ಇತ್ತೀಚಿನ ದಿ
ನಗಳಲ್ಲಿ ಯಾವುದೇ ಕನ್ನಡ ಚಿತ್ರದ takings, screenplay ಅಥವಾ treatment(ಎಲ್ಲಾ ಫಿಲ್ಮಿ ಮಾತಲ್ಲಿ) ಚೆನ್ನಾಗಿ ಮೂಡಿ ಬಂದರೆ-
ಒಂದು ಅನುಮಾನ ಕಾಡತ್ತೆ ? ಈ ಚಿತ್ರ remake ಇರಬಹುದೇ ?
ನಮಲ್ಲಿ ನುರಿತ ತಾಂತ್ರಿಕ ವರ್ಗ ಇದ್ದರೂ ಅದನ್ನು ಕನ್ನಡದ ಕಥೆಯಾಗಿಸುವಲ್ಲಿ ಸೋಲುತ್ತಾರೆ. ರವಿಚಂದ್ರನ್ ಚಿತ್ರಗಳು ಅಂದ್ರೆ ಸಾಕು, ಇದು ಎಲ್ಲಿಂದಲೋ ಕಾಪಿ ಮಾಡಿದ್ದು ಎನ್ನುವುದು ಎಲ್ಲರ ತಿಳುವಳಿಕೆ. ರವಿಚಂದ್ರನ್ ಅದನ್ನುremake ಅಲ್ಲ ‘ravimake ಎಂದು ಕರೆಯುತ್ತಾರೆ . copy ಅನ್ನುವ ಬದಲು inspiration ಎನ್ನುವುದು ಹೊಸ ಸ್ಟೈಲ್.
ಸುದೀಪ್ ಕೂಡ ಇದೇ ಮಾರ್ಗ ಅನುಸರಿಸಿ ತಾನು ಒಬ್ಬ ಒಳ್ಳೆ ನಿರ್ದೇಶಕ ಎಂಬ ಗುಂಗಿನಲ್ಲಿ ಇದ್ದಾರೆ.
ನಿರ್ಮಾಪಕನಿಗೆ ಹಾಕಿದ ದುಡ್ಡು ವಾಪಸ್ ಬಂದ್ರೆ ಸಾಕು, ನಿರ್ದೇಶಕನಿಗೆ/ನಾಯಕನಿಗೆ ಒಂದು ಹಿಟ್ ಆದ್ರೆ ಸಾಕು,
ಪ್ರೇಕ್ಷಕನಿಗೆ ಮನರಂಜನೆ ಸಿಕ್ಕರೆ ಸಾಕು. ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾದ್ರೆ ಸಾಕು ಅಂತಿದೆ ನಮ್ಮ ಚಿತ್ರೋದ್ಯಮ.
remake ತಪ್ಪಾ ? 
ಅದು ಸರಿ ಅನ್ನುವುದಾದರೆ ನಮ್ಮ ಸ್ವಂತಿಕೆಗೆ ಸ್ಥಾನ ಎಲ್ಲಿದೆ ?
‘ಸ್ವಾತಿಮುತ್ತು’ ಚಿತ್ರವನ್ನು ವೀಕ್ಷಿಸಿದ ಪ್ರೇಕ್ಷಕರು "ಸುದೀಪ್, ಕಮಲ ಹಾಸನ್ ಮುಂದೆ ಏನೂ ಅಲ್ಲ" ಎನ್ನುವ ಒನ್‌ಲೈನ್ ಕಮೆಂಟ್ ಹೇಳಿ ಚಿತ್ರವನ್ನು ನಿರಾಕರಿಸುತ್ತಾರೆ.
ಸುದೀಪ್ ಉತ್ತಮ ಕಲಾವಿದನಾದರೂ ಅನುಕರಣೆಯಲ್ಲಿ ವಿಫಲ. ಹಾಗೆಯೇ ನಿರ್ದೇಶನದಲ್ಲೂ. ಒಂದು ಚಿತ್ರ remake ಆದಲ್ಲಿ ಸರ್ವೆ ಸಾಮಾನ್ಯವಾಗಿ ಪ್ರೇಕ್ಷಕ ಮೂಲ ಚಿತ್ರದೊಂದಿಗೆ ಹೋಲಿಸಿ ನೋಡ್ತಾನೆ. ಚಿತ್ರೋದ್ಯಮದವರು ಏತಕ್ಕೆ ತಮನ್ನ ತಾವೇ ಮೂರ್ಖರನ್ನಾಗಿ ಮಾಡಿಕೊಳ್ಳುತ್ತಾ ಇದ್ದಾರೋ ಗೊತ್ತಾಗ್ತಿಲ್ಲ .
ಕನ್ನಡ ಚಿತ್ರೋದ್ಯಮವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು remake ಚಿತ್ರಗಳು ತಡೆ ಗೋಡೆಯಂತೆ ಕೆಲಸ ಮಾಡಿವೆ.
remake ಚಿತ್ರಗಳನ್ನು ತಡೆಯಲು ನಾನಾ ಪ್ರಯತ್ನ ನಡೆದಿವೆ. remake ಚಿತ್ರಗಳಿಗೆ ಸಬ್ಸಿಡಿ, ಪ್ರಶಸ್ತಿ ಇತ್ಯಾದಿಗಳನ್ನು ನಿರಾಕರಿಸುತ್ತಿರುವುದು ಒಳ್ಳೆಯ ಬೆಳವಣಿಗೆ.
ರಿಮೇಕ್ ಸಿನಿಮಾಗಳ ಮೇಲೆ ಕೊಟಿಗಟ್ಟಲೆ ಹಣ ಸುರಿಯಲು ತಯಾರಾಗುವ ನಿರ್ಮಾಪಕನಿಗೆ ೨೦/೩೦ ಲಕ್ಷಗಳ ಸಬ್ಸಿಡಿ ಹುಣಸೆ ಬೀಜಕ್ಕೆ ಸಮಾನ. ಇನ್ನು ಪ್ರಶಸ್ತಿಬಗ್ಗೆ ತಲೆಕೆಡಸಿಕೊಳ್ಳುವ ಪ್ರಮೇಯವೇ ಇಲ್ಲ.
ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಹೇರಳವಾಗಿ ದುಡ್ಡು ಮಾಡಿದವರಿಗೆ ಚಿತ್ರ ಮಾಡುವುದೊಂದು ಪ್ರತಿಷ್ಠಿತ ಷೋಕಿ. ಚಿತ್ರ ನಿರ್ಮಾಪಕ ಅನ್ನಿಸಿಕೊಳ್ಳಬೇಕೆಂಬ ಏಕೈಕ ಹಂಬಲದಿಂದ ಕಳಪೆ ಚಿತ್ರಗಳ ನಿರ್ಮಾಣಕ್ಕೆ ಕಾರಣರಾಗುತ್ತಾರೆ. ಮೂರೇ ತಿಂಗಳಲ್ಲಿ ಚಿತ್ರ ನಿರ್ಮಾಣ ಮಾಡುವ ಹಪಹಪಿಗೆ ಬಿದ್ದು ಒಬ್ಬ ನಿರ್ದೇಶಕನನ್ನು ಗಂಟು ಬಿದ್ದು ಒಂದಷ್ಟು ತೆಲುಗು/ತಮಿಳು/ಮಲೆಯಾಳಿ ಚಿತ್ರಗಳನ್ನು ನೋಡಿ ಒಂದನ್ನು ಸೆಲೆಕ್ಟ್ ಮಾಡಿ ಅದನ್ನು ಕನ್ನಡಕ್ಕೆ ಮಾಡಿ ಎಂದು ದುಂಬಾಲು ಬೀಳ್ತಾರೆ. ನಿರ್ದೇಶಕ frame to frame ಮೂಲ ಚಿತ್ರದ ದೃಶ್ಯ ಗಳನ್ನೂ ಕಾಪಿ ಮಾಡ್ತಾನೆ, ಸಂಗೀತ ಸಂಯೋಜನೆಯ ಕೆಲಸ ಅಷ್ಟೇ ಸುಲಭ. ನಾಯಕನಿಗೆ ಮೂಲ ಚಿತ್ರದ ನಾಯನನ್ನು ಅನುಕರಣೆ ಮಾಡಲು ಹೇಳುತ್ತಾರೆ. ಖಲ್ಲಾಸ್ ! ಚಿತ್ರ ನಿರ್ಮಾಣವಾಗುತ್ತದೆ.ಇಷ್ಟೇ! ಸ್ಟಾರ್ಟ್ ಕಟ್ ಹೇಳಲು ಬಂದರೆ ಸಾಕು ಯಾರು ಬೇಕಾದ್ರೂ ನಿರ್ದೇಶನ ಮಾಡಬಹುದು ಎನ್ನುವುದನ್ನು ಸಾಬೀತು ಪಡಿಸುತ್ತಾರೆ. ಇದನ್ನೇ ಅಲ್ವಾ ಸುದೀಪ್, ತರದವರು ಇಷ್ಟು ವರ್ಷ ಮಾಡಿಕೊಂಡು ಬಂದದ್ದು?
ಹಾಗಿದ್ದಲ್ಲಿ remake ತಡೆಯುವುದು ಹೇಗೆ ?
ಒಂದೇ ಮಾರ್ಗ! ಚಿತ್ರೋದ್ಯಮ ಸ್ವಾಭಿಮಾನಿಯಾಗಬೇಕು. ಹೆಸರಾಂತ ನಾಯಕರು remake ಚಿತ್ರದಲ್ಲಿ ನಟಿಸಲು ನಿರಾಕರಿಸಬೇಕು. ಹಾಗೆಯೇ ಕಳಪೆ ಎನ್ನಿಸುವ ಸ್ವಮೇಕ್‍ಗಳನ್ನೂ. ನಿರ್ದೇಶಕ, ಸಂಗೀತ ಸಂಯೋಜಕರು ಈ ನಿಟ್ಟಿನಲ್ಲಿ ಮನಸ್ಸು ಮಾಡಬೇಕಿದೆ. ಶಿವರಾಜ್‍ಕುಮಾರ್ ಈ ನಿಟ್ಟಿನಲ್ಲಿ ಮಾದರಿಯಾಗುತ್ತಾರಾದರೂ ತೀರಾ ಕಳಪೆ ಎನ್ನಿಸುವ ಕಳಪೆ ಕಾನ್ಸೆಪ್ಟ್‍ಗಳನ್ನು ಒಪ್ಪಿಕೊಂಡು ಸತತ ಸೋಲು ಅನುಭವಿಸುತ್ತಾರೆ.
ಕಾಪಿ ಹೊಡೆದು ಪರೀಕ್ಷೆ ಪಾಸ್ ಮಾಡಬಹುದು, ಆದರೆ ಜ್ಞಾನಿಯಾಗಲು ಸಾಧ್ಯವಾಗುವುದಿಲ್ಲ ಎಂದು ನಮ್ಮ ಮೇಷ್ಟ್ರು ಹೇಳ್ತಿದ್ರು, ಈ ಸಂದರ್ಭಕ್ಕೆ ಅದು ಅನ್ವಯಿಸುತ್ತದೆ.
ಅಂತರ್ರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ workshopsಗಳನ್ನಾಗಲಿ, ಚರ್ಚೆಗಳನ್ನಾಗಲಿ ನಡೆಸಲು/ಮುಂದಾಳತ್ವ ವಹಿಸಲು ಕೆಲವು ಅರ್ಹತೆಗಳು ಬೇಕು. ಆ ಮಟ್ಟಕ್ಕೆ ಹೋಗಬೇಕಾದರೆ ಸ್ವಂತಿಕೆ ಬೇಕು ಎಂಬುದನ್ನು ನಾವು ಮರಿಯಬಾರದು. ಕನ್ನಡ ಚಿತ್ರಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕಾದ ಕೆಲಸವನ್ನು ಚಿತ್ರೋದ್ಯಮ ಮಾಡಬೇಕಿತ್ತು. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೋದು ಗಾಂಧಿನಗರದ ರಿಮೇಕ್ ಇಲಿಗಳಿಂದ ಸಾಧ್ಯವೆ?
18-03-2011 tags:kannada remake films, svatimuttu, tamil kamalhasan, kempegouda, sudeep,ಕನ್ನಡ ಚಿತ್ರಗಳು,ರವಿಚಂದ್ರನ್,samvaada.com, kempegouda film reviw
