
ಕನ್ನಡ ರಂಗಭೂಮಿಯ ಮೇಲೆ ಬಂಗಾಳಿ ನಾಟಕಗಳ ಪ್ರಭಾವ ಎಲ್ಲಿಯವರೆಗೂ ಇದೆಯೆಂದರೆ-ಸಾಂಸ್ಕೃತಿಕ ಚಟುವಟಿಕೆ ತಾಣವನ್ನು ರವೀಂದ್ರರ ಹೆಸರಲ್ಲಿ ಗುರುತಿಸುವಲ್ಲಿಯವರೆಗೆ. ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಬಂದವರು ಮೊದಲಿಗೆ ಮುಖ್ಯವಾಗಿ ಎದುರಿಸುವ ತೊಂದರೆಯೆಂದರೆ ಸ್ಥಳಾವಕಾಶ. ರಂಗದ ಮೇಲೆ ಅಭಿನಯಿಸುವಾಗ/ನಿರ್ದೇಶಿಸುವಾಗ ಅವರು ಎಷ್ಟೇ wide ಆಗಿರುವಂತಹ ಕಥೆಯನ್ನು ಮತ್ತು ಹಿನ್ನಲೆಯನ್ನು ಆರಿಸಿಕೊಂಡರೂ ಅವರದನ್ನು ವ್ಯಕ್ತಪಡಿಸಬೇಕಾಗಿರುವುದು, ದೃಶ್ಯೀಕರಿಸಬೇಕಾಗುವುದು ರಂಗ ಸ್ಥಳದ ಪರಿಮಿತಿಯಲ್ಲೇ. ಆ ಅನುಭವದ ಹಿನ್ನೆಲೆಯಿಂದ ಬಂದವರಿಗೆ ದಿಢೀರನೆ ಕರ್ನಾಟಕದಿಂದ ಅಸ್ಸಾಂವರೆಗಿನ ವಿಶಾಲವಾದ ರಂಗಸ್ಥಳ ನೀಡಿದರೆ ಅಲ್ಲಿಯ wide spaceನ್ನು ಬಳಸಿಕೊಳ್ಳುವುದರಲ್ಲಿ ಉಂಟಾಗುವ ಸಂಧಿಗ್ದತೆಗೆ ಉತ್ತಮ ಉದಾಹರಣೆ ಒಲವೇ ಮಂದಾರ.
ಭಾರತೀಯ ಜನಪದ ಮತ್ತು ಪೌರಾಣಿಕ ಕಥೆಗಳು ಬಹುತೇಕ ವಿಶಾಲವಾದ ವ್ಯಾಪ್ತಿಯನ್ನು ಹೊಂದಿವೆ. ರಾಮಾಯಣ ಮಹಾಭಾರತದಿಂದ ಪ್ರಾರಂಭಿಸಿ ಜನಪದ ಕಥೆಗಳಲ್ಲಿನ ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ’ ಎಂಬ ಕಥೆಗಳವರೆಗೂ ಇದನ್ನು ಕಾಣಬಹುದು. ಕಥೆ-ಪುರಾಣಗಳು ಎಂದಿಗೂ ಒಂದೇ ಸ್ಥಳ ಘಟನೆಯ ಸುತ್ತಾ ಪ್ರಾರಂಭವಾಗಿ ಅಲ್ಲೇ ಮುಗಿಯುವುದಿಲ್ಲ.
ಚೆಗ್ವಾರನ ಜೀವನ ಕುರಿತಾದ ’ಮೋಟರ್ ಸೈಕಲ್ ಡೈರಿ’ ಸಿನಿಮಾವು ಕೂಡ ಪ್ರಯಾಣದಲ್ಲಿನ ಅನುಭವಗಳ ಮೂಲಕ ಚೆಗ್ವಾರನ ಜೀವನದಲ್ಲಿನ ಬದಲಾವಣೆಗೆ ಕಾರಣವಾಗುತ್ತದೆ. ಆ ಬದಲಾವಣೆ ಅಲ್ಲಿಯವರೆಗಿನ ಅವನ ಜೀವನದ ಗತಿಯನ್ನೇ ಬದಲಾಯಿಸಿ ಬಿಡುತ್ತದೆ. ಅಂತಹದೆ ಬದಲಾವಣೆ ಒಲವೇ ಮಂದಾರ ಸಿನಿಮಾದಲ್ಲಿ ನಾಯಕಿಯ ಆಗಮನದೊಂದಿಗೆ ಪ್ರೀತಿಯ ಪಯಣದಲ್ಲಿರುವ ನಾಯಕನ ಧೋರಣೆಗೆ ಏಕಾಏಕಿ ತಿರುವು ನೀಡುವುದರಲ್ಲಿ ಕಾಣಿಸುತ್ತದೆ. ಅದರ ಸಮರ್ಥನೆಗೆಂದು, ಪ್ರೀತಿಯ ಪಡೆಯಲು ಓಡುವ ನಾಯಕನ ಪಯಣದಲಿ ಘಟನೆಗಳ ಕೊಲಾಜ್ ಮೂಲಕ ಗಟ್ಟಿಗೊಳಿಸುತ್ತಾ ಸಾಗುವ ಕ್ರಮವಿದೆ.
ಈ ಸಿನಿಮಾದ ಕಥೆಯಲ್ಲಿ ಕಾಣುವ ಪ್ರಧಾನ ಕ್ಲೀಷಾತ್ಮಕ ಅಂಶವೆಂದರೆ ಪ್ರೀತಿ ಅನ್ನೋದು ಮಧ್ಯಮ ಅಥವ ಕೆಳವರ್ಗದ ಆಸ್ತಿ ಎಂದು. ಅದು ಮೇಲ್ವರ್ಗದವರಿಗೆ ಪಾಠ ಮಾಡಲಿಕ್ಕೇ ಇರುವಥದ್ದು ಎಂಬಂತ ಕ್ಲೀಷೆಗಳು..ಖಾಯಿಲೆ ಪೀಡಿತ ಹೆಂಡತಿಗೆ ಕಾಶಿ ತೋರಿಸುವ ಚಮ್ಮಾರನಿಂದ ಶುರುವಾಗಿ, ರೈತ, ದಶರಥ ಮಾಂಜಿ-ಮೊಮ್ಮಗಳು, ವೇಶ್ಯೆ, ಕಾಡಿನಲ್ಲಿ ಕಂದಕದಿಂದ ಪಾರು ಮಾಡುವ ಕಾಡು ಜನರವರೆಗೂ ಸಾಗುತ್ತಲೇ ಇರುತ್ತದೆ.
ಮಗನ ಪ್ರೀತಿ ಪಡೆಯಲು ತಂದೆಯ ಪರಿತಾಪದ ಕಥಾ ಹಿನ್ನಲೆಯ ಇರಾನಿಯನ್ ಸಿನಿಮಾ ‘ಫಾದರ್’ ಮತ್ತು ತಂದೆಯ ಪ್ರೀತಿಗಾಗಿ ಪರಿತಪಿಸುವ ಕುರುಡು ಹುಡುಗನ ಕಥೆಯ ’ಕಲರ್ ಆಫ್ ಪ್ಯಾರಡೈಸ್’ ಸಿನಿಮಾಗಳಲ್ಲಿ ಪ್ರೀತಿ ಮತ್ತು ಅದರ reach ಆಗುವ ಮಧ್ಯದ time and space ನ ಘಟಾನಾವಳಿಯಲ್ಲಿ ಹುಟ್ಟುವ ಭಾವ ತೀವ್ರತೆ ಇಲ್ಲಿ ನಾವು ಕಾಣದೆ ಪ್ರೀತಿಯ ಮುಂದೆ ಎಲ್ಲರೂ ತಲೆಬಾಗಲೇಬೇಕೆಂಬ ರೂಢಿ journey ಯ space ನಲ್ಲಿ ಸೃಷ್ಟಿಸಬಹುದಾಗಿದ್ದ raw ನ ಕೊರತೆ ಸಿನಿಮಾದಲ್ಲಿ ಕಾಣಬಹುದು.
ಈ ಸಿನಿಮಾದಲ್ಲಿನ ಪ್ರಮುಖವಾಗಿ ಕೊಲಾಜ್ ಶೈಲಿಯ ಈ ಕೆಳಗಿನ ಅಂಶಗಳನ್ನು ಗುರುತಿಸಬಹುದು.
::ಒಲವೇ ಮಂದಾರ ಸಿನಿಮಾದ ‘ಪ್ರೀತಿ’ ಎಂಬ suggestion ನಲ್ಲಿ ಕಾಣುವ wide ಹಿನ್ನಲೆಯು, ಪ್ರಸ್ತುತ ಕನ್ನಡ ಸಿನಿಮಾಗಳ ಕಥೆಗಳ closeup ಚೌಕಟ್ಟಿನಲ್ಲಿ out off focusನಲ್ಲಿ merge ಆಗಿ ಉಳಿದುಬಿಟ್ಟಿದೆ. ಸಿನಿಮಾದಲ್ಲಿನ ಸಂಭಾಷಣೆಗಳು ಸಂದೇಶಾತ್ಮಕ ನಾಟಕಗಳಲ್ಲಿನ sumಭಾಷಣದಂತೆ ಅನಿಸಿ ನೀ‘ರಸ’ವಾದ ಭಾವತೀವ್ರತೆಗೆ ತಳ್ಳಲ್ಪಡುವಂತಿದ್ದರೂ, ಚಿತ್ರಕಥೆಯಲ್ಲಿ ಸಾಂಪ್ರದಾಯಿಕವಲ್ಲದ ಕಥನಾಕ್ರಮದಲ್ಲಿ ಹೊಸದೇನೋ(!) ಹೇಳಬೇಕೆಂದು ತಪಿಸುವ ತುಡಿತವನ್ನು ಸಿನಿಮಾದ ಪ್ರತಿ ಫ್ರೇಮಿನಲ್ಲಿ ನಾವು ಕಾಣಬಹುದು.
::ದೇವದಾಸ್ನ ಚಂದ್ರಮುಖಿಯ ಬಂಗಾಳಿ ಪ್ರಭಾವದ ಪ್ರಭೆಯಂತಹ ‘ಕ್ಲೀಷೆ’ ವೇಶ್ಯೆ ಪಾತ್ರದಲ್ಲಿ ಪ್ರಭಾವದ ಕಂಪನ್ನು ಕಥೆಗೆ ಪೂರಕವಾಗಿ, ಬಂಗಾಲದಲ್ಲಿಯೇ ನಾಯಕನಿಗೆ ಎದುರಾಗಿಸಿರುವುದು ವಿಪರ್ಯಾಸವೋ ಅಥವ ಸೂ****ಯನ್ನು ಬೀ
ಪ್ ಸೌಂಡಲ್ಲೇ ಉಚ್ಚರಿಸುತ್ತಾ ಸೂಳೆಯನ್ನು ದೈವೀಕರಿಸಿರುವುದರಲ್ಲಿನ ಸೆನ್ಸಾರ್ಡ್ ಅಲ್ಲದ ವೈಭವೀಕರಣವೋ ಎಂಬ ನಿಗೂಢ ಕಥನ ಕಲ್ಕತ್ತಾದಲ್ಲಿ ನಾಯಕನಿಗೆ ಎದುರಾಗುವುದು, ಈ ಸಿನಿಮಾದಲ್ಲಿ ಪ್ರೀತಿಯ ಹಲವು ಮುಖಗಳನ್ನು ಪರಿಚಯಿಸುವ ಕ್ರಮದಲ್ಲಿ ಹಾದು ಹೋಗುತ್ತದೆ.
::ಬಲಿತೆಗೆದುಕೊಂಡ ಬೆಟ್ಟವನ್ನೇ ಅಗೆದು, ಕಳೆದುಕೊಂಡ ಪ್ರೀತಿಗೆ ‘ದಾರಿ’ಯ ಸುಧೀರ್ಘ ‘ರೂಪಕ’ದಲ್ಲಿ ಕಾಣಿಕೆ ನೀಡಿದ ದಶರಥನ ಮೊಮ್ಮಗಳಿಗೆ ಒಂದು ದಿನದ ಅತಿಥಿಯಾಗಿ ಆರೈಕೆ ಪಡೆದ, ಇನ್ನು ಪ್ರೀತಿಯೇ ಫಲಿಸದ, ಕೇವಲ ಘಟಿಸಿದೆ ಎಂಬ ನಂಬಿಕೆಯಲ್ಲಿ ಫಲದ ಆಸೆಯ ಪ್ರಯಾಣವನ್ನು ಕೈಗೊಂಡಿರುವ ಪ್ರಯಾಸದ ಪಯಣಿಗನಿಗೆ ಸೋಲುವ, ಅವನ ಕುರಿತಂತೆ ಕನಸು ಕಾಣುವ ಕ್ರಿಯೆಗಳು ಅಲ್ಲಿಯವರೆಗೂ ನಡೆಯುವ ಘಟನಾವಳಿಗಳಿನ್ನೆಲ್ಲ ಒಂದೆಡೆ ನಿಲ್ಲಿಸಿ, ಪ್ರೀತಿಯ ಭಾಷ್ಯಕ್ಕೆ ಹೊಸ ಮಂದಾರದ ಕಂಪಿನ ಲೇಪನವನ್ನು ಹಚ್ಚುವ ಪ್ರಯತ್ನದಂತೆ ಕಾಣಿಸುತ್ತವೆ.
::ಸಿನಿಮಾಗೊಂದು ಕ್ಲೈಮ್ಯಾಕ್ಸ್ ಇರುವಂತೆ ಈ ಬರಹಕ್ಕೊಂದು ಕ್ಲೈಮ್ಯಾಕ್ಸ್ ರೂಪದಲ್ಲಿ ಸಿನಿಮಾ ಬಗ್ಗೆ ಹೇಳುವುದಾದರೆ- ಕೊಡುವುದರಲ್ಲೇ, ತೃಪ್ತಿ ಪಡಿಸುವುದರಲ್ಲೇ, ತ್ಯಾಗದಲ್ಲೇ... ಇಂತಹ ‘ಲ್ಲೇ’ ಗಳಲ್ಲೇ ಪ್ರೀತಿ ಇದೆಯೆಂಬಂತೆ ಚಿತ್ರಕಥೆಯ ಕಥನವನ್ನು ನಿರ್ದೇಶಕರು ಹೆಣೆದಿದ್ದಾರೆ. ತನಗೆ ಸಿಗದ ನಾಯಕಿಗಾಗಿ, ಸಿಗುವಂತಾಗಲು ಬೆಟ್ಟದತುದಿಗೇ ಹೋಗಿ ಬೀಳಬೇಕೆಂಬ ಜಿಗುಪ್ಸೆ ತುಂಬಿಸಿ ಅಲ್ಲೊಂದು ಸ್ವಗತದ ಹಿನ್ನೆಲೆಯ negative ರೂಪದ ಪ್ರೀತಿಯ ವ್ಯಾಖ್ಯಾನದ ಭಾವವನ್ನು ತೋರುವ sumಭಾಷಣೆ, ತಾನೇ ಹೆಣೆದಿರುವ ಕಥನವನ್ನು ತನ್ಮೂಲಕ ಧಿಕ್ಕರಿಸುವ ರೂಪಕವನ್ನಾಗಿಸಿ ಈರ್ವರನ್ನೂ ಒಂದಾಗಿಸಿ ಅಂತ್ಯಗೊಳಿಸಿದ್ದಾರೆ.
15-03-2011 (tags:director jayateertha, olave mandara kannada film review, cameraman ravikumar sana, ಒಲವೇ ಮಂದಾರ' ಚಿತ್ರ ವಿಮರ್ಶೆ, samvaada.com)

2012-03-13 05:44:46
ಅಭಿನಂದನೆಗಳು.ಚಿತ್ರ ಸದಭಿರುಚಿಯಿಂದ ಮೂಡಿಬಂದಿದೆ.ಈ ಭರವಸೆ ಹುಸಿಯಾಗದಂತೆ ಮುಂದಿನ ಚಿತ್ರ ಮಾಡಿ ಖಂಡಿತ ಚಿತ್ರಮಂದಿರಕ್ಕೆ ಬಂದು ನೋಡುತ್ತೇವೆ.ಧನ್ಯವಾದಗಳು.ಧನ್ಯವಾದಗಳು.ನಿಮ್ಮೆಲ್ಲ ಪ್ರಯತ್ನಗಳು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.