ದೃಶ್ಯಕ್ಕೊಂದು ನುಡಿಗಟ್ಟು

ಶ್ರೇಷ್ಠ ಛಾಯಾಗ್ರಹಕ ಎಸ್.ರಾಮಚಂದ್ರ ಇನ್ನಿಲ್ಲ

ಘಟಶ್ರಾದ್ಧ, ಚೋಮನದುಡಿಯಂತಹ ಉತೃಷ್ಟವಾದ ಕನ್ನಡದ ಸಿನೆಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಎಸ್.ರಾಮಚಂದ್ರರು ಅಗಲಿದ ಆಘಾತಕಾರಿ ಸುದ್ದಿ ನಮ್ಮನ್ನು ತಲುಪಿದೆ.

ಬಹುಜನಪ್ರಿಯವಾದ ಟಿವಿ ಸರಣಿ ಮಾಲ್ಗುಡಿ ಡೇಸ್, ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಮನೆ, ಘಟಶ್ರಾದ್ಧ, ಆಕ್ರಮಣ, ಕವಿತಾ ಲಂಕೇಶರ ದೇವೀರಿ ಅಲ್ಲದೆ ಅನ್‌ಹೋನಿ, ಪರ್ವಾನ, ರಾಕಿ ಮೊದಲಾದ ಹಿಂದಿ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದವರು ರಾಮಚಂದ್ರ. ರಿಷ್ಯ ಶೃಂಗ ಸಿನೆಮಾದಲ್ಲಿನ ಛಾಯಾಗ್ರಹಣಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇವರಿಗೆ ಲಭಿಸಿತ್ತು. ೨೦೦೬ರಲ್ಲಿ ಕರ್ನಾಟಕ ಸರಕಾರ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಿತ್ತು. 

ತಮ್ಮ ಕೆಮರಾ ಚಲನೆ ಮೂಲಕ ಚಿತ್ರದ ಅರ್ಥವ್ಯಾಪ್ತಿಯನ್ನು ಹಿಗ್ಗಿಸುವ ಹಾಗೂ ಚಿತ್ರಕತೆಯ ಸಾಂದ್ರತೆಯನ್ನು ತಮ್ಮ ಫ್ರೇಮುಗಳಲ್ಲಿ ಕಟ್ಟಿಕೊಡುವ ವಿಶಿಷ್ಟ ಪ್ರತಿಭೆಯ ರಾಮಚಂದ್ರರ ನಿಧನ ಕನ್ನಡವಷ್ಟೇ ಅಲ್ಲದೆ ಭಾರತೀಯ ಚಲನಚಿತ್ರ ರಂಗಕ್ಕೆ ಭಾರಿ ನಷ್ಟವನ್ನುಂಟು ಮಾಡಿದೆ.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು