ದೃಶ್ಯಕ್ಕೊಂದು ನುಡಿಗಟ್ಟು

ಸಿನಿಮಾ ನಿರ್ಮಾಣವೆಂದರೆ ಬರೀ ಹಣ ಉಳ್ಳವರ ಕೆಲಸವಲ್ಲ!

ದೊಂಗಲಮುಠಾ, ನವಿಲಾದವರು, dongalamuta, naviladavaru, advaita kannada film, giriraj b m, ajay rao, samvaada.comಸಿನಿಮಾ ನಿರ್ಮಾಣದ ಒಳಗಿನ ರಾಜಕೀಯ ಸ್ಥಿತಿ, ಸ್ಥಿತ್ಯಂತರಗಳನ್ನು ಕುರಿತಾದ ’ಅಪ್ಪಲ್ರಾಜು’ ಸಿನಿಮಾ ನಂತರ ವರ್ಮಾ ಮಾಡಿದ ಮೂರನೇ ಸಿನಿಮಾ ’ದೊಂಗಲಮುಠಾ’. ಈ ಸಿನಿಮಾ ಮಾಡುವುದರ ಹಿಂದೆ ವರ್ಮಾನ ಸ್ಪಷ್ಟ ಉದ್ದೇಶವೆಂದರೆ, ಸಿನಿಮಾ ನಿರ್ಮಾಣವೆಂದರೆ ಬರೀ ಹಣ ಉಳ್ಳವರು ಮಾತ್ರ ಮಾಡಬಹುದಾದ ಕೆಲಸವಲ್ಲ, ಸಿನಿಮಾ ಎಂಬುದು ಅಭಿವ್ಯಕ್ತಿ ಮಾಧ್ಯಮವಷ್ಟೇ, ಎಂಬುದನ್ನು ಹೊಸಬರಿಗೆ ತೋರಿಸಿಕೊಡುವುದು.

ಸಿನಿಮಾ ನಿರ್ಮಾಣದಲ್ಲಿ ಅಭಿವ್ಯಕ್ತಿಯೊಂದನ್ನೇ ಮುಖ್ಯವಾಗಿಸಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಒಂದು ಪೂರ್ಣ ಸಿನಿಮಾವನ್ನು ಹೇಗೆ ಮಾಡಬಹುದು ಎಂದು ತೋರಿಸಿಕೊಡುವುದಷ್ಟೇ ’ದೊಂಗಲಮುಠಾ’ ಸೃಷ್ಟಿಯ ಹಿಂದಿರುವ ಉದ್ದೇಶ ಎಂದು ಈ ಹಿಂದೆ ಹೇಳೆದ್ದೇನಾದರೂ, ಇಂತಹ ಕಡಿಮೆ ಖರ್ಚಿನಲ್ಲಿ ತಯಾರಾದ ಸಿನಿಮಾಗಳಲ್ಲಿ ಅಭಿವ್ಯಕ್ತಿಯ ಹಿನ್ನಲೆಯಲ್ಲಿ ಕಥೆ, ಕಥಾನಾಂಶಗಳನ್ನು ಹುಡುಕಿದರೆ, ಸಿನಿಮಾ ತಾಂತ್ರಿಕತೆಯನ್ನು ಹೊರತುಪಡಿಸಿ ಕಥೆಯ ವೇಗ ಮತ್ತು ಕಥಾ ಹಂದರದ ಭಾವ ಪರಿಧಿಯೊಳಗೆ ಸೆಳೆಯುವುದೇ ಇಲ್ಲ. ’ ದೊಂಗಲಮುಠಾ’ ದ ಇಡೀ ಕಥೆಯ ಭಾಗಶಃ ಅಂಶವು ಪಾಳು ಬಿದ್ದ ಒಂದು ರೆಸಾರ್ಟ್ನಲ್ಲೇ ನಡೆಯುತ್ತದೆ.
 ಅದರಲ್ಲು ನಮ್ಮ ಸಿನಿಮಾ ನೋಡುವ ಸಂಸ್ಕೃತಿಯಲ್ಲಿ ಕಡಿಮೆ ಪಾತ್ರವರ್ಗದಲ್ಲಿ ಕಥೆಯನ್ನು ನಡೆಸುವ ಅಥವ ಕಡಿಮೆ ಪಾತ್ರವರ್ಗಗಳ ಕಥಾ ಹಂದರದ ಸಿನಿಮಾಗಳ ನಿರ್ಮಾಣವಾಗಿರುವುದು  ಬೆರಳೆಣಿಕೆಯಷ್ಟೇ. ಹಾಗಾಗಿ ದಕ್ಷಿಣ ಭಾರತದ ಪ್ರೇಕ್ಷಕ ಸಿನಿಮಾ ನೋಡಲು ಥಿಯೇಟರ್ ಗೆ ಹೋಗುವ ಮೊದಲೇ ತನ್ನ ದೈನಂದಿನ ಜೀವನದ ಅಂಶಗಳಿಂದ ಹೊರತಾದ ಅಥವ ದೈನಂದಿನ ಜೀವನದಲ್ಲೇ ಸಾಮಾನ್ಯವೆನಿಸುವ ಅಂಶಗಳು ಅಸಾಮಾನ್ಯವಾಗಬಹುದಾದ ದೃಶ್ಯ ಸಾಧ್ಯತೆಗಳನ್ನು ಬಯಸುತ್ತಲೇ ಥಿಯೇಟರ್ ಒಳಗಡೆಗೆ ಕಾಲಿಡುತ್ತಾನೆ.ದೊಂಗಲಮುಠಾ, ನವಿಲಾದವರು, dongalamuta, naviladavaru, advaita kannada film, giriraj b m, ajay rao, samvaada.com

’ದೊಂಗಲಮುಠಾ’ ಸಿನಿಮಾ ಕೂಡ ಇಂತಹದೇ ಸಾಧ್ಯತೆಗಳನ್ನು ಪೂರೈಸಲು ಕೈಗೆಟುಕುವ ಸೌಲಭ್ಯಗಳ ಪರಿಚಾಯವಳಿ. ಆದರೆ ಕನ್ನಡದಲ್ಲು ಇಂತಹದೇ ಸಾಧ್ಯತೆಗಳನ್ನಿಟ್ಟುಕೊಂಡು ತಮ್ಮ ವೈಯಕ್ತಿಕ ಅಭಿವ್ಯಕ್ತಿಯನ್ನು ಪರೀಕ್ಷೆಗೊಳಪಡಿಸುವುದರ ಸಾಧ್ಯತೆಯಾಗಿ ಮಾತ್ರ ಉಳಿದಂತಹ, ಕಥೆ, ಕಥಾ ಹಂದರದ ವಿಷಯಕ್ಕೆ ಸಂಬಂಧಪಟ್ಟಂತೆ ’ದೊಂಗಲಮುಠಾ’ ಗಿಂತ ಕೆಲವೊಂದು ಕ್ಲೀಷೆಗಳನ್ನು ಹೊರತುಪಡಿಸಿ ’ವ್ಯಾಪ್ತಿಯಲ್ಲಿ’ ವಿಶಾಲ ಕ್ಯಾನ್ವಾಸನ್ನು ಹೊಂದಿರುವಂತ ಸಿನಿಮಾ ’ನವಿಲಾದವರು’.

’ದೊಂಗಲಮುಠಾ’ ಸಿನಿಮಾದ ತಾಂತ್ರಿಕ ವರ್ಗ, ಪಾತ್ರದಾರಿಗಳೆಲ್ಲ  ಅನುಭವ ಉಳ್ಳವರು, ’ನವಿಲಾದವರು’ ಸಿನಿಮಾದಲ್ಲಿನ ಒಂದಿಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲ ಹೊಸಬರು, ಎಂಬ ಸಮಾನವಾದ ಕಾರಣಗಳನ್ನು ಬದಿಗಿರಿಸಿ ಇವೆರೆಡನ್ನು ಎರಡು ಸಿನಿಮಾಗಳಷ್ಟೇ ಎಂದು ಪರಿಗಣಿಸುವುದಾದರೆ, ಈ ಎರೆಡೂ ಸಿನಿಮಾಗಳು ಎರೆಡು ವಿಭಿನ್ನವಾದ ಕಾರಣಗಳಿಂದಾಗಿ ಹೊಸ ಸಿನಿಮಾ ನಿರ್ಮಾಣದಾಸಕ್ತರಿಗೆ ಆಕರ ಗ್ರಂಥಗಳಾಗುವ ಸಾಧ್ಯತೆಗಳನ್ನು ಹೊಂದಿವೆ.

೧) ಇರುವ ತಾಂತ್ರಿಕ ಸೌಲಭ್ಯಗಳನ್ನೇ ಬಳಸಿ ಪೂರ್ಣ ಪ್ರಮಾಣದ ಸಿನಿಮಾ ಮಾಡಬಹುದಾದ ಸಾಧ್ಯತೆಗಳು.ದೊಂಗಲಮುಠಾ, ನವಿಲಾದವರು, dongalamuta, naviladavaru, advaita kannada film, giriraj b m, ajay rao, samvaada.com
೨) ಇರುವ ಸಾಧ್ಯತೆಗಳನ್ನೇ ಸರಿಯಾದ ಕ್ರಮದಲ್ಲಿ ಬಳಸಿ ಕಥಾ ಹಂದರಕ್ಕೆ ಹೆಚ್ಚು ಒತ್ತು ಕೊಟ್ಟರೆ, ಕಥಾ ಕ್ಯಾನ್ವಾಸನ್ನು ವಿಸ್ತಾರಗೊಳಿಸಬಹುದಾದ ಸಾಧ್ಯತೆಗಳು.

ಅದೇ ರೀತಿಯಲ್ಲಿ ಈ ಎರಡೂ ಸಿನಿಮಾಗಳನ್ನು ಒಟ್ಟಾರೆಯಾಗಿ ಗಮನಿಸಿ ನೋಡುವಾಗ ಇದರೊಳಗಿನ ನಕಾರಾತ್ಮಕ ಅಂಶಗಳನ್ನು ಗಮನಿಸುವುದಾದರೆ ಎರೆಡು ಮುಖ್ಯ ಅಂಶಗಳನ್ನು ಗುರುತಿಸಬಹುದು,

೧) ಕಥನಾಂಶಗಳಲ್ಲಿರುವ ಕ್ಲೀಷೆಗಳು ನಿರೂಪಣೆಯ ಓಘಕ್ಕೆ ಒಡ್ಡಬಹುದಾದ ಅಪಾಯಗಳು
೨) ಕಡಿಮೆ ವೆಚ್ಚದ ಸಿನಿಮಾ ನಿರ್ಮಿಸುತ್ತಿದ್ದೇವೆ ಎಂಬ ಅರಿವಿನ ನೆರಳಿನಲ್ಲೇ ಕೊಡುಕೊಳುಗೆಗೆ ಒಳಗಾಗಿ ದೃಶ್ಯಾಭಿವ್ಯಕ್ತಿಯಲ್ಲಿ ತೊಡರುಗಳನ್ನುಂಟು ಮಾಡುವುದು.

18-05-2011samvaada.com fan page on facebook




ಇಲ್ಲಿವರೆಗಿನ ಅಭಿಪ್ರಾಯಗಳು

supreeth
2011-05-20 00:44:13

>>>ಕಥನಾಂಶಗಳಲ್ಲಿರುವ ಕ್ಲೀಷೆಗಳು ನಿರೂಪಣೆಯ ಓಘಕ್ಕೆ ಒಡ್ಡಬಹುದಾದ ಅಪಾಯಗಳು ಈ ಎರಡು ಸಿನೆಮಾಗಳಲ್ಲಿ ಕಂಡು ಬಂದ ಕಥೆಯಲ್ಲಿನ ಕ್ಲೀಷೆ ಹಾಗೂ ಅವುಗಳನ್ನು ನಿವಾರಿಸಬಹುದಾಗಿದ್ದ ವಿಧಾನಗಳನ್ನು ಚರ್ಚಿಸಿದ್ದರೆ ಹೆಚ್ಚು ಉಪಯುಕ್ತವಾಗುತ್ತಿತ್ತು.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು