ದೃಶ್ಯಕ್ಕೊಂದು ನುಡಿಗಟ್ಟು

ಮಹತ್ತರ ಅವಕಾಶ!!

ಗೋಮುಖ, ಚಿತ್ರ: ಶೇಖರ್‌  ಪೂರ್ಣ.

ಸಂವಾದ ಡಾಟ್ ಕಾಂ ನ ಹೊಸ ಪ್ರಯೋಗವೊಂದಕ್ಕೆ  ನಟರು ಬೇಕಾಗಿದ್ದಾರೆ. ಪ್ರೊಫೇಷನಲ್ ಫ್ಯಾಷನ್ ಫೊಟೊಗ್ರಾಫರ್ ಮತ್ತು ಹವ್ಯಾಸಿ ಛಾಯಾಚಿತ್ರಕಾರನ ನಡುವೆ ಹೆಣೆಯಲಾಗಿರುವ ಚಿತ್ರಕಥೆಗೆ ಸೂಕ್ತವಾದ ನಟರ ಹುಡುಕಾಟದಲ್ಲಿ ನಾವಿದ್ದೇವೆ.

ಚಿತ್ರೀಕರಣ ಎರಡು ಹಂತದಲ್ಲಿ ನಡೆಸುವ ಆಲೋಚನೆಯಿದ್ದು , ಮೊದಲನೇ ಹಂತದಲ್ಲಿ ಆಗುಂಬೆ, ತೀರ್ಥಹಳ್ಳಿ ಸುತ್ತಮುತ್ತ ಜೂನ್ ಸುಮಾರಿಗೆ ಚಿತ್ರೀಕರಣ ನಡೆಸಲಾಗುವುದು. (ಮಳೆ ಶುರುವಾಗುವ ಮುನ್ನ). ಎರಡನೇ ಹಂತದ ಚಿತ್ರೀಕರಣ ಕೇದಾರ, ಬದರಿನಾಥ, ವಾರಣಾಸಿ ಸೇರಿದಂತೆ ಉತ್ತರ ಭಾರತದಲ್ಲಿ , ಅಕ್ಟೋಬರಿನ ಸುಮಾರಿನಲ್ಲಿ ನಡೆಯಲಿದೆ. 

ಚಿತ್ರವನ್ನು ಸಹಕಾರಿ ಯೋಜನೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವುದರಿಂದ ನಟಿಸಲು ಆಸಕ್ತಿಯಿರುವವರು ತಮ್ಮ ಖರ್ಚನ್ನು ತಾವೇ ಭರಿಸಬೇಕಾಗುತ್ತದೆ. ಆಯ್ಕೆಯಾದ ಪಾತ್ರಧಾರಿಗಳಿಂದ ಯಾವುದೇ ಹಣ ಪಡೆಯಲಾಗುವುದಿಲ್ಲ ಮತ್ತು ಸಂಭಾವನೆಯೂ ಕೊಡಲಾಗುವುದಿಲ್ಲ.

 

ಅರ್ಹತೆಗಳು:

ಫ್ಯಾಷನ್ ಫೋಟೊಗ್ರಾಫರ್ ಪಾತ್ರಕ್ಕೆ:

೧. ಕನಿಷ್ಟ ೫.೬ ಅಡಿ ಎತ್ತರವಿರಬೇಕು.

೨. ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡಲು ಬರಬೇಕು.

 

ಹವ್ಯಾಸಿ ಛಾಯಾಚಿತ್ರಕಾರನ ಪಾತ್ರಕ್ಕೆ:

೧. ಸ್ವಲ್ಪ ಕಪ್ಪಗಿರಬೇಕು.

೨. ಸಾಧಾರಣ ಎತ್ತರ

೩. ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರಬೇಕು.

 

ಫ್ಯಾಷನ್ ಮಾಡೆಲಿಂಗ್ ಮಾತ್ರಕ್ಕೆ ಮಹಿಳಾ ಪಾತ್ರಧಾರಿಗಳೊಬ್ಬರು ಬೇಕಾಗಿದ್ದಾರೆ. ಈ ಪಾತ್ರಕ್ಕೆ ಸೂಕ್ತವೆನಿಸುವವರು ಸಂಪರ್ಕಿಸಬಹುದು.

ತಾಂತ್ರಿಕ ವರ್ಗದಲ್ಲಿ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸಲು ಆಸಕ್ತಿ ಇರುವವರು ಬೇಕು. ಸೋನಿ ಪಿ.ಡಿ ೧೭೭ ಮತ್ತು ಕೆನಾನ್ ೫೫೦ ಡಿ ಎಸ್ ಎಲ್ ಆರ್ ನಲ್ಲಿ ಸುಮಾರಾಗಿ ಅನುಭವವಿರುವವರು ಸಂಪರ್ಕಿಸಬಹುದು.

ಈ ಹಿಂದಿನ ಆಡಿಷನ್ ನಲ್ಲಿ ಭಾಗವಹಿಸಿದವರು ಪಾತ್ರಕ್ಕೆ ಸೂಕ್ತವಿಲ್ಲ ಎನಿಸಿದ ಕಾರಣ ಅವರ್ಯಾರನ್ನೂ ಈ ಯೋಜನೆಗೆ ಪರಿಗಣಿಸಲಾಗುತ್ತಿಲ್ಲ. 

ನಮ್ಮ ಮಹತ್ವಾಕಾಂಕ್ಷೆಯ ಈ ಯೋಜನೆಗೆ , ಆಸಕ್ತಿ ಇರುವ ನಟರು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ;

 

9731755966/9900439930

Email; ksctanda@gmail.com

 




ಇಲ್ಲಿವರೆಗಿನ ಅಭಿಪ್ರಾಯಗಳು

Sunny
2011-04-30 02:30:51

Oota tinidi nandru sigutta? atava hotte batte katti cinema madbeka?

aniruddha I
2011-05-23 08:46:17

yaake sir......??? nanninda yenu aagalla anthaana..........???? thank you you........... i'm really thankful to u.....


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು