ದೃಶ್ಯಕ್ಕೊಂದು ನುಡಿಗಟ್ಟು

ಸೂಪರ್ ಮೂನ್ ಕೆಳಗೊಂದು ವಾಕ್!

super moon,bangalore city railway station, shivu k, chaayakannadi.blogspot.com,ಛಾಯಾಕನ್ನಡಿ, samvaada.com,ರೈಲು ನಿಲ್ದಾಣದ ಪ್ಲಾಟ್ ಫಾರಂ,ಸೂಪರ್ ಮೂನ್‍,ಮಲ್ಲೇಶ್ವರಂಈ ಸೂಪರ್ ಮೂನ್‍ನಿಂದ ಏನಾಗಿಬಿಡುತ್ತದೋ ನಾವು ಒಂದು ಕೈ ನೋಡೇ ಬಿಡೋಣವೆಂದು ತೀರ್ಮಾನಿಸಿ ನಾನು ಮತ್ತು ಹೇಮಾಶ್ರಿ ರಾತ್ರಿ ಊಟವನ್ನು ಬೇಗ ಮುಗಿಸಿ ಹೊರಟೇ ಬಿಟ್ಟೆವು. ಎಲ್ಲಿಗೆ ಅಂದುಕೊಂಡ್ರಿ?  ಮತ್ತೆಲ್ಲಿಗೆ ಮಲ್ಲೇಶ್ವರಂ ರೈಲ್ವೇ ನಿಲ್ದಾಣಕ್ಕೆ.  ಇದರಲ್ಲೇನು ವಿಶೇಷವಿಲ್ಲ. ನಾವು ಈ ರೀತಿ ಮುಕ್ಕಾಲುಗಂಟೆಯ ರಾತ್ರಿ ವಾಕ್ ಪ್ರಾರಂಭಿಸಿದ್ದು ಕಳೆದ ನವೆಂಬರಿನ ದೀಪಾವಳಿ ಮುಗಿದ ನಂತರ. ಈಗಾಗಲೇ ನಾಲ್ಕು ತಿಂಗಳು ಕಳೆದರೂ ನಮ್ಮ  ರಾತ್ರಿಯ ಜೋಡಿ ನಡಿಗೆ  ನಮ್ಮ ಮಲ್ಲೇಶ್ವರಂ ರೈಲು ನಿಲ್ದಾಣದ ಪ್ಲಾಟ್‍ಫಾರಂ ಮೇಲೆ ಜೋಡಿಹಳಿಗಳಂತೆ ಸರಾಗವಾಗಿ ಸಾಗುತ್ತಿದೆ ಅಲ್ಲಲ್ಲ  ನಡೆಯುತ್ತಿದೆ.  ಆರೋಗ್ಯದ ದೃಷ್ಟಿಯಿಂದ ಇದು ತುಂಬಾ ಒಳ್ಳೆಯದೆಂದು ನಾವು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಗೊತ್ತಾಗಿಬಿಟ್ಟಿತು.
ಅವುಗಳಲ್ಲಿ ಮೊದಲಿಗೆ ಉಂಡ ಊಟ ಜೀರ್ಣವಾಗುವುದು, ರಾತ್ರಿ ಚೆನ್ನಾಗಿ ನಿದ್ರೆ ಬರುವುದು, ಹಿತವಾದ ವಾತಾವರಣದಲ್ಲಿ ಮುಕ್ಕಾಲು ಗಂಟೆ ಸುತ್ತಾಡಿದಾಗ ದೇಹ ಮತ್ತು ಮನಸ್ಸು ಉಲ್ಲಾಸಗೊಳ್ಳುವುದು ಇವೆಲ್ಲಾ ನಮಗಾದ ಲಾಭಗಳು. ಇದಲ್ಲದೇ ಕೆಲವು ಸಕ್ಕತ್ ಬೋನಸ್ಸುಗಳು ನಿತ್ಯ ಸಿಗಲಾರಂಭಿಸಿದವಲ್ಲ!  ಅದನ್ನಂತೂ ನಾನು ವಿವರಿಸಲೇಬೇಕು.

 ನಮ್ಮ ವಾಕಿಂಗ್‍ನಲ್ಲಿ ಮೂರು ಹಂತ. ಮೊದಲನೆಯದಾಗಿ ನಮ್ಮ ಮನೆಯಿಂದ ರೈಲು ನಿಲ್ದಾಣದವರೆಗೆ ಒಂದು ಪರ್ಲಾಂಗ್, ರೈಲು ನಿಲ್ದಾಣದ ಪ್ಲಾಟ್ ಪ್ಲಾರಂನಲ್ಲಿ ಎರಡು ಅಥವ ಮೂರು ಸುತ್ತುವ ಎರಡನೆ ಹಂತ, ಅಲ್ಲಿಂದ ವಾಪಸ್ ಮನೆಗೆ ಬರುವ ಮೂರನೆ ಹಂತ. ರೈಲು ನಿಲ್ದಾಣದ ಪ್ಲಾಟ್ ಫಾರಂ ಮೇಲೆ ಕಾಲಿಟ್ಟ ಕೂಡಲೇ ಶುರುಮಾಡಿಬಿಡುತ್ತಾಳೆ ತನ್ನ ಮಾತುಗಳನ್ನು. ನನ್ನ ಶ್ರೀಮತಿಗೆ ರಾತ್ರಿಯ ಆ ಅರ್ಧಗಂಟೆಯಲ್ಲಿ ಅವಳ ನಿತ್ಯ ಕೆಲಸದ ವರದಿ ಒಪ್ಪಿಸುವುದಲ್ಲದೇ ಅಕ್ಕಪಕ್ಕದ ಮನೆಯವರ ವಿಚಾರಗಳು, ಮಕ್ಕಳಾಟ, ಅವರೊಂದಿಗೆ ಶೀತಲಯುದ್ಧ, ತಮಗಿಷ್ಟ ಬಂದವರ ಜೊತೆ ಮನಸಾರೆ ನಕ್ಕಿದ್ದು, ಅಷ್ಟೇ ಅಲ್ಲದೇ ತನ್ನೂರಿನ ಹೊಸ ಹೊಸ ಸುದ್ಧಿಗಳು, ಅಲ್ಲಿ ಯಾರಿಗೋ ಮದುವೆ ಗೊತ್ತಾಯಿತಂತೆ, ಇಲ್ಯಾರೋ ಗೊತ್ತಾದ ಮದುವೆ ಮುರಿಯಿತಂತೆ, ಆ ಅಂಗಡಿಯ ತರಕಾರಿ ಬೆಲೆ ತುಂಬಾ ಜಾಸ್ತಿ, ಅವನು ಎರಡು ರೂಪಾಯಿ ಕೊಟ್ಟರೂ ಒಂದು ಕಡ್ಡಿ ಕೊತ್ತಂಬರಿ ಸೊಪ್ಪು ಕೊಡುವುದಿಲ್ಲ.........ಹೀಗೆ ಸಾಗುತ್ತದೆ ಅವಳ ಮಾತುಗಳು.. ರಸ್ತೆಯಲ್ಲಿ ನಡೆಯುವಾಗ ನಾನು ಸ್ವಲ್ಪ ಜೋರಾಗಿ ಮಾತಾಡಿದರೆ " ರೀ ಮೆಲ್ಲಗೆ ಮಾತಾಡ್ರಿ, ಹೇಳಿ ಕೇಳಿ ಇದು ರಸ್ತೆ, ಯಾರಾದ್ರೂ ಕೇಳಿಸಿಕೊಂಡಾರು" ಅನ್ನುತ್ತ ನನಗೆ ಆಗಾಗ ಎಚ್ಚರಿಕೆ ನೀಡುತ್ತಾ ತಾನೊಂದು ಮಾತಾಡದೇ ಬರುವ ಇವಳು, ಈ ರೈಲು ನಿಲ್ದಾಣ ತಲುಪುತ್ತಿದ್ದಂತೆ ಇದು ತನ್ನ ಸ್ವಂತದ್ದು ಅಂದುಕೊಂಡುಬಿಡುತ್ತಾಳೇನೋ..ಹೀಗೆ ಅರಾಮವಾsuper moon,bangalore city railway station, shivu k, chaayakannadi.blogspot.com,ಛಾಯಾಕನ್ನಡಿ, samvaada.com,ರೈಲು ನಿಲ್ದಾಣದ ಪ್ಲಾಟ್ ಫಾರಂ,ಸೂಪರ್ ಮೂನ್‍,ಮಲ್ಲೇಶ್ವರಂಗಿ ಅಕ್ಕಪಕ್ಕದವರು ಯಾರು ಗಮನಿಸುತ್ತಾರೋ ಇಲ್ಲವೋ ಎನ್ನುವುದನ್ನು ನೋಡದೇ ತನ್ನದೆ ಸಣ್ಣ ದ್ವನಿಯ ಲೋಕದಲ್ಲಿ ಖುಷಿಯಿಂದ ಎಲ್ಲವನ್ನು ಹಂಚಿಕೊಳ್ಳುತ್ತಾಳೆ.  ನಿಜಕ್ಕೂ ನಮ್ಮ ಹೆಣ್ಮಕ್ಕಳ ಬಾಯಿಂದ ಹೀಗೆ ಸರಾಗವಾಗಿ ಸುದ್ದಿ ತಿಳಿಯಬೇಕಾದರೆ ನಿತ್ಯ ಇಂಥದೊಂದು ವಾಕ್ ಇರಲೇಬೇಕು ಕಣ್ರಿ!

ಇಷ್ಟೇ ಅಲ್ಲದೇ ನಾಳೆ ಮಾಡುವ ಕಾರ್ಯಕ್ರಮದ ಪಟ್ಟಿಗಳು, ಪ್ಲಾನುಗಳ ಸಿದ್ಧತೆಯೂ ನಡೆಯುತ್ತದೆ. ಇದೆಲ್ಲಾ ಅವಳಿಗೆ ಸಿಗುವ ಬೋನಸ್ಸುಗಳು.  ಇನ್ನು ನನಗೆ ಸಿಗುವ ಬೋನಸ್ಸು ಸ್ವಲ್ಪ ವಿಭಿನ್ನವೇ ಅಂದುಕೊಳ್ಳಿ.  ನಾನು ವಾಕಿಂಗ್‍ನಲ್ಲಿರುವ ಆವಳ ಮಾತಿಗೆ ಮಾತು ಸೇರಿಸುತ್ತೇನಾದರೂ ಸ್ವಲ್ಪ ಕಡಿಮೆ ಮಾತಾಡುತ್ತಾ ಹೂ..ಹೌದು, ಕರೆಕ್ಟು....ಅವರಿಗೆ ಬುದ್ಧಿಯಿಲ್ಲ ಬಿಡು, ನಿನ್ನ ಐಡಿಯ ಸರಿಯಿದೆ,............ಹೀಗೆ ಉತ್ತರವನ್ನು ಕೊಡುತ್ತಾ ಜೊತೆ ನಡೆಯುತ್ತಿರುತ್ತೇನೆ.  ಮಾತುಗಾರನಾದ ನಾನು ಸಮವಾಗಿ ಮಾತಾಡದೇ ಹಾಗೆ ಕಡಿಮೆ ಪದಗಳಲ್ಲಿ ಉತ್ತರಿಸುವುದಕ್ಕೂ ಕಾರಣ ನನ್ನ ಕಣ್ಣುಗಳು.  ಅವು ಸುಮ್ಮನಿರುವುದಿಲ್ಲವಲ್ಲ.  ರಸ್ತೆಯಲ್ಲಿ ಬರುವಾಗ ನಾನು ಯಾರನ್ನು ಸರಿಯಾಗಿ ಗಮನಿಸುವುದಿಲ್ಲವಾದ್ದರಿಂದ ನನ್ನ ಮಾತು ಜಾಸ್ತಿಯಾಗಿ ಹೇಮಾಶ್ರೀ ನನಗೆ ಎಚ್ಚರಿಕೆ ನೀಡಿದರೂ ರೈಲು ನಿಲ್ದಾಣದ ಪ್ಲಾಟ್‍ಫಾರಂನಲ್ಲಿ ಕಾಲಿಟ್ಟ ಕೂಡಲೆ ನನಗರಿವಿಲ್ಲದಂತೆ ಜಾಗೃತವಾಗಿಬಿಡುತ್ತವೆ ನನ್ನ ಕಣ್ಣುಗಳು. ಮೊದಲಿಗೆ ಅಲ್ಲಿ ಆಗ ತಾನೇ ರೈಲು ಇಳಿದ ಪ್ರಯಾಣಿಕರು, ಅವರ ದೊಡ್ಡ ದೊಡ್ಡ ಹೊರೆಗಳು, ಲಗ್ಗೇಜುಗಳು, ಕೈಬೀಸಿ ನಡೆಯುವ ಮಂತ್ಲಿ ಪಾಸುಧಾರಿ ಸ್ಕೂಲ್ ಮಾಸ್ತರುಗಳು ಫ್ಯಾಕ್ಟರಿ ಕೆಲಸಗಾರರು, ಆಧಿಕಾರಿಗಳು, ವ್ಯಾಪಾರಿಗಳು, ತುಮಕೂರಿಗೆ ಹೋಗಿ ಬರುವ ಕಾಲೇಜು ಹುಡುಗ ಹುಡುಗಿಯರು, ತರಕಾರಿ-ಸೊಪ್ಪು ಸದೆ ಮಾರಾಟಮಾಡುವ ಹಳ್ಳಿ ಹೆಂಗಸರು..........ಹೀಗೆ ಇವರನ್ನೆಲ್ಲಾ ಒಮ್ಮೆ ಸ್ಕಾನ್ ಮಾಡುತ್ತದೆ.  ಅವರೆಲ್ಲ ಅಲ್ಲಿಂದ ಜಾಗ ಕಾಲಿ ಮಾಡುವ ಹೊತ್ತಿಗೆ ನಮ್ಮ ದಾರಿ ಪ್ಲಾಟ್ ಫಾರಂನ ಅ ತುದಿಯನ್ನು ತಲುಪಿರುತ್ತದೆ. ವಾಪಸ್ಸು ಬರುವಷ್ಟರಲ್ಲಿ ಅಲ್ಲಿ ಹಾಕಿರುವ ಕಲ್ಲು ಬೆಂಚಿನ ಮೇಲೆ ಕುಳಿತಿರುವ ಜನರನ್ನು ಗಮನಿಸಿರುತ್ತೇನೆ.  ಅವರು ಕುಳಿತ ಭಂಗಿಯಲ್ಲೇ ಅವರ ಮನೆಯ ಮತ್ತು ಮನದ ಪರಿಸ್ಥಿತಿಯೇನು ಅಂತ ಅಳೆಯಲೆತ್ನಿಸುತ್ತೇನೆ. 
ಅವರ ಸದ್ಯದ ಬಾಹ್ಯ ಪರಿಸ್ಥಿತಿಯ ಜೊತೆಗೆ ಮನಸ್ಸಿನ ಗತಿಯೇನು ಎನ್ನುವುದನ್ನು ನನ್ನದೇ ವಿಧಾನದಲ್ಲಿ ಲೆಕ್ಕಮಾಡುತ್ತೇನೆ. ಈ ವಿಚಾರದಲ್ಲಿ ನನ್ನದು ಸ್ವಲ್ಪ ಉಲ್ಟಾ ಲೆಕ್ಕಾಚಾರ.  ಹೇಗೆಂದು ಸ್ವಲ್ಪ ವಿವರಿಸಿಬಿಡುತ್ತೇನೆ. ಅಲ್ಲೊಬ್ಬ ತನ್ನ ಮುಖದಲ್ಲಿ ನಗುವನ್ನೇ ತುಂಬಿಕೊಂಡು ಎಲ್ಲರನ್ನೂ ನೋಡುತ್ತಿದ್ದಾನೆ. ಆದ್ರೆ ಆತನ ನಗು ಸಹಜವಲ್ಲ ಅವನ ಮನಸ್ಸಿನಲ್ಲಿ ಏನೋ ಚಿಂತೆಯಿದೆ ಅದನ್ನು ತೋರ್ಪಡಿಸಲಾಗದೇ ಹೀಗೆ ನಗುತ್ತಿದ್ದಾನೆ.  ಇಲ್ಲೊಬ್ಬಳು ಹುಡುಗಿ ಮುಖದ ತುಂಬಾ ಚಿಂತೆಯ ಗೆರೆಗಳನ್ನು ತುಂಬಿಕೊಂಡು ಆಕಾಶವೇ ತಲೆಯ ಮೇಲೆ ಬಿದ್ದಂತೆ ಎದುರಿದ್ದ ಮರದ ಪಕ್ಕದ ಲೈಟನ್ನೇ ದಿಟ್ಟಿಸುತ್ತಿದ್ದಾಳೆ. ಆದ್ರೆ ಅವಳು ನಿಜಕ್ಕೂ ಚಿಂತೆಗೊಳಗಾಗಿಲ್ಲ. ಏಕೆಂದರೆ ತನ್ನ ಪ್ರೇಮದ ಗೆಳೆಯನ ಬರುವಿಕೆಗಾಗಿ ಕಾಯುತ್ತಾ, ಮನಸ್ಸಿದೊಳಗೆ ಖುಷಿಯನ್ನು ಹೃದಯದೊಳಗೆ ಪ್ರೀತಿಯಿನ್ನು ತುಂಬಿಕೊಂಡು ಆ ಲೈಟಿನೊಳಗೆ ತನ್ನ ಪ್ರಿಯಕರನನ್ನು ಕಾಣಲೆತ್ನಿಸುತ್ತಿದ್ದಾಳೆ.  ಸ್ವಲ್ಪ ದೂರ ನಡೆದರೆ ಅಲ್ಲೊಂದು ಮದ್ಯ ವಯಸ್ಕ ದಂಪತಿಗಳು ಖುಷಿಯಿಂದ ಮಾತಾಡುತ್ತಿದ್ದಾರೆ, ಆದ್ರೆ ಅದು ನಿಜವಾದ ಖುಷಿಯಲ್ಲ ಏಕೆಂದರೆ ಮನೆಯಲ್ಲಿ ಯಾವುದೋ ವಿಚಾರಕ್ಕೆ ಭಿನ್ನಾಭಿಪ್ರಾಯವನ್ನು ಮೂಡಿಸಿಕೊಂಡು ಅದರಿಂದ ಹೊರಬರಲು ಇಲ್ಲಿ ಬಂದು ಕುಳಿತಿದ್ದಾರೆ. ಹೀಗೆ ಅಲ್ಲಲ್ಲಿ ಹಾಕಿರುವ ಕಲ್ಲು ಬೆಂಚಿನಲ್ಲಿ ಕುಳಿತಿರುವ ಜನರನ್ನು ಗಮನಿಸಿದಾಗ ನನಗೆ ಹೀಗನ್ನಿಸಲು ಕಾರಣ  ನಾವಿಬ್ಬರೂ ಅವರನ್ನು ದಾಟಿ ಸ್ವಲ್ಪ ದೂರ ಹೋದ ಮೇಲೆ ಬೇರೇನನ್ನೋ ನೋಡುವ ನೆಪದಲ್ಲಿ ಒಂದು ಕ್ಷಣ ಅವರೆಡೆಗೆ ಕಂಡು ಕಾಣದ ಹಾಗೆ ಓರೆನೋಟ ಬೀರಿದಾಗ ಅವರ ಮನಸ್ಸಿನ ನಿಜಸ್ಥಿತಿಗಳು ಹೊರಹೊಮ್ಮಿರುತ್ತವೆ. ಅವು ಯಾಕೆ ಹೊರಹೊಮ್ಮಿರುತ್ತವೆಂದರೆ ಆಗ ಆ ಕ್ಷಣದಲ್ಲಿ ಅವರ ಮುಂದೆ ಯಾರು ಇರುವುದಿಲ್ಲವಲ್ಲ!  ಹೀಗೆ  ಮಲ್ಲೇಶ್ವರಂ ರೈಲು ನಿಲ್ದಾಣದಲ್ಲಿ ರಾತ್ರಿ ಸಮಯದಲ್ಲಿ ಕಲ್ಲು ಬೆಂಚಿನ ಮೇಲೆ ಕುಳಿತುಕೊಳ್ಳುವವರನ್ನು ನಾನು ಅರ್ಥೈಸಿಕೊಂಡು ನನ್ನ ಮನಸ್ಸಿನೊಳಗೆ ಖುಷಿಪಡುತ್ತಿರುತ್ತೇನೆ.

ನಾನು ಹೀಗೆ ಅವರ ಬಗ್ಗೆ ಅಂದುಕೊಳ್ಳುವುದೆಲ್ಲಾ ಸರಿಯೆಂದು ನಾನು ಹೇಳುತ್ತಿಲ್ಲ.  ಅವರು ನನ್ನ ಆಭಿಪ್ರಾಯಕ್ಕೆ ತದ್ವಿರುದ್ಧವಾಗಿ ಸಹಜವಾಗಿಯೇ ಇರಬಹುದು. ಆದ್ರೆ ಹೀಗೆ ಉಲ್ಟಾ ಅಲೋಚಿಸುವುದರಲ್ಲಿ ಒಂಥರ ಮಜವಿದೆಯೆಂದು ನನ್ನ ಭಾವನೆ.

ಬೇಸಿಗೆ ಬಂದಿದ್ದಕ್ಕೋ ಅಥವ ಲೋಡ್ ಸೆಡ್ಡಿಂಗ್ ಕಾರಣಕ್ಕೋ ಇತ್ತೀಚಿಗೆ ರೈಲು ನಿಲ್ದಾಣದ ಆಜುಬಾಜು ಬಿಟ್ಟರೆ ಉಳಿದ ಪೂರ್ತಿ ಪ್ಲಾಟ್‍ಫಾರಂನಲ್ಲಿ  ಲೈಟುಗಳನ್ನು ಹಾಕಿರುವುದಿಲ್ಲವಾದ್ದರಿಂದ ಯುವಪ್ರೇಮಿಗಳಿಗೆ ಪ್ಲಾಟ್ ಫಾರಂನಲ್ಲಿನ ಕತ್ತಲ ನಡುವಿನ ಕಲ್ಲುಬೆಂಚುಗಳೇ ಸೊಗಸಾದ ಸಿಟ್ಟಿಂಗ್ ಪಾಯಿಂಟ್. ಒಟ್ಟಿಗೆ ಕುಳಿತಿದ್ದರೂ ಲಾಲ್‍ಬಾಗ್-ಕಬ್ಬನ್ ಪಾರ್ಕುಗಳಲ್ಲಿ ಕಂಡು ಬರುವ ಪ್ರೇಮಿಗಳಷ್ಟು ರೋಮ್ಯಾನ್ಸಿಗಳಲ್ಲ ಇವರು.  ಹೆಚ್ಚೆಂದರೆ ಒಬ್ಬರಿಗೊಬ್ಬರೂ ಅಂಟಿಕೊಂಡು ಕೂರುತ್ತಾರೆ, ಇನ್ನೂ ಹೆಚ್ಚೆಂದರೆ ಹೆಗಲ ಮೇಲೆ ಕೈಗಳನ್ನು ಹಾಕುತ್ತಾರೆ.  ಅಪರೂಪಕೊಮ್ಮೆ ಆತನ ಮಡಿಲಲ್ಲಿ ಅsuper moon,bangalore city railway station, shivu k, chaayakannadi.blogspot.com,ಛಾಯಾಕನ್ನಡಿ, samvaada.com,ರೈಲು ನಿಲ್ದಾಣದ ಪ್ಲಾಟ್ ಫಾರಂ,ಸೂಪರ್ ಮೂನ್‍,ಮಲ್ಲೇಶ್ವರಂವಳು. ಇವಳ ಮಡಿಲಲ್ಲಿ ಆತ ಅಷ್ಟೆ.   ಇಷ್ಟೆಲ್ಲವನ್ನು   ನಾನು ದೃಷ್ಟಿಯಿಟ್ಟು ಗಮನಿಸುತ್ತಾ ಅವರ ಏಕಾಂತಕ್ಕೆ ಅಡ್ಡಿತರುವುದಿಲ್ಲ. ನನ್ನ ಕ್ಯಾಮೆರಾದ ಷಟರ್ ಸ್ಪೀಡಿನಂತೆ  ನೂರಿಪ್ಪತ್ತೈದನೇ ಒಂದು ಸೆಕೆಂಡಿಗೆ ಇನ್ನೂ ಕೆಲವೊಮ್ಮೆ ೨೫೦/೧.....೫೦೦/೧ ನಷ್ಟೇ ವೇಗವಾಗಿ ನೋಡಿರುತ್ತೇನೆ ಅಷ್ಟೆ. ನೋಡಿ ಹೀಗೆ ಉಲ್ಟಾ ಪಲ್ಟಾ ಕಲ್ಪಿಸಿಕೊಂಡು ಆನಂದಿಸುತ್ತೇನೆ.  ಹೇಮಾಶ್ರೀಗೂ ನನ್ನ ಈ ಷಟರ್ ಸ್ಪೀಡ್ ನೋಟ ಗೊತ್ತಿಲ್ಲವೆಂದೇನಿಲ್ಲ.  ಅವಳ ಮಾತಿನ ನಡುವೆ ನನ್ನ ಈ ಕಳ್ಳನೋಟ ಗಮನಕ್ಕೆ ಬಂದು "ಇದೇನ್ರೀ ನೀವು ನನ್ನ ಮಾತು ಕೇಳಿಸಿಕೊಳ್ಳದೇ  ಇದೇನ್ರೀ ನಿಮ್ಮ ತರ್ಲೆ" ಅನ್ನುತ್ತಾಳೆ.  ಅದು ಹಾಗಲ್ಲ, ಇದೊಂಥರ ಉಲ್ಟಾ ಸಮಾಚಾರ, ನೀನೊಮ್ಮೆ ಪ್ರಯತ್ನಿಸಿನೋಡು ಎನ್ನುತ್ತಾ ಅವಳನ್ನು ನನ್ನ ಪಕ್ಷಕ್ಕೆ ಕರೆದುಕೊಂಡುಬಿಡುತ್ತೇನೆ. ಅವಳು ಆಗಾಗ ಇಂಥವನ್ನು ಗಮನಿಸಿ ಖುಷಿಪಡುತ್ತಾಳಾದರೂ ನನ್ನಷ್ಟು ದಟ್ಟವಾಗಿ ಅಲ್ಲ. ಏಕೆಂದರೆ ಅವಳಿಗೆ ತನ್ನ ಇಡೀ ದಿನದ ಸುದ್ಧಿಯನ್ನು ವಿವರಿಸಲು ಈ ಅರ್ಧಗಂಟೆ ಸಾಕಾಗುದಿಲ್ಲವಲ್ಲ!
ಇದೆಲ್ಲದರ ನಡುವೆಯೂ ಅನೇಕ ಸಹಜತೆ ನಮ್ಮ ಕಣ್ಣಮುಂದೆ ಕಾಣುತ್ತಿರುತ್ತದೆ.  ವಯಸ್ಸಾದ ದಂಪತಿಗಳು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಲು ರಾತ್ರಿ ಊಟವಾದ ಮೇಲೆ ಈ ಕಲ್ಲುಬೆಂಚುಗಳಲ್ಲಿ ಜಾಗ ಹಿಡಿಯುತ್ತಾರೆ.  ಕೆಲವು ದಂಪತಿಗಳು ಮಕ್ಕಳ ಜೊತೆ ಬಂದು ಆಟವಾಡುತ್ತಾ ಖುಷಿಪಟ್ಟು ಹೋಗುತ್ತಾರೆ.  ದಿನವೆಲ್ಲಾ ಹೆಗಲಿಗೊಂದು ದೊಡ್ಡ ಗೋಣಿ ಚೀಲವನ್ನು ಹೊತ್ತು ಚಿಂದಿ ಆಯ್ದು ಮಾಇ ಅದರಿಂದ ಬಂದ ಹಣದಲ್ಲಿ ಸ್ವಲ್ಪ ಕಂಟ್ರಿ ಬಾಂದಿ ಏರಿಸಿ, ಉಳಿದ ಹಣದಲ್ಲಿ ಹೊಟ್ಟೆತುಂಬ ಉಂಡು ಅಲ್ಲೇ ಒಂದು ಮೂಲೆಯಲ್ಲಿ ಅದೇ ಗೋಣಿಚೀಲವನ್ನೇ ನೆಲಕ್ಕೆ ಹಾಕಿಕೊಂಡು ಮಲಗುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ ಆತ. ಅವನಂತೆ ಮತ್ತೊಂದು ಮೂಲೆಯಲ್ಲಿ ಜಡೆಗಂಟನ್ನು ಕಟ್ಟದ  ಹಳದಿ ಖಾದಿಬಟ್ಟೆ ತೊಟ್ಟ ಸನ್ಯಾಸಿಯೊಬ್ಬ ಇವನಂತೆ ಮಲಗಿದ್ದಾನೆ.  ಹಾಗೆ ಮಲಗಿಕೊಂಡೇ ಆ ಕತ್ತಲಲ್ಲಿ ಆಕಾಶವನ್ನು ನೋಡುತ್ತಾ ಯಾರಿಗೂ ಕಾಣದ ಹಾಗೆ ಬೀಡಿ ಸೇದುತ್ತಾ  ಮಲಗುವ ಮುಂಚಿನ ಮಂಪರನ್ನು ಅನುಭವಿಸುತ್ತಿದ್ದಾನೆ.

ಇದೇನ್ರೀ ಇವತ್ತು ಯಾರು ಇಲ್ಲವೇ ಇಲ್ಲ! ಸೂಪರ್ ಮೂನ್‍ನಿಂದ ತೊಂದರೆಯಾಗುತ್ತೆ ಅಂತ ಎಲ್ಲಾ ಗೂಡುಸೇಇಕೊಂಡು ಬಿಟ್ಟಿದ್ದಾರಾ? ಹೇಮಾಶ್ರಿ ಕೇಳಿದ್ದು ಮಾರ್ಚ್ ೧೯ರ ರಾತ್ರಿ ೯-೩೦ರಂದು. ಇಡೀ ಪ್ರಪಂಚವೇ ಸೂಪರ್ ಮೂನ್ ದಿನವನ್ನು ಅಚ್ಚರಿಯಿಂದ ನೋಡುತ್ತಿರಬೇಕಾದರೆ ನಮ್ಮ ರೈಲುನಿಲ್ದಾಣ ಹೇಗೆ ಕಾಣಬಹುದು ಅಂತ ನನಗೂ ಕುತೂಹಲವಿತ್ತು.  ತುಂಬು ಹುಣ್ಣಿಮೆಯಾದ್ದರಿಂದ ಬೆಳದಿಂಗಳು ಇಡೀ ಪ್ಲಾಟ್ ಫಾಅಂ ತುಂಬಾ ಬೆಳಕನ್ನು ಚೆಲ್ಲಿ ದೀಪವಿಲ್ಲದ ಕೊರತೆಯನ್ನು ನೀಗಿಸಿತ್ತು. ಇದೇ ಕಾರಣಕ್ಕೋ ಏನೋ ಅವತ್ತು ಯಾವ ಪೇಮಿಗಳು ಬಂದಿರಲಿಲ್ಲ.  ಉಳಿದವರು ಬರದಿರುವ ಕಾರಣ ಸೂಪರ್ ಮೂನ್‍ ಭಯವಿರಬಹುದು.  ನಾನಂತೂ ರಾಜರೋಶವಾಗಿ ಮುಕ್ಕಾಲು ಗಂಟೆ ವಾಕಿಂಗ್ ನಡುವೆ ಚಂದ್ರನ ಫೋಟೊ ತೆಗೆದೆ.  ಎಂದಿಗಿಂತ ಅಂದು ನಮ್ಮ  ರೈಲು ನಿಲ್ದಾಣ ಚೆಂದ ಕಾಣುತ್ತಿತ್ತು.
23-03-2011   tags(super moon,bangalore city railway station, shivu k, chaayakannadi.blogspot.com,ಛಾಯಾಕನ್ನಡಿ, samvaada.com,ರೈಲು ನಿಲ್ದಾಣದ ಪ್ಲಾಟ್ ಫಾರಂ,ಸೂಪರ್ ಮೂನ್‍,ಮಲ್ಲೇಶ್ವರಂ)

samvaada.com on facebook

ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು