ಈ ವಿಷಯ ಈಗಾಗಲೇ ಎಷ್ಟೋ ಬಾರಿ ಚರ್ಚೆಯಾಗಿದೆ. ಆದರೂ the issue is still open.

ಡಬ್ಬಿಂಗ್ ಚಿತ್ರಗಳು ಕನ್ನಡ ಚಿತ್ರಗಳಿಗೆ ಮಾರಕ, ಎಂದು ಉಚ್ಛರಿಸುವವರು ಚಿತ್ರೋದ್ಯಮದವರು.
ಡಬ್ಬಿಂಗ್ ಚಿತ್ರಗಳು ಬೇಕು ಎನ್ನುವರು ಪ್ರೇಕ್ಷಕರು. ಚಿತ್ರಗಳು ನಡೆಯುವುದು ಪ್ರೇಕ್ಷಕ ಮಹಾಶಯರಿಂದ ಎಂಬುದನ್ನು ಕನ್ನಡ ಚಿತ್ರೋದ್ಯಮ ಮರೆಯುವಂತಿಲ್ಲ.
ಚಿತ್ರೋದ್ಯಮದ ದೃಷ್ಟಿಯಿಂದ ನೋಡಿದರೆ, ನಮ್ಮ ಕನ್ನಡ ಚಿತ್ರಗಳ ಮಾರುಕಟ್ಟೆ ಸೀಮಿತ, ಜೊತೆಗೆ ಪರಭಾಷಾ ಚಿತ್ರಗಳ ಹಾವಳಿ. ಹೀಗಿರುವ ಸ್ಥಿತಿಯಲ್ಲಿ ಡಬ್ಬಿಂಗ್ ಚಿತ್ರಗಳು ಬಂದರೆ ಕನ್ನಡ ಚಿತ್ರಗಳನ್ನು ತಯಾರು ಮಾಡುವವರು ಇರುವುದಿಲ್ಲ. ಕನ್ನಡ ಚಿತ್ರೋದ್ಯಮ ಬಂದ್! ಈ ಉದ್ಯಮವನ್ನೇ ನಂಬಿ ಬದುಕುತ್ತಿರುವ ತಂತ್ರಜ್ಞರು, ನಟರು, ನಿರ್ದೇಶಕರು ಬೀದೀ ಪಾಲು. ಇದು ಉದ್ಯಮದ ಆತಂಕ.
ಇನ್ನು ಪ್ರೇಕ್ಷಕರು ಬಯಸುವುದು ಕೇವಲ ಮನರಂಜನೆ, ಅವರಿಗೆ ಗೊತ್ತಿರುವ ಭಾಷೆಯಲ್ಲಿ ಚಿತ್ರ ಇದ್ದರೆ ಸಾಕು.
ಗುಣಮಟ್ಟವಿಲ್ಲದ ಕನ್ನಡ ಚಿತ್ರಗಳು ಡಬ್ಬಿಂಗ್ ಚಿತ್ರಗಳ ಬೇಡಿಕೆಗೆ ಪ್ರೇರಣೆ ಎಂದರೆ ತಪ್ಪಾಗಲಾರದು.
ಈ ಎರಡು ವರ್ಗದ ಜನರನ್ನು ತೃಪ್ತಿಪಡಿಸಲು ಒಂದು ಮಾರ್ಗವಿದೆ !!
ಯಾವ ಯಾವ ಚಿತ್ರಗಳು ಡಬ್ಬಿಂಗ್ ಆಗಬೇಕು ಎನ್ನುವ ನಿರ್ಧಾರವನ್ನು ಒಂದು ಸಮಿತಿ ನಿರ್ಧರಿಸಬೇಕು.
ಸಮಿತಿಯ ಸದಸ್ಯರು ಉದ್ಯಮದ ಎಲ್ಲ ವರ್ಗಗಳ ಪ್ರತಿನಿಧಿಗಳಿಂದ ಕೂಡಿರಬೇಕು. ಮುಂಬರುವ ಪ್ರಶ್ನೆಯೇ ಯಾವ ಚಿತ್ರಗಳು ಡಬ್ಬಿಂಗಿಗೆ ಯೋಗ್ಯ ?
ಡಬ್ಬಿಂಗಿಗೆ ಆಯ್ಕೆ ಆಗಿರುವ ಚಿತ್ರವನ್ನು ನಮ್ಮ ಕನ್ನಡ ಭಾಷೆಯಲ್ಲಿ ಮರು ಚಿತ್ರೀಕರಣ ಮಾಡಲು ಸಾಧ್ಯವೋ ಅಥವಾ
ನಮ್ಮ ಉದ್ಯಮದಲ್ಲಿ ಅಂತ ತಂತ್ರಜ್ಞಾನ ಇದೆಯೋ ಇಲ್ಲವೋ ಎಂದು ಪರಿಶೀಲಿಸಬೇಕು. ಉದಾಹರಣೆ ರಾಮಾಯಣವನ್ನು ತೆಲುಗು ಮೂಲದಲ್ಲಿ ಚಿತ್ರೀಕರಿಸಿದ್ದರೆ ಅದಕ್ಕೆ ಅನುಮತಿ ಕೊಡಬಾರದು. ಏಕೆಂದರೆ ನಾವು ಅ ತರಹದ ಚಿತ್ರಗಳನ್ನು ಮಾಡಲು ಶಕ್ತರು, ಅದೇ ರೀತಿ ಹಲವು ಸಾಮಾಜಿಕ ಚಿತ್ರಗಳು .
hollywood ಚಿತ್ರ ’ಅವತಾರ್’ ತರಹದ ಚಿತ್ರ ಇದ್ದರೆ, ಖಂಡಿತ ಕನ್ನಡಕ್ಕೆ ಡಬ್ಬಿಂಗ್ ಮಾಡಬಹುದು.Hollywood ಮಟ್ಟದ ತಂತ್ರಜ್ಞಾನ ನಮ್ಮ ಬಳಿ ಇಲ್ಲದಿರುವುದು ಒಂದು ಕಾರಣ ಎಂದು ಪರಿಗಣಿಸಬಹುದು. ಈ ರೀತಿ ಮಾಡುವುದರಿಂದ ನಮ್ಮ ಕನ್ನಡ ಚಿತ್ರೋದ್ಯಮದ ಎಲ್ಲ ವರ್ಗದವರಿಗೆ ಆಘಾತ ತರುವ ಪ್ರಮೇಯ ಇರುವುದಿಲ್ಲ.
(spiderman , superman , batman ಕೂಡ ಈ ಸಾಲಿಗೆ ಸೇರ್ಪಡೆಯಾಗುತ್ತದೆ).
’ಛೋಟ ಚೇತನ’ ದೇಶದ ಪ್ರಪಥಮ 3D ಚಿತ್ರವಾಗಿತ್ತು. ನಾವು ಇದರ ತೆಲುಗು ರೂಪಾಂತರ ಚಿಕ್ಕವರಿದ್ದಾಗ ನೋಡಿದ್ದೆವು. ತೆಲುಗು ಬಾರದ ಕಾರಣ ನಮ್ಮ ತಂದೆಗೆ ಭಾಷಾಂತರಿಸಲು ಪೀಡಿಸಿದ್ದುಂಟು. ಈ ಸಮಸ್ಯೆ ಈಗಿನ ನಮ್ಮ ಪುಟಾಣಿಗಳಿಗೂ ಉಂಟು. ಹೀಗಿರುವಾಗ ಶ್ರೇಷ್ಠ ಮಟ್ಟದ ಚಿತ್ರಗಳನ್ನು ಡಬ್ಬಿಂಗ್ ಮಾಡುವುದು ಅಗತ್ಯ.
ಪ್ರೇಕ್ಷಕರು ಹಾಗು ಕನ್ನಡ ಚಿತ್ರೋದ್ಯಮದವರನ್ನು ತೃಪ್ತಿ ಪಡಿಸಲು ಈ ಪ್ರಯೋಗ ಮಾಡಿದಲ್ಲಿ ಸಮಾಧಾನಕರ ಉತ್ತರ ದೊರೆಯುವುದು ಎನ್ನುವುದು ನನ್ನ ಅಭಿಪ್ರಾಯ .
10-103-2011
