ದೃಶ್ಯಕ್ಕೊಂದು ನುಡಿಗಟ್ಟು

ಈ ವಾರ ಬಿಡುಗಡೆಯಾಗಲಿರುವ ಚಿತ್ರಗಳು

ಈ ವಾರ ಬೆಂಗಳೂರಿನಲ್ಲಿ ತೆರೆಕಾಣಲಿರುವ ಪ್ರಮುಖ ಚಿತ್ರಗಳು:

ನಂಜುಪುರಮ್ (ತಮಿಳು): ಸಾವಿರಾರು ಹಾವುಗಳುಳ್ಳ ಹಳ್ಳಿಯೊಂದಕ್ಕೆ ಬರುವ ನಾಯಕನ ಕಥೆಯುಳ್ಳ ನಂಜುಪುರಂ ನ ನಿರ್ದೇಶಕ ಚಾರ್ಲ್ಸ್. ರಾಘವ್, ಮೊನಿಕಾ ಮುಖ್ಯ ಭೂಮಿಕೆಯಲ್ಲಿರುವ ಈ ಥ್ರಿಲ್ಲರ್ ಸಿನೆಮಾ ನಟ ರಾಘವ್ ಗೆ ಹೊಸ ಬ್ರೇಕ್ ಕೊಡಲಿದೆಯೆಂಬ ನಿರೀಕ್ಷೆ ಇದೆ. ರಾಘವ್ ಈ ಚಿತ್ರದ ಸಂಗೀತ ನಿರ್ದೇಶಕರೂ ಹೌದು. ’ಅಝೈಘಾಲ್’ ಎಂಬ ಟೆಲಿ ಧಾರಾವಾಹಿಯೊಂದಿಗೆ ಸಾಕಷ್ಟು ಹೆಸರು ಮಾಡಿರುವ ರಾಘವ್ ಗೆ ನಾಯಕನಾಗಿ ಇದು ಮೊದಲ ಪ್ರಯತ್ನ.

ಭಾರತೀಯ ಜಾತಿ ವ್ಯವಸ್ಥೆಯ ಬಗ್ಗೆಯೂ ಈ ಸಿನೆಮಾ ಮಾತನಾಡಲಿದೆ ಎನ್ನುವ ನಿರ್ದೇಶಕ ಚಾರ್ಲ್ಸ್ ಈ ಚಿತ್ರದಲ್ಲಿ ಸಾಕಷ್ಟು ಗ್ರಾಫಿಕ್ ತಂತ್ರಜ್ಞಾನವನ್ನ ಬಳಸಿಕೊಂಡಿದ್ದಾರೆಂಬ ಸುದ್ದಿ ಇದೆ. ಚಾರ್ಲ್ಸ್ ಗೆ ಕೂಡ ನಿರ್ದೇಶಕನಾಗಿ ಇದು ಮೊದಲ ಚಿತ್ರ.

ಯೆ ದೂರಿಯಾ (ಹಿಂದಿ): ವೈವಾಹಿಕ ಜೀವನ ವ್ಯವಸ್ಥೆ ಪಲ್ಲಟಗೊಳ್ಳುತ್ತಿರುವ ದಿನಗಳಲ್ಲಿ ಸಂಬಂಧಗಳು ಪಡೆದುಕೊಳ್ಳಬಹುದಾದ ಹೊಸ ಅರ್ಥಗಳು ಕುತೂಹಲಕಾರಿ. ಡೈವರ್ಸ್ ಪಡೆದು ಹೆಣ್ಣೊಬ್ಬಳು ಇನ್ನೊಬ್ಬ ಸಂಗಾತಿಯನ್ನು ಪಡೆದುಕೊಳ್ಳುವ ಹೊತ್ತಿನಲ್ಲಿ ಪತಿ ಮಹಾಶಯ ಮತ್ತೆ ಆಕೆಯನ್ನ ಬಯಸಿದರೆ , ಆ ಹೆಣ್ಣು ಮತ್ತು ಸಮಾಜ ಹೇಗೆ ಪ್ರತಿಸ್ಪಂದಿಸುತ್ತದೆ ಎಂಬ ಕೌತುಕ ಕಥಾ ಹಂದರವುಳ್ಳ "ಯೆ ದುರಿಯಾ" ಚಿತ್ರ ಈ ವಾರ ಬಿಡುಗಡೆಗೆ ಕಾದಿದೆ. ಚಿತ್ರದ ನಾಯಕಿ ದೀಪ್ಷಿಕಾರೇ ಈ ಕಥೆಯನ್ನ ಬರೆದು ನಿರ್ದೇಶಿಸಿದ್ದಾರೆ ಕೂಡ. 
ಸಂಜು ವೆಡ್ಸ್ ಗೀತಾ (ಕನ್ನಡ): ಅರಮನೆ ಎಂಬ ಚಿತ್ರದ ಮೂಲಕ ಪ್ರಶಂಸೆಗೆ ಪಾತ್ರರಾದ ನಾಗಶೇಖರ್ ನಿರ್ದೇಶನದ ಹೊಸ ಚಿತ್ರ ಸಂಜು ವೆಡ್ಸ್ ಗೀತಾ. ಈ ಚಿತ್ರದ ಮೆಲೊಡಿ ಹಾಡುಗಳು ಕನ್ನಡಿಗರ ಕಿವಿಗೆ ಅಪ್ಪಳಿಸಿವೆಯಾದರೂ ಚಿತ್ರದ ಕಥಾ ಹಂದರ ಇನ್ನೂ ಬಯಲಾಗಿಲ್ಲ. ಸಾಕಷ್ಟು ರಂಪಾಟ ಮಾಡಿಕೊಂಡಿರುವ ರಮ್ಯಾ ಈ ಚಿತ್ರದ ನಾಯಕಿ. ಶ್ರೀನಗರ ಕಿಟ್ಟಿ ನಾಯಕ.

ಪ್ರಿನ್ಸ್ (ಕನ್ನಡ): ಚೌ ಚೌ ನಿರ್ದೇಶಕ ಒಮ್ ಪ್ರಕಾಶ್ ರಾವ್ ಅವರ ಹೊಸ ಸಿನೆಮಾ ಪ್ರಿನ್ಸ್.  ದರ್ಶನ್ ನಾಯಕ ನಟನಾಗಿರುವ ಈ ಚಿತ್ರದ ನಿರ್ಮಾಪಕರು ಸಂದೇಶ್ ನಾಗರಾಜ್. ಇದು ಸ್ವಮೇಕೋ, ರೀಮೇಕೋ ಅಥವಾ ಮಿಕ್ಸ್ ಮೇಕೋ ಎಂಬುದು ಚಿತ್ರ ನೋಡಿದ ಮೇಲೆ ತಿಳಿಯಲಿದೆ.

ಶಕ್ತಿ (ತೆಲುಗು): ಮಗಧೀರ ಸಿನೆಮಾಗಿಂತ ಹೆಚ್ಚೇ ಖರ್ಚು ಮಾಡಿದ್ದೇವೆ ಎಂದು ಬಾಯಿ ಬಡಿದುಕೊಂಡು ಬಂದಿರುವ ತೆಲುಗು ಸಿನೆಮಾ ಶಕ್ತಿ. ಜ್ಯೂನಿಯರ್ ಎನ್ ಟಿ ಆರ್ ಹೀರೊ ಆಗಿರುವ ಈ ಸಿನೆಮಾ ತಮಿಳಿನಲ್ಲೂ ಡಬ್ ಆಗಿ ಬರಲಿದೆ. ಅಶ್ವಿನಿ ದತ್ ನಿರ್ಮಾಣ, ಮಣಿ ಶರ್ಮಾ ಸಂಗೀತ ಇರುವ ಈ ಚಿತ್ರದ ನಿರ್ದೇಶಕ ಮೆಹೆರ್ ರಮೇಶ್. (ಈ ಹಿಂದೆ ಎನ್ ಟಿ ಆರ್ ಗಾಗಿ ಇವರು ಕಂತ್ರಿ ನಿರ್ದೇಶಿಸಿದ್ದರು.)

31.03.11

samvaada.com on facebook

tags:kannada film prince,ಪ್ರಿನ್ಸ್ (ಕನ್ನಡ),ಸಂಜು ವೆಡ್ಸ್ ಗೀತಾ (ಕನ್ನಡ), kannada film 'sanju wed geeta', telugu film shakti Junior NTR, hindi film 'ye dhuriya' Nanjupuram Tamil fantasy thriller film directed by Charles,Raaghav, Monica, Thambi Ramiah




ಇಲ್ಲಿವರೆಗಿನ ಅಭಿಪ್ರಾಯಗಳು

Raghu
2011-04-06 12:59:41

It's very good thank you for Kannadanews .

srinivas S R
2011-04-21 00:33:24

Its very very super kannada article

srinivas S R
2011-04-21 00:35:43

very very super article


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು