ದೃಶ್ಯಕ್ಕೊಂದು ನುಡಿಗಟ್ಟು

ಚಲನಚಿತ್ರ ಅಕಾಡೆಮಿ : ‘ಬೆಳ್ಳಿಹೆಜ್ಜೆ’ಯಲ್ಲಿ ಹಿರಿಯ ನಟ ರಾಜೇಶ್

‘ಜನ ಲೊಕ್‌ಪಾಲ್ ಮಸೂದೆ’ಗಾಗಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆಯುತ್ತಿರುವ ಸಾಮಾಜಿಕ ಆಂದೋಳನವನ್ನು ಇತರ.ಕೋ.ಇನ್, ಕನ್ನಡಸಾಹಿತ್ಯ ಡಾಟ್ ಕಾಂ ಹಾಗು ಸಂವಾದ ಡಾಟ್ ಕಾಂ ಸಂಪೂರ್ಣವಾಗಿ ಬೆಂಬಲಿಸುತ್ತವೆ.

ಹಿರಿಯ ನಟ ರಾಜೇಶ್,ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್, ಹಿರಿಯ ನಿರ್ದೇಶಕ ನಾಗಾಭರಣ,ರಾಜ್ಯ ಚಲನಚಿತ್ರ ಅಕಾಡೆಮಿಹಿರಿಯ ನಿರ್ದೇಶಕ ನಾಗಾಭರಣ ನೇತೃತ್ವದಲ್ಲಿ ಶ್ಲಾಘನೀಯ ಕಾರ್ಯಗಳನ್ನು ಮಾಡುತ್ತಿರುವ ರಾಜ್ಯ ಚಲನಚಿತ್ರ ಅಕಾಡೆಮಿಯು ಚಿತ್ರರಂಗದ ಗಣನೀಯರನ್ನು ಕರೆಸಿ ಚರ್ಚೆ-ಮಾತುಕತೆ ಕಾರ್ಯಕ್ರಮವನ್ನು ಬೆಳ್ಳಿಹೆಜ್ಜೆ ಹೆಸರಿನಲ್ಲಿ ನಿಗದಿತವಾಗಿ ನಡೆಸುತ್ತಾ ಬಂದಿದೆ. ಈ ತಿಂಗಳ ಮಾಲಿಕೆಯಲ್ಲಿ ಹಿರಿಯ ನಟ ರಾಜೇಶ್ ಅವರೊಂದಿಗೆ ‘ಬೆಳ್ಳಿ ಹೆಜ್ಜೆ’.

ಕಾರ್ಯಕ್ರಮದ ವಿವರಗಳು ಇಂತಿವೆ:
ದಿನಾಂಕ: ೯ನೇ ಏಪ್ರಿಲ್ ೨೦೧೧
ಸಮಯ: ಸಂಜೆ ೪-೩೦
ಸ್ಥಳ: ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್, ಬೆಂಗಳೂರು-೨
ರಾಜೇಶ್ ಅವರೊಂದಿಗೆ ಭಾಗವಹಿಸುವವರು ನಾಗಾಭರಣ ಮತ್ತು ರಿಜಿಸ್ಟ್ರಾರ್ ಜಗನ್ನಾಥ ಪ್ರಕಾಶ್

ನಟ ರಾಜೇಶ್ ಕುರಿತು-
ಕನ್ನಡದ ಹಿರಿಯ ನಟರಾದ ರಾಜೇಶ್ ಅವರು ಬಾಲ್ಯದಿಂದಲೂ ಸಾಹಿತ್ಯಾಸಕ್ತರು. ಚಿಕ್ಕಂದಿನಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ರಾಜೇಶ್ ತಾವೇ ನಾಟಕ ರಚಿಸಿ ಸ್ವಂತವಾಗಿ ‘ಶಕ್ತಿ ನಾಟಕ ಮಂಡಳಿ’ ಸ್ಥಾಪಿಸಿ ಕೆಲ ವರ್ಷ ನಡೆಸಿದರು.
ಹುಣಸೂರು ಕೃಷ್ಣಮೂರ್ತಿ ಅವರ ‘ವೀರ ಸಂಕಲ್ಪ’ ಚಿತ್ರದ ಮೂಲಕ ರಜತ ಪರದೆ ಪ್ರವೇಶಿಸಿದ ರಾಜೇಶ್ ಗಂಗೆ ಗೌರಿ, ಸತಿ ಸುಕನ್ಯ ಮೊದಲಾದ ಚಿತ್ರಗಳಲ್ಲಿ ನತಿಸಿದರೂ ಅವರಿಗೆ ಹೆಸರು ತಂದುಕೊಟ್ಟ ಚಿತ್ರ ‘ನಮ್ಮ ಊರು’.
ರಾಜೇಶ್ ನತರ ಕಪ್ಪು ಬಿಳುಪು, ಬೋರೇಗೌಡ ಬೆಂಗಳೂರಿಗೆ ಬಂದ, ಬೆಳವಲದ ಮಡಿಲಲ್ಲಿ, ಕಲಿಯುಗ, ಸೊಸೆ ತಂದ ಸೌಭಾಗ್ಯ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದರು.
ರಾಜ್ಯ ಚಲನಚಿತ್ರ ಆಯ್ಕೆ ಸಮಿತಿಯು ಸೇರಿದಂತೆ ಹಲವು ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ.
07-04-2011 (tags:ಹಿರಿಯ ನಟ ರಾಜೇಶ್,ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್, ಹಿರಿಯ ನಿರ್ದೇಶಕ ನಾಗಾಭರಣ,ರಾಜ್ಯ ಚಲನಚಿತ್ರ ಅಕಾಡೆಮಿ)

06-04-2011

samvaada.com on facebook

ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು