
ಭಾರತ ಹಾಗೂ ಸ್ಪೇನ್ ನಡುವೆ ಸ್ನೇಹ ಸಹಕಾರವನ್ನು ವೃದ್ಧಿಸುವ ಉದ್ದೇಶದಿಂದ ಖಾಜಿ ಅಬ್ದುರ್ ರಹೀಮ್ ಪ್ರಾರಂಭಿಸಿದ ಸಂಸ್ಥೆ: “ಇಮ್ಯಾಜಿನ್ ಇಂಡಿಯಾ”.
ಈ ಸಂಸ್ಥೆ ಭಾರತ ಉಪಖಂಡದ ಸಂಸ್ಕೃತಿಯನ್ನು ಬಿಂಬಿಸುವ ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರಗಳಿಗೆಂದು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವವೊಂದನ್ನು ವರ್ಷಂಪ್ರತಿ ಆಯೋಜಿಸುತ್ತದೆ. ಆಯ್ಕೆಯಾದ ಚಿತ್ರಗಳನ್ನು ಪ್ರದರ್ಶಿಸಿ,ಬಹುಮಾನವನ್ನು ಕೊಡಮಾಡುತ್ತದೆ.
ಭಾರತೀಯ, ಏಷಿಯಾ ಚಿತ್ರಗಳು ಎಂಬ ಎರಡು ವಿಭಾಗಗಳಿಗೆ ಪ್ರತ್ಯೇಕವಾಗಿ ಅತ್ಯುತ್ತಮ ಚಿತ್ರ, ನಿರ್ದೇಶಕ, ನಟ, ನಟಿ, ಸಂಗೀತ ನಿರ್ದೇಶಕ ಎನ್ನುವ ಉಪವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ.
೨೦೧೧ರ ಸಾಲಿನಲ್ಲಿ ಡಾ. ಬಿಜು ಕುಮಾರ್ ನಿರ್ದೇಶಿಸಿರುವ ‘ಮನೆಗೆ ದಾರಿ’ (ಎ ವೇ ಹೋಮ್) ಎಂಬ ಮಲಯಾಳಿ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಮನ್ನಣೆ ಪಡೆದಿದೆ. ಬಿಜು ಕುಮಾರ್ ಅತ್ಯುತ್ತಮ ನಿರ್ದೇಶಕರೆಂದು ಗೌರವಿಸಲ್ಪಟ್ಟಿದ್ದಾರೆ. ಗಿರೀಶ್ ಕಾಸರವಳ್ಳಿಯವರ ‘ಕನಸೆಂಬೋ ಕುದುರೆಯನೇರಿ’ ಚಿತ್ರದಲ್ಲಿನ ಅಭಿನಯಕ್ಕಾಗಿ ವೈಜನಾಥ್ ಬಿರಾದಾರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
ವಿದೇಶದಲ್ಲಿ ನಡೆದ ಚಲನ ಚಿತ್ರೋತ್ಸವವೊಂದರಲ್ಲಿ ಪ್ರಶಸ್ತಿ ಪಡೆದ ಮೊದಲ ನಟ ಎಂಬ ಹಿರಿಮೆಗೂ ಬಿರಾದಾರ್ ಪಾತ್ರರಾಗಿದ್ದಾರೆ. ಸುಮಾರು ಮುನ್ನೂರಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಹಿನ್ನೆಲೆಯಿದ್ದರೂ ಬಿರಾದಾರ್‌ರೊಳಗಿನ ಕಲಾವಿದನಿಗೆ ಸಲ್ಲಬೇಕಾದ ಮನ್ನಣೆ ಸಂದಿರಲಿಲ್ಲ. ಕಾಸರವಳ್ಳಿಯವರ ‘ಕನಸೆಂಬೋ...’ ಚಿತ್ರದಲ್ಲಿ ಹದವಾದ, ನಿಯಂತ್ರಣದಿಂದ ಕೂಡಿದ ಮನೋಜ್ಞ ಅಭಿನಯಕ್ಕಾಗಿ ಬಿರಾದಾರ್ ಅಂತರಾಷ್ಟ್ರೀಯ ಮನ್ನಣೆ ಪಡೆದಿದ್ದಾರೆ. ಸಂವಾದ ಡಾಟ್ ಕಾಮ್ ವೈಜನಾಥ್ ಬಿರಾದಾರ್‌ರನ್ನು ಅಭಿನಂದಿಸುತ್ತದೆ.
ಕನಸೆಂಬೋ ಕುದುರೆಯನೇರಿ ಚಿತ್ರಕ್ಕೆ ಸಂಬಂಧಿಸಿದ ಬರಹಗಳು ಸಂವಾದದಲ್ಲಿ:
- ಕನಸೆಂಬೋ ಕುದುರೆಯನೇರಿ ಚಿತ್ರ ವಿಮರ್ಶೆ :
- ಕನಸೆಂಬೋ ಕುದುರೆಯನೇರಿ ಚಿತ್ರ ತಂಡದೊಂದಿಗಿನ ಸಂವಾದದ ವರದಿ : http://www.samvaada.com/themes/article/191/girish_kanasu_samvaada.html
- ಸಂವಾದದಲ್ಲಿ ಭಾಗವಹಿಸಿದವರ ಕುರಿತ ವಿವರ : http://www.samvaada.com/themes/article/187/kanasu_review.html
