ದೃಶ್ಯಕ್ಕೊಂದು ನುಡಿಗಟ್ಟು

ಚಲನಚಿತ್ರ ಅಕಾಡೆಮಿಗೆ ಪ್ರಾಧಿಕಾರದಿಂದ ಒಂದು ಕೋಟಿ ರೂ.

ಬೆಂಗಳೂರು, ೨೮-೦೬-೨೦೧೧: ಕರ್ನಾಟಕ ಚಲನಚಿತ್ರ ಅಕಾಡೆಮಿಯ ಆಶ್ರಯದಲ್ಲಿ ಅತ್ಯಧುನಿಕ ಡಿಜಿಟಲ್ ಚಲನಚಿತ್ರ ಭಂಡಾರವನ್ನು ಸ್ಥಾಪಿಸಿ ಅದನ್ನು ನಿರ್ವಹಿಸಲು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಒಂದು ಕೋಟಿ ರೂಪಾಯಿಗಳ ಆರ್ಥಿಕ ನೆರವನ್ನು ನೀಡುತ್ತಿದೆಯೆಂದು ಪ್ರಾಧಿಕಾರದ  ಪ್ರಕಟಣೆಯ ಹೇಳಿಕೆಯೊಂದು ಇಂದು ತಿಳಿಸಿದೆ.

ಪ್ರಾಧಿಕಾರ ನೀಡುವ ಈ ನೆರವಿನಿಂದ ‘ಬಿಡಿಎ ಚಲನಚಿತ್ರ ಭಂಡಾರ’ ವನ್ನು ಸ್ಥಾಪಿಸಿ ಕನ್ನಡ ಹಾಗು ಇತರ ಭಾಷೆಗಳ ಯುಪಯುಕ್ತ ಚಲನಚಿತ್ರಗಳನ್ನು ಸಂಗ್ರಹಿಸಲು ಈ ನಿಧಿಯಿಂದ ಬರುವ ಬಡ್ದಿ ಹಣವನ್ನು ಬಳಸಿಕೊಳ್ಳಲಾಗುವುದು.

ಜಗತ್ತಿನ ಶ್ರೇಷ್ಠ ಚಿತ್ರಗಳನ್ನು ಡಿಜಿಟೈಸ್ ಮಾಡಿಸಿ ಸಂಗ್ರಹಿಸಲು ಅಕಾಡೆಮಿಯು ಪ್ರಾಧಿಕಾರದ ನೆರವನ್ನು ಕೋರಲಾಗಿತ್ತು. ಈ ಕೋರಿಕೆಗೆ ಸ್ಪಂದಿಸಿರುವ ಪ್ರಾಧಿಕಾರವು ‘ಭಂಡಾರದ ಚಟುವಟಿಕೆ ಹೊರತು ಪಡಿಸಿ ಬೇರೆ ಯಾವುದೇ ಕಾರ್ಯಕ್ರಮಕ್ಕು’ ತಾನು ನೀಡಿರುವ ನೆರವನ್ನು ಬಳಸಬಾರದು ಎಂಬ ಷರತ್ತಿನಿಂದಿಗೆ ಈ ನೆರವು ನೀಡಿದೆಯೆಂದು ಇದೇ ಪ್ರಕಟಣೆ ತಿಳಿಸಿದೆ.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು