ಏಪ್ರಿಲ್ ಎರಡನೇ ವಾರದ ಚಿತ್ರಗಳು
ಕುರಲೈ ಕುರ್ರಾಲು (ತೆಲುಗು): ಪೆನ್ ಡ್ರೈವ್ ಹುಡುಕಲು ಹೋಗಿ ಪ್ರಿಯಕರನನ್ನು ಪಡೆಯುವ ಪ್ರೇಮಕಥೆ ಈ ಚಿತ್ರದ್ದು. ಬದ್ರಿ ವೆಂಕಟೇಶ್ ನಿರ್ದೇಶನ. ಯುವನ್ ಶಂಕರ್ ರಾಜ ನಿರ್ದೇಶನ. ಅಧರ್ವ, ಸಮಂತ, ಪ್ರಸನ್ನ ನಟಿಸಿದ್ದಾರೆ. ಥ್ಯಾಂಕ್ ಯು (ಹಿಂದಿ): ಅಕ್ಷಯ್ ಕುಮಾರ್ ನಿರ್ಮಾಣದ ಇನ್ನೊಂದು ಕಾಮಿಡಿ ಸಿನಿಮಾ ಈ ವಾರ ತೆರೆ ಕಾಣುತ್ತಿದೆ. ಸಿಂಗ್ ಈಸ್ ಕಿಂಗ್, ವೆಲ್ ಕಮ್ ನಂತಹ ಹಿಟ್ ಚಿತ್ರಗಳನ್ನ ಕೊಟ್ಟ ಅನೀಸ್ ಬಾಜ್ಮಿ ಈ ಚಿತ್ರದ ದಿಗ್ದರ್ಶಕ. ಅಪರೂಪಕ್ಕೆಂಬಂತೆ ಬಾಬಿ ಡೆಯೊಲ್ ಕಾಮಿಡಿ ಚಿತ್ರದಲ್ಲಿ ನಟಿಸುತ್ತಿರುವ ಈ ಚಿತ್ರದ ನಟವರ್ಗ ಮತ್ತು ತಾಂತ್ರಿಕ ವರ್ಗ ಹೀಗಿದೆ. ನಟವರ್ಗ: ಸೋನಮ್ ಕಪೂರ್, ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಸೆಲಿನಾ ಜೇಟ್ಲಿ, ಇರ್ಫಾನ್ ಖಾನ್, ರಿಮಿ ಸೇನ್ ಪ್ರೇಮ ಚಂದ್ರಮ (ಕನ್ನಡ): ರೇಖಾ, ಕಿರಣ್ ಮತ್ತು ರಘು ಮುಖರ್ಜಿ ಅಭಿನಯದ ಪ್ರೇಮ ಚಂದ್ರಮದ ನಿರ್ದೇಶಕರು ಶಾಹುರಾಜ್ ಶಿಂಧೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶಿಸಿರುವ ಈ ಚಿತ್ರಕ್ಕೆ ಎಚ್.ಸಿ ವೇಣು ಕ್ಯಾಮೆರಾ ಹಿಡಿದಿದ್ದಾರೆ. ಇಬ್ಬರು ನಾಯಕರ ಜೊತೆ ಒಬ್ಬಳೆ ನಾಯಕಿ ಇರುವುದೂ, ಚಿತ್ರದ ಟೈಟಲ್ ಮೇಲೆ ಎರಡು ಪಾರಿವಾಳಗಳು ಮತ್ತು ಸಬ್ ಲೈನ್ "ಮನಸುಗಳ ಮಧುರ ಸಂಗಮ" ಎಂದಿರುವುದರಿಂದ ಇದೊಂದು ತ್ರಿಕೋನ ಪ್ರೇಮಕಥೆಯೋ ಎಂಬ ಅನುಮಾನ. ಮತ್ತೊಂದ್ ಮದುವೇನಾ (ಕನ್ನಡ): ವಾರಕ್ಕೊಂದು ಸಿನೆಮಾ ಮಾಡುವ ಸಾಮರ್ಥ್ಯವುಳ್ಳ ದಿನೇಶ್ ಬಾಬುರ ನೂರನೇ ಸಿನೆಮಾ ’ಮತ್ತೊಂದ್ ಮದುವೆನಾ!’. (೬೫ ಚಿತ್ರ ಕ್ಯಾಮೆರಾ ಮನ್ ಆಗಿ, ೩೫ ಚಿತ್ರ ನಿರ್ದೇಶಕನಾಗಿ).ನಟವರ್ಗ: ಅನಂತ್ ನಾಗ್, ಸುಹಾಸಿನಿ, ತಾರಾ, ರಾಜು ತಾಳಿಕೋಟೆ, ನವೀನ್ ಕೃಷ್ಣ, ಶರಣ್ , ಜೆನಿಫರ್ ಕೋತ್ವಾಲ್ ಮಾಪಿಲ್ಲೈ (ತಮಿಳು): ರಜನೀಕಾಂತ್ ರ ಹಳೆ ಸಿನೆಮಾ ಮಾಪಿಲೈ ಚಿತ್ರದ ಹೊಸ ಅವತರಣಿಕೆ. ಧನುಷ್, ಹಂಸಿಕಾ ಮೋತ್ವಾನಿ, ಮನಿಷಾ ಕೊಯಿರಾಲಾ, ವಿವೆಕ್ ನಟಿಸಿರುವ ಚಿತ್ರಕ್ಕೆ ಮಣಿ ಶರ್ಮಾ ಸಂಗೀತ. ಸೂರಜ್ ನಿರ್ದೇಶನ. ರಿಯೋ (ಇಂಗ್ಲೀಷ್): ಐಸ್ ಏಜ್ ಸರಣಿಯ ನಿರ್ಮಾತೃರಿಂದ ಬಂದಿರುವ ಹೊಸ ಕಾಮಿಡಿ ಎನಿಮೇಷನ್ ಸಿನೆಮಾ ರಿಯೋ. ಕಾರ್ಲೋಸ್ ಸಲ್ಡಾನಾ ನಿರ್ದೇಶಕ. ಕಥೆ ಡಾನ್ ರೈಮ್ಹರ್ ಅವರದ್ದು. ಮಂಚಿವಾಡು (ತೆಲುಗು): ಪಿ.ಲಕ್ಷ್ಮಿ ನಾರಾಯಣ ಬರೆದು ನಿರ್ದೇಶಿಸಿರುವ ಈ ಪ್ರೇಮಕಥೆಯಲ್ಲಿ ತನಿಷ್, ರಾಜೀವ್, ಭಾಮಾ ನಟಿಸಿದ್ದಾರೆ.
08-04-11
ಇಲ್ಲಿವರೆಗಿನ ಅಭಿಪ್ರಾಯಗಳುAdmin 2011-04-09 08:39:31 Thanks for the correction, we have rectified the mistake. Kiran
2011-04-10 03:15:16 ಅಕ್ಷಯ್ ಕುಮಾರ್ ಅವರನ್ನು ಬಿಟ್ಟರೆ ಉಳಿದೆಲ್ಲಾ ಪಾತ್ರವರ್ಗ ಬರೀ ಅಸಹಜತೆಯನ್ನೇ ಮೂಲವನ್ನಾಗಿಸಿರುವುದು ಅಸಹನೀಯ ಎ೦ಬುದು ನನ್ನ ಅಭಿಪ್ರಾಯ. |
|
2011-04-08 10:09:00
In ponnar shankar music director is ilayaraja , please go through the things again edit the things .it may spread wrong information from the right medium and from the right person