ದೃಶ್ಯಕ್ಕೊಂದು ನುಡಿಗಟ್ಟು

ಶಿವಸಂಚಾರ ತಂಡದಿಂದ ಕನ್ನಡ ರಂಗಭೂಮಿಗೆ ಹೊಸ ಆವಿಷ್ಕಾರಗಳು

‘ಜನ ಲೊಕ್‌ಪಾಲ್ ಮಸೂದೆ’ಗಾಗಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆಯುತ್ತಿರುವ ಸಾಮಾಜಿಕ ಆಂದೋಳನವನ್ನು ಇತರ.ಕೋ.ಇನ್, ಕನ್ನಡಸಾಹಿತ್ಯ ಡಾಟ್ ಕಾಂ ಹಾಗು ಸಂವಾದ ಡಾಟ್ ಕಾಂ ಸಂಪೂರ್ಣವಾಗಿ ಬೆಂಬಲಿಸುತ್ತವೆ.

shiva sanchara, sanehalli, taralabalu, panditaradhya shivacharya svamiji, ಶಿವಸಂಚಾರ,ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ, ತರಳಬಾಳು,ಅನುಭವ ಮಂಟಪ,ನೀನಾಸಂಕಳೆದ ಹದಿನೈದು ವರ್ಷಗಳಿಂದ, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಕನಸು ನನಸು ಮಾಡಲು ಖ್ಯಾತ ರಂಗಕರ್ಮಿಗಳ ಸಹಕಾರದಿಂದ ಹೊಸ ಹೊಸ ನಾಟಕಗಳನ್ನು , ತಂಡಗಳನ್ನು ತಯಾರು ಮಾಡಿ ಆ ನಾಟಕಗಳನ್ನು ನಾಡಿನಾದ್ಯಂತ ಪ್ರದರ್ಶಿಸುತ್ತಿರುವ ‘ಶಿವಸಂಚಾರ’ ರಾಜ್ಯದ ಮುಖ್ಯ ರಂಗ ರೆಪರ್ಟರಿಗಳಲ್ಲೊಂದು. ನೀನಾಸಂ ಮತ್ತು ಶಿವಸಂಚಾರ ತಂಡಗಳು ಕನ್ನಡ ರಂಗಭೂಮಿಯ ಹೊಸ ಆವಿಷ್ಕಾರಗಳನ್ನು ಪ್ರಯೋಗಗಳನ್ನು ಗ್ರಾಮೀಣ ಜನತೆಗೂ ತಿರುಗಾಟದ ಹೆಸರಲ್ಲಿ ಸಿಗುವಂತೆ ಮಾಡಿರುವುದು ಶ್ಲಾಘನೀಯ ಕೆಲಸವೇ ಆಗಿದೆ. ಇಂಥದೇ ಪ್ರಯತ್ನಗಳನ್ನು ಈ ಹಿಂದೆ ಮಾಡಿದ್ದ ಕೊಡಗು ರಂಗ ಮತ್ತು ಧೃವ ರಂಗಗಳು ಹಾಗೇ ತುಮರಿಯ ಕಿನ್ನರ ತಂಡಗಳ ಪ್ರಯತ್ನಗಳನ್ನೂ ನೆನಪಿಸಿಕೊಳ್ಳಲೇಬೇಕು.
ಸಾಂಸ್ಕೃತಿಕ ಚಟುವಟಿಕೆಗಳಿಲ್ಲದ ಸಣ್ಣ ಊರುಗಳಲ್ಲಿ ಟೀವಿಯೊಂದೇ ಸುಲಭ ಮನರಂಜನಾ ಮಾಧ್ಯಮವಾಗಿರುವ ಕಾರಣ ಅಂಥ ಊರುಗಳಲ್ಲಿರುವ ಸಾಹಿತ್ಯ ಸಾಂಸ್ಕೃತಿಕಾಸಕ್ತರು ಇಂಥ ತಂಡಗಳ ಬರವನ್ನೇ ಕಾಯುತ್ತಿರುತ್ತಾರೆ. ಅರಸೀಕೆರೆಯ ಶ್ರೀ ಶಿವಕುಮಾರ ಬಳಗ ಮತ್ತು ತರಳಬಾಳು ಯುವ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಹೊಯ್ಸಳೇಶ್ವರ ಕಾಲೇಜಿನಲ್ಲಿ ನಡೆದ ಮೂರುದಿನಗಳ ನಾಟಕೋತ್ಸವ ‘ಶಿವಸಂಚಾರ’ ಹಲವು ನಾಟಕಗಳನ್ನು ಆಸಕ್ತರಿಗೆ ಪ್ರದರ್ಶಿಸಿತು.

ಪ್ರತಿವರ್ಷ ಒಂದು ನಿರ್ದಿಷ್ಟ ವಿಷಯದಲ್ಲಿ ನಾಟಕಗಳನ್ನು ಆಯ್ದು ಅವನ್ನು ಖ್ಯಾತನಾಮರಿಂದ ನಿರ್ಮಿಸುವ ‘ಶಿವಸಂಚಾರ’ದ ಈ ವರ್ಷದ ಆಶಯ ‘ಸ್ವಾತಂತ್ರ್ಯ- ಸಮಾನತೆಯತ್ತ’ ಪರಿಕಲ್ಪನೆಯಲ್ಲಿ ಉರ್ದು ನಾಟಕಕಾರ ಆಗಾ ಹಶ್ರ ಕಶ್ಮೀರಿಯವರ ಯಹೂದಿ ಕೀ ಲಡ್ಕೀ ಆಧರಿಸಿದ ‘ಯಹೂದಿ ಹುಡುಗಿ’ (ಸವಿತಾ, ಬೆಂಗಳೂರು) ಇಟಲಿಯ ನೋಬಲ್ ಪ್ರಶಸ್ತಿ ವಿಜೇತ ದಾರಿಯೋ ಫೋನ can’t pay, won’t pay ಆಧರಿಸಿದ ‘ಕೊಡಲ್ಲ ಕೊಡಕ್ಕಿರಲ್ಲ’(ಮಲ್ಲಿಕಾ ಪ್ರಸಾದ್) ಹಾಗೂ ನಲವಡಿ ಶ್ರೀಕಂಠ ಶಾಸ್ತ್ರಿಗಳ ಮೂಲ ರಂಗನಾಟಕ ಆಧರಿಸಿದ ‘ಹೇಮರೆಡ್ಡಿ ಮಲ್ಲಮ್ಮ’,(ಭಾಗೀರಥಿ ಬಾಯಿ ಕದಂ) ನಾಟಕಗಳನ್ನು ನಿರ್ಮಿಸಿದೆ. ಮಹಿಳಾ ಕೇಂದ್ರಿತ ವಸ್ತು ಹೊಂದಿರುವ ಈ ಮೂರೂ ನಾಟಕಗಳ ನಿರ್ದೇಶಕರು ಮಹಿಳೆಯರೇ ಆಗಿರುವುದು ವಿಶೇಷ.shiva sanchara, sanehalli, taralabalu, panditaradhya shivacharya svamiji, ಶಿವಸಂಚಾರ,ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ, ತರಳಬಾಳು,ಅನುಭವ ಮಂಟಪ,ನೀನಾಸಂ

ಧರ್ಮಾಂಧತೆ, ಹಿಂಸೆ, ಕ್ರೌರ್ಯ, ಅಹಂಕಾರ, ಅಟ್ಟಹಾಸಗಳೇ ಈ ಹೊತ್ತಿನ ವರ್ತಮಾನವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಾಗಿರುವಾಗ ಅವೆಲ್ಲವನ್ನೂ ಮೀರಿಸುವ ಗಂಡು ಹೆಣ್ಣಿನ ನಡುವಣ ಪ್ರೀತಿ, ಮತ್ತು ಸಹಜ ಮಾನವೀಯ ಮೌಲ್ಯದ ಶ್ರೇಷ್ಠತೆಯನ್ನು ಎತ್ತಿ ತೋರಿಸುವ ಮನೋಜ್ಞ ನಾಟಕ ‘ಯಹೂದಿ ಹುಡುಗಿ’. ಪ್ರೀತಿಯ ನಡುವೆ ಅಡ್ಡ ನಿಲ್ಲುವ ಧರ್ಮದ ಕೃತಕ ಗೋಡೆ ಕ್ರಮೇಣ ನಾಶವಾಗುವ ರೀತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ರಂಗದ ಮೇಲೆ ತರಲಾಗಿದೆ. ಉರ್ದುವಿನ ಮೂಲ ನಾಟಕವು ಶಾಯಿರಿಯ ಕವಿ ಇಟಗಿ ಈರಣ್ಣನವರ ಪ್ರಾಸ ಬದ್ಧ ಸಂಭಾಷಣೆ ಮತ್ತು ಅವರ ಕುಸುರಿ ಕೆಲಸದಿಂದ ಹೊಸ ರೂಪು ತಳೆದಿದೆ. ಸಂಭಾಷಣೆಯ ಬಿಗಿ ಬಂಧ, ಶಾಯಿರಿಗಳ ಸಮಯೋಚಿತ ಬಳಕೆ ನಾಟಕದ ವಿಶೇಷತೆ ಹೆಚ್ಚಿಸಿವೆ. ಕೊನೆವರೆಗೂ ಕುತೂಹಲವನ್ನು ಕಾಯ್ದುಕೊಳ್ಳುವ ಕತೆಯ ಅಂತ್ಯ ನೋಡುಗರನ್ನು ವಾಸ್ತವದತ್ತ ಆಲೋಚಿಸಲು ಪ್ರೇರೇಪಿಸುತ್ತದೆ.

ಮೇಲು ನೋಟಕ್ಕೆ ಒಬ್ಬ ಕರ್ಮಠ ಯಹೂದಿಯಂತೆ ತೋರುವ ಅಜರಾನ ಕಲ್ಲು ಹೃದಯವು, ಅನ್ಯ ಧರ್ಮದ ಹಾಗೂ ತನ್ನ ಹೆಂಡತಿ- ಮಗುವನ್ನು ಕೊಂದ ವೈರಿಯ ಮಗು ಬೆಂಕಿಯಲ್ಲಿ ಬೆಂದು ಹೋಗಲಿರುವುದನ್ನು ನೋಡುತ್ತಿದ್ದಂತೆ, ಕರಗಿ ಹೋಗಿ ಆ

ಮಗುವನ್ನೇ ನಜರಾ ರಕ್ಷಿಸಿ, ಪೋಷಿಸಿ ತನ್ನ ಸಾಕು ಮಗಳಾಗಿ (ರಾಹೀಲ್) ಬೆಳೆಸಿದ ರೀತಿಯು, ಹುಸಿ ಧರ್ಮಕ್ಕಿಂತ ಮನುಷ್ಯ ಪ್ರೀತಿ ದೊಡ್ಡದು ಎಂಬುದನ್ನು ಸಾಬೀತುಪಡಿಸುತ್ತದೆ. ಅಜರಾ, ಮಾರ್ಕಸ್ ಆಗಿ ಅರುಣ್ ಜಿ ಚಿಕ್ಕಾನಂಗಲ ಮತ್ತು ದಿನೇಶ್ ಚಮ್ಮಾಳಿಗೆ ಅವರ ಅಭಿನಯ ಬಹುಕಾಲ ಮನಸ್ಸಲ್ಲುಳಿಯುತ್ತದೆ.

‘ಕೊಡಲ್ಲ ಕೊಡಕ್ಕಿರಲ್ಲ’ ಮೇಲು ನೋಟಕ್ಕೆ ಪ್ರಹಸನವಾಗಿ ಕಾಣುವ ಅಸಂಗತ ನಾಟಕದಂತೆ ಕಂಡರೂ ಈ ಹೊತ್ತಿನ ಅರಾಜಕ ಜಾಗತೀಕರಣದ ಗೊದಲಗಳನ್ನು ಬಿಂಬಿಸಿದ ಪ್ರಸ್ತುತ ಸಮಾಜದ ಪ್ರತಿಬಿಂಬವೆಂದೇ ಭಾವಿಸಬೇಕು.

ನಿರುದ್ಯೋಗ, ನಗರದ ಆಕರ್ಷಣೆ ಮತ್ತು ಹಸಿವಿನ ಮುಂದೆ ಆದರ್ಶಗಳು ಹೇಗೆ ಮೂಲೆಗುಂಪಾಗುತ್ತವೆ, ಜನಸಾಮಾನ್ಯರ ಬದುಕು ಯಾಕೆ ಮೂರಾಬಟ್ಟೆಯಾಗುತ್ತದೆಂಬುದನ್ನು ಸಮರ್ಥವಾಗಲ್ಲದಿದ್ದರೂ ಚೋದ್ಯವಾಗಿ ನಾಟಕ ದ್ವನಿಸುತ್ತದೆ. ಶ್ರಮಿಕ ವರ್ಗದ ಹೋರಾಟದ ಎಳೆಗಳನ್ನು ಬಿಚ್ಚಿಡುತ್ತಲೇ ವಾಸ್ತವವನ್ನು ವಿಡಂಬಿಸುತ್ತಲೇ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಶಕ್ತಿಯನ್ನೂ ಇಟ್ಟುಕೊಂಡಿರುವುದು ಇದರ ವೈಶಿಷ್ಟ್ಯ. ಅಭಿಜಾತ ಕಲಾವಿದ ಚಾರ್ಲಿ ಚಾಪ್ಲಿನ್‌ನನ್ನು ನೆನಪಿಸುವಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರಧಾರಿ ಅರುಣ್ ಜಿ. ಚಿಕ್ಕಾನಂಗಲ ಸಶಕ್ತರಗಿದ್ದಾರೆ. ಹಾಗೂ ಧಾರಾಳವಾಗಿ ನಗೆ ಬುಗ್ಗೆ ಚಿಮ್ಮಿಸುತ್ತಾರೆ. ಪೊಲೀಸ್ ಬಟ್ಟೆ ಧರಿಸುವಾಗ, ಕದ್ದು ತಂದ ವಸ್ತುಗಳನ್ನು ಗರ್ಭಿಣಿ ಹೆಂಗಸಿನ ಹೊಟ್ಟೆಯಿಂದ ಹೊರ ತೆಗೆಯುವಾಗ ಪ್ರೇಕ್ಷಕರು ಬಿದ್ದುಬಿದ್ದು ನಗುತ್ತಾರೆ. ರಂಗಸಜ್ಜಿಕೆ ಗಮನ ಸೆಳೆಯುತ್ತದೆ. ನಿರ್ದೇಶಕರು ಜಾಗತೀಕರಣದ ಪ್ರಭಾವದಿಂದ ಈಗಾಗಲೇ ಕಾರ್ಖಾನೆಗಳು ಮುಚ್ಚಿಹೋಗಿರುವುದನ್ನು, ಸಾಮಾನ್ಯ ಜನತೆ ಆದರ್ಶ ಮೌಲ್ಯಗಳನ್ನು ಸಿನಿಮಾ ನಾಟಕಗಳಲ್ಲಷ್ಟೇ ನೋಡಬಯಸುವುದನ್ನೂ ಗಮನಿಸದ ಕಾರಣ ಅಸಂಗತವಾಗಿ ಮುಕ್ತಾಯವಾಗುತ್ತದೆ. ಈ ಬಗೆಯ ನಾಟಕಗಳನ್ನು ಗ್ರಾಮಾಂತರದ ಮಂದಿ ಅಷ್ಟಾಗಿ ಇಷ್ಟಪಡುವುದಿಲ್ಲ ಎಂಬ ಅಂಶವನ್ನೂ ತಂಡ ಅರಿಯಬೇಕಿದೆ. ಅಲ್ಲದೇ ಅಗತ್ಯವಿಲ್ಲದೆಯೂ ಅಶ್ಲೀಲ ಸಂಭಾಷಣೆ ಸೇರಿಸಿದ ಉದ್ದೇಶವೂ ಅರ್ಥವಾಗುವುದಿಲ್ಲ.

‘ಜನ ಲೊಕ್‌ಪಾಲ್ ಮಸೂದೆ’ಗಾಗಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆಯುತ್ತಿರುವ ಸಾಮಾಜಿಕ ಆಂದೋಳನವನ್ನು ಇತರ.ಕೋ.ಇನ್, ಕನ್ನಡಸಾಹಿತ್ಯ ಡಾಟ್ ಕಾಂ ಹಾಗು ಸಂವಾದ ಡಾಟ್ ಕಾಂ ಸಂಪೂರ್ಣವಾಗಿ ಬೆಂಬಲಿಸುತ್ತವೆ.

ಜನಪ್ರಿಯ ಕಂಪೆನಿ ನಾಟಕವಾದ ‘ಹೇಮರೆಡ್ಡಿ ಮಲ್ಲಮ್ಮ’ ಹಳ್ಳಿಯshiva sanchara, sanehalli, taralabalu, panditaradhya shivacharya svamiji, ಶಿವಸಂಚಾರ,ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ, ತರಳಬಾಳು,ಅನುಭವ ಮಂಟಪ,ನೀನಾಸಂs ಅವಿಭಕ್ತ ಕುಟುಂಬದ ಕಷ್ಟ ಕೋಟಲೆಗಳ ನಡುವೆಯೇ, ಜೀವಸೆಲೆ ಉಕ್ಕಿಸಿ ಅಧ್ಯಾತ್ಮದ ಔನ್ನತ್ಯದಲ್ಲಿ ಪರ್ಯವಸಾನಗೊಳ್ಳುವ ಕೃತಿ. ಅಸ್ಸಾಂ ಮತ್ತು ಕನ್ನಡ ರಂಗಭೂಮಿಗಳ ನಡುವೆ ಸೇತುವೆಯಾಗಿರುವ ಭಾಗೀರಥಿ ಬಾಯಿ ಕದಂ ಅವರ ನಿರ್ದೇಶನದಲ್ಲಿ ಈ ಹಳೆಯ ರಂಗ ನಾಟಕ ಹೊಸುಹುಟ್ಟು ಪಡೆದಿದೆ. ಪ್ರಬುದ್ಧ ಅಭಿನಯ, ಸುಶ್ರಾವ್ಯ ಸಂಗೀತ, ಉತ್ತಮ ಬೆಳಕಿನ ಸಂಯೋಜನೆ ನಾಟಕದ ಯಶಸ್ಸಿಗೆ ಕಾರಣವಾಗಿವೆ. ಅರೆಬರೆ ತಿಳುವಳಿಕೆಯ ಹೇಮರೆಡ್ಡಿಯಾಗಿ ಅಮೋಘ ಬಿರಾದಾರ್ ಅಭಿನಯ ಮನಸೆಳೆಯುತ್ತದೆ.

ನಾಟಕದ ಕ್ಲೈಮ್ಯಾಕ್ಸ್‌ನಲ್ಲಿ ಆಧ್ಯಾತ್ಮದತ್ತ ವಾಲುವ ವೇಮಣ್ಣನ ಪಾತ್ರಕ್ಕೆ ಜೀವನ ನೀನಾಸಂ ಕಾಯಕಲ್ಪ ತುಂಬಿ ನಟಿಸುತ್ತಾರೆ. ಮಲ್ಲಮ್ಮ ಹಾಗೂ ಮಲ್ಲಯ್ಯನ ಪಾತ್ರಧಾರಿಗಳಾದ ವಿ. ಲಕ್ಷ್ಮಿ ಹಾಗೂ ದಿನೇಶ ಚಮ್ಮಾಳಿಗೆ ಬಹುಕಾಲ ಮನಸ್ಸಲ್ಲುಳಿಯುತ್ತಾರೆ. ಮನ ಸೆಳೆಯುವ ಸಂಗೀತಕ್ಕೆ ವಚನಗಳನ್ನು ಬಳಸಿಕೊಂಡಿರುವುದು ಸಮಯೋಚಿತವಗಿ ಬಳಸಿಕೊಂಡಿರುವ ನಿರ್ದೇಶಕರ ಪ್ರಯತ್ನ ಯಶಸ್ವಿಯೂ ಆಗಿದೆ. (ಗುರುವಾದೊಡೆ ಕಾಯಕದಿಂದಲೇ ಜೀವನ್ಮುಕ್ತಿ ಇತ್ಯಾದಿ). ಸಿದ್ಧವೀರಿಯ ಪಾತ್ರಧಾರಿ ಅದೇಕೆ ಸಂಭಾಷಣೆಯನ್ನು ಅವಸರಕ್ಕೆ ಬಿದ್ದಂತೆ ಒಪ್ಪಿಸುತ್ತಾರೋ (ಎಲ್ಲ ಪ್ರದರ್ಶನಗಳ ಅವರ ಎಲ್ಲ ಪಾತ್ರಗಳೂ ಹೀಗೆ ಅವಸರದಲ್ಲೇ ಇದ್ದವು) ಸಂಚಾಲಕರೇ ಉತ್ತರ ಹೇಳಬೇಕು.

ಟೀವಿಯ ಧಾರಾವಾಹಿಗಳಿಂದ ಮೂರು ದಿನ ಮುಕ್ತಿ ಕೊಟ್ಟು ನಮ್ಮೆಲ್ಲರನ್ನೂ ಕಾಡುತ್ತಿರುವ ವರ್ತಮಾನದ ಬೇಗುದಿಗೆ ಸಹಜ ಉತ್ತರವನ್ನೀಯುವ ‘ಶಿವಸಂಚಾರ’ ತಂಡ ಹೀಗೆ ಊರೂರುಗಳಲ್ಲಿ ಭರವಸೆಯ ಬೆಳಕು ಮೂಡಿಸಿದರೆ ಪಂಡಿತಾರಾಧ್ಯರ ಕನಸು ನನಸಾದೀತು, ಅನುಭವ ಮಂಟಪದ ಮೂಲ ಉದ್ದೇಶವೂ ಈಡೇರೀತು.

30-03-2011

samvaada.com on facebook

tags:shiva sanchara, sanehalli, taralabalu, panditaradhya shivacharya svamiji, ಶಿವಸಂಚಾರ,ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ, ತರಳಬಾಳು,ಅನುಭವ ಮಂಟಪ,ನೀನಾಸಂ,


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು