ಕನ್ನಡದಲ್ಲಿ ಎಂ.ಎ ಹಾಗೂ ‘ನವೋದಯ ವಿಮರ್ಶೆಯ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ’ ಎನ್ನುವ ವಿಷಯದ ಮೇಲೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಪ್ರಕಟವಾಗಿರುವ ಕೃತಿ ವೈದೇಹಿ, ಕುಮಾರವ್ಯಾಸರ ಕೃತಿಗಳ ವಿಮರ್ಶೆ, ಸಾಹಿತ್ಯ- ಸಂಸ್ಕೃತಿಯನ್ನು ಕುರಿತ ಲೇಖನಗಳ ಸಂಗ್ರಹ: ‘ಸ್ತ್ರೀಮತವನುತ್ತರಿಸಲಾಗದೆ’
ವಿಕ್ರಮ್ ಹತ್ವಾರ ೧೯೮೨ರಲ್ಲಿ ಕುಂದಾಪುರ ತಾಲೂಕಿನ ಕೋಟೇಶ್ವರದ ಬಳಿಯಿರುವ ಬೀಜಾಡಿಯೆಂಬ ಪುಟ್ಟ ಗ್ರಾಮದಲ್ಲಿ ಜನನ. ತಂದೆ ಜಗನ್ನಾಥ ಹತ್ವಾರ, ತಾಯಿ ಕುಸುಮ, ತಂಗಿ ಪ್ರೃತಿ. ಶಿವಾಜಿನಗರ, ಯಶವಂತಪುರ, ಅಲಸೂರು, ಮಲ್ಲೇಶ್ವರ, ಮಡಿಕೇರಿಯ ಕುಶಾಲನಗರ, ತಿರುವಂತಪುರ, ಮುಂಬಯಿ, ಅಮೇರಿಕಾದ ನ್ಯೂಜೆರ್ಸಿಗಳಲ್ಲಿ ಅಷ್ಟಷ್ಟು ತಿಂಗಳ ಬದುಕು. ಅಲಸೂರು ಕೆರೆಯ ಎದುರಿರುವ ಎನ್.ಸಿ.ಎಸ್, ಶೇಷಾದ್ರಿಪುರಂ ಹೈಸ್ಕೂಲ್, ಕಾಲೇಜುಗಳಲ್ಲಿ ವಿದ್ಯಾಭ್ಯಾಸ, ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಟಾಟಾ ಕನ್ಸಲ್ಟೆನ್ಸಿಯಲ್ಲಿ ಕೆಲಸ. ಸಿನೆಮಾ ಹಾಗೂ ಸಂಗೀತದಲ್ಲಿ ಆಸಕ್ತಿ. ಪ್ರಕಟವಾಗಿರುವ ಕೃತಿಗಳು ಇದೇ ಇರಬೇಕು ಕವಿತೆ ಕವಿತೆ ಸಂಕಲನ ಕಟ್ ಸೀಟ್ ಮತ್ತು ಇತರೆ ಕತೆಗಳು ಸಂಕಲನದಲ್ಲಿ ಕತೆ ಪ್ರಕಟ ೨೦೦೯ ಹಾಗೂ ೨೦೧೦ ಕನ್ನಡ ಪ್ರಭ ಸಂಕ್ರಾಂತಿ ವಿಶೇಷಾಂಕದ ಕತಾ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಅಲ್ಲದೇ ಅನೇಕ ವಿಶೇಷಾಂಕಗಳಲ್ಲಿ ಕತೆಗಳು ಪ್ರಕಟವಾಗಿವೆ.
|
|