ಕೃಪಾಕರ್ ಸೇನಾನಿ ಜೋಡಿ ಕನ್ನಡ ಪರಿಸರ-ಪ್ರಾಣಿ ಪ್ರಿಯರ ನಡುವೆ ತೇಜಸ್ವಿಯವರಷ್ಟೆ ಗಟ್ಟಿಯಾಗಿ ನಿಲ್ಲುವ ಹೆಸರು. ಬಂಡಿಪುರ, ಮದುಮಲೈ ಕಾಡು, ಮಲೆ ಮಹದೇಶ್ವರ ಬೆಟ್ಟ, ವೀರಪ್ಪನ್, ಆತನ ಅಪಹರಣಗಳು ಹೀಗೆ ಸಾಲು ದೃಶ್ಯಗಳ ನಡುವೆ ಥಟ್ ಅಂತ ನಮ್ಮ ನೆನಪಿನ ಪರದೆ ಮೇಲೆ ಮೂಡೋದು ಕೃಪಾಕರ್ ಮತ್ತು ಸೇನಾನಿ. ಕಾಡು, ಅಲ್ಲಿನ ಜನ, ಪ್ರಾಣಿ ಪರಿಸರಗಳೊಡನೆ ಹತ್ತಾರು ವರ್ಷಗಳಿಂದ ಬೆರೆತು ಹೋದ ಈ ಜೋಡಿ ಬೆಳಕಿಗೆ ಬರಲು ವೀರಪ್ಪನ್ ಒಂದು ವಿಧದಲ್ಲಿ ಕಾರಣ ಅನ್ನೋ ವಿಚಾರವೇ ವಿಪರ್ಯಾಸ. ಕೃಪಾಕರ್ ಸೇನಾನಿ ತಮ್ಮ ಜೀವನದ ಹಂಬಲಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ರೀತಿ ಅನನ್ಯ ಮತ್ತು ಅನುಕರಣೀಯ. ಅಂತರ್ರಾಷ್ತ್ರೀಯ ಮಟ್ಟದಲ್ಲಿ ಕನ್ನಡಿಗ ಜೋಡಿಯೊಂದು ಇಷ್ಟೊಂದು ಗಮನ ಸೆಳೆದದ್ದು ಅಪರೂಪ. ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್‌ನ ಇವರ ಡಾಕ್ಯುಮೆಂಟರಿ ಸರಣಿಗಳನ್ನು ನೋಡುತ್ತಾ ಸಾವಿರಾರು ಯುವಜನರು ಇವರ ಅಭಿಮಾನಿಗಳಾಗಿದ್ದಾರೆ.
’ದಿ ಪ್ಯಾಕ್’ ಹಲವು ಎಪಿಸೋಡುಗಳಲ್ಲಿ ಸೀಳು ನಾಯಿ ಕಥಾನಕವಾಗಿ ಕೃಪಾಕರ್ ಸೇನಾನಿ ಜೋಡಿಯಿಂದ ನಿರ್ಮಿತವಾದ ಡಾಕ್ಯುಮೆಂಟರಿ. ಅವರ ಜೀವಿತದ ಹತ್ತು ಹಲವು ವರ್ಷಗಳನ್ನು ಈ ಡಾಕ್ಯುಮೆಂಟರಿ ಕುರಿತ ಕಾಡಿನ ಅಲೆದಾಟಕ್ಕೆ ವಿನಿಯೋಗಿಸಿದ್ದಾರೆ. ಈ ಎಲ್ಲ ಸಮರ್ಪಣೆಗೆ ಪ್ರತಿಫಲವೆಂಬಂತೆ ಚಿತ್ರಕ್ಕೆ "ಗ್ರೀನ್ ಆಸ್ಕರ್" ಪ್ರಶಸ್ತಿ ಲಭಿಸಿದೆ.
ಕನ್ನಡಿಗರಿಗೆ ಹೊಸತೇ ಎನಿಸುವಂಥಹ ಸಿನಿಮಾ ಕುರಿತ ಕಾರ್ಯಕ್ರಮಗಳನ್ನು ವಿನ್ಯಾಸ ಮಾಡಿ ನಿರ್ವಹಿಸಿರುವ ಸಂವಾದ ಡಾಟ್ ಕಾಂ "ದಿ ಪ್ಯಾಕ್" ಚಿತ್ರವನ್ನು ಪ್ರದರ್ಶಿಸಿ ಯುವಜನತೆಯಲ್ಲಿ ಪ್ರಾಣಿ-ಪರಿಸರದೆಡೆಗೆ ಕುತೂಹಲ, ಪ್ರೀತಿ ಮೂಡಿಸಬಹುದಾದ ಚರ್ಚೆ ಇತ್ಯಾದಿ ಒಳಗೊಂಡ ಕಾರ್ಯಕ್ರಮವೊಂದನ್ನು ಏರ್ಪಡಿಸುತ್ತಿದೆ. ಈ ನಿಟ್ಟಿನಲ್ಲಿ ಕೃಪಾಕರ್ ಸೇನಾನಿ ಜೋಡಿ ಪ್ರೇಕ್ಷಕರೊಂದಿಗೆ ಮುಖಾಮುಖಿಯಾಗಲು ಒಪ್ಪಿಕೊಂಡಿರುವುದು ಹರ್ಷದ ವಿಚಾರ.
ಕಾರ್ಯಕ್ರಮದ ಸ್ಥಳ: ಯವನಿಕ ಸಭಾಂಗಣ ದಿನಾಂಕ: 03-09-2011 ಸಮಯ: ಬೆಳಿಗ್ಗೆ 11ಕ್ಕೆ ((ಪ್ರವೇಶ ಪಾಸ್ ಮೂಲಕ ಮಾತ್ರ.ಪಾಸ್‌ಗಳಿಗೆ ಸಂಪರ್ಕಿಸಿ: -Ravi Arehalli - 99004 39930 )) ಕಾರ್ಯಕ್ರಮದ ಯಶಸ್ವೀ ನಿರ್ವಹಣೆಗೆ ಸ್ವಯಂ ಸೇವಕರ ಅಗತ್ಯವಿದ್ದು ಆಸಕ್ತಿಯಿರುವವರು ದಯಮಾಡಿ ಸಂಪರ್ಕಿಸಿ. Ravi - 99004 39930
ಹೆಚ್ಚಿನ ವಿವರಗಳು ಮತ್ತು ಸಂಪರ್ಕ ಮಾಹಿತಿಗಾಗಿ ಮೇಲೆ ಕೊಟ್ಟಿರುವ ವಿಡಿಯೋ ವೀಕ್ಷಿಸಿ. ದಯಮಾಡಿ ನಿಮ್ಮ ಫೇಸ್ ಬುಕ್, ಟ್ವಿಟರ್ ಇತ್ಯಾದಿ ಸಾಮಾಜಿಕ ತಾಣಗಳಲ್ಲಿ ಈ ವಿಡಿಯೋ ಲಿಂಕ್ ಹಂಚಿಕೊಳ್ಳಿ. -ಸಂ