ಏಪ್ರಿಲ್ ಕೊನೆವಾರದ ಚಿತ್ರಗಳು
ನಾಟಿ ಎಟ್ ೪೦ (ಹಿಂದಿ): ಬದುಕು ಶುರುವಾಗುವುದೇ ನಲವತ್ತರ ನಂತರ ಎನ್ನುತ್ತಾರೆ. ವಯಸ್ಸು ನಲವತ್ತಾದರೂ ಇನ್ನೂ ವರ್ಜಿನ್ ಆಗಿರುವ ಎನ್.ಆರ್.ಐ ಒಬ್ಬ ವಧುವನ್ನ ಹುಡುಕಿಕೊಂಡು ಭಾರತಕ್ಕೆ ಬರುತ್ತಾನೆ. ಅದರ ಸುತ್ತ ಸುತ್ತುವ ಈ ಸಿನೆಮಾದಲ್ಲಿ ಗೋವಿಂದ ನಾಯಕ. ಊವಿಕಾ ಚೌಧರಿ ನಾಯಕಿ. ಜಗಮೋಹನ್ ಮುಂದ್ರಾ ನಿರ್ದೇಶನ. ಶೋರ್ ಇನ್ ದಿ ಸಿಟಿ(ಹಿಂದಿ): ತುಷಾರ್ ಕಪೂರ್, ಅಲೋಕ್ ಚತುರ್ವೇದಿ, ಸುಧೀರ್ ಚೌಢರಿ ಅಭಿನಯಿಸಿರುವ ಶೋರ್ ಇನ್ ದಿ ಸಿಟಿ ಚಿತ್ರದಲ್ಲಿ ತುಶಾರ್ ಕಪೂರ್ ಗೆ ಮುಖ್ಯವಾದ ಪಾತ್ರವಿದೆ. ಚಿತ್ರ ಬದುಕಿನಲ್ಲಿ ಮಹತ್ವದ ಸಿನೆಮಾವೊಂದಕ್ಕೆ ಕಾಯುತ್ತಿರುವ ತುಷಾರ್ ಗೆ ಈ ಚಿತ್ರದಲ್ಲಿ ಅದೃಷ್ಟ ಖುಲಾಯಿಸುವ ಭರವಸೆಯಿದೆ. ಸೋರ್ಸ್ ಕೋಡ್ (ಇಂಗ್ಲೀಷ್): ಡಂಕನ್ ಜೋನ್ಸ್ ನಿರ್ದೇಶನದ ಸೋರ್ಸ್ ಕೋಡ್ ಈ ವಾರ ಬಿಡುಗಡೆಯಾಗಲಿರುವ ಸೈನ್ಸ್ ಫಿಕ್ಷನ್. ಜೇಕ್, ವೀರಾ ಫಾರ್ಮಿಗಾ, ಮೈಕೆಲ್ ಮೊಂಗಾನ್ ಅಭಿನಯಿಸಿರುವ ಈ ಚಿತ್ರದ ಕಥೆ ಬೆನ್ ರೀಪ್ಲೆ ಅವರದ್ದು
|
|