ದೃಶ್ಯಕ್ಕೊಂದು ನುಡಿಗಟ್ಟು

ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಡಾಕ್ಯುಮೆಂಟರಿಗೆ ಆಹ್ವಾನ

ಅಸ್ತಿತ್ವ ಚಾರಿಟಬಲ್ ಟ್ರಸ್ಟ್, ಅಂಜಲಿ ರಾಮಣ್ಣ, ಹೆಣ್ಣು ಭ್ರೂಣ ಹತ್ಯೆ, ಡಾಕ್ಯುಮೆಂಟರಿ, astitva charitable trust, anjali ramanna, female foetocideಅಸಹಾಯಕ ಹೆಂಗಸರ ಮತ್ತು ಮಕ್ಕಳ ಸಂರಕ್ಷಣೆಗಾಗಿ ಹಣಾಪೇಕ್ಷೆಯಿಲ್ಲದೆ ಕೆಲಸ ಮಾಡುವ ಸಂಸ್ಥೆ ಅಸ್ತಿತ್ವ ಚಾರಿಟಬಲ್ ಟ್ರಸ್ಟ್. ಇದನ್ನು ನಡೆಸುತ್ತಿರುವ ಅಂಜಲಿ ರಾಮಣ್ಣ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಜಾಗೃತಿ ಮೂಡಿಸಲು ವಿಡಿಯೋ ಡಾಕ್ಯುಮೆಂಟರಿ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ.ಅಸಹಾಯಕ ಹೆಂಗಸರ ಮತ್ತು ಮಕ್ಕಳ ಸಂರಕ್ಷಣೆಗಾಗಿ ಹಣಾಪೇಕ್ಷೆಯಿಲ್ಲದೆ ಕೆಲಸ ಮಾಡುವ ಸಂಸ್ಥೆ ಅಸ್ತಿತ್ವ ಚಾರಿಟಬಲ್ ಟ್ರಸ್ಟ್. ಇದನ್ನು ನಡೆಸುತ್ತಿರುವ ಅಂಜಲಿ ರಾಮಣ್ಣ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಜಾಗೃತಿ ಮೂಡಿಸಲು ವಿಡಿಯೋ ಡಾಕ್ಯುಮೆಂಟರಿ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಸ್ವಯಂ ಪ್ರೇರಣೆಯಿಂದ ಯಾರು ಬೇಕಾದರೂ ಇದರಲ್ಲಿ ಭಾಗವಹಿಸಬಹುದಾಗಿದೆ. ನಿಮ್ಮ ಆಯ್ಕೆಯ ಕೆಮರಾ, ನಿಮ್ಮ ಆಯ್ಕೆಯ ಸ್ಥಳ, ನಿಮ್ಮ ಆಯ್ಕೆಯ ಮಾದರಿಯಲ್ಲಿ ವಿಡಿಯೋ ಚಿತ್ರೀಕರಣ ನಡೆಸಿ ಈ ಸಂಸ್ಥೆಗೆ ಕಳುಹಿಸಿ ಕೊಡಬೇಕು. ಆದರೆ ವಿಷಯ ವಸ್ತು ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಜಾಗೃತಿ ಮೂಡಿಸುವುದಕ್ಕೆ ಸಂಬಂಧಿಸಿದ್ದಾಗಿರಬೇಕು.

ನಿಮ್ಮ ಅಮ್ಮ, ಕೆಲಸಕ್ಕೆ ಬರುವ ಪುಟ್ಟಮ್ಮ, ತಂಗಿ, ತಮ್ಮ, ಮಗಳು, ಸಹೋದ್ಯೋಗಿಗಳು, ನೆರೆಹೊರೆಯರು, ದಾರಿಹೋಕರು ಯಾರನ್ನು ಬೇಕಾದರೂ ಸಂದರ್ಶಿಸಿ ಚಿತ್ರೀಕರಣ ನಡೆಸಬಹುದು.

ಇಲ್ಲವೆ ಹೀಗೂ ಮಾಡಬಹುದು: ಅಭಿಪ್ರಾಯ ಹೇಳುವುದು, ಕವಿತೆ ಓದುವುದು, ಹಾಡುವುದು, ಮೂಕಾಭಿನಯದ ಮೂಲಕ ಸೂಚಿಸುವುದು, ನೃತ್ಯ, ಸ್ಲೋಗನ್ ಹೇಳುವುದು (ಗುಂಪಿನಲ್ಲಾದರೂ ಆದೀತು), ಪ್ರಸಿದ್ಧರ ಅನಿಸಿಕೆಗಳನ್ನು ಹಂಚಿಕ ನಿಮ್ಮ ಅಭಿಪ್ರಾಯದ ಧ್ವನಿ ಮತ್ತು ಚಿತ್ರಣ ಸ್ಪಷ್ಟವಾಗಿರಲಿ. ನಿಮ್ಮ ಕೆಲಸ ನಿಮ್ಮ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚುವಂತೆ ಇರಲಿ. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವಲ್ಲಿ ನಿಮ್ಮದೂ ಪಾಲಿರಲಿ.

ಒಬ್ಬರು ಎಷ್ಟು ಕ್ಲಿಪ್ಪಿಂಗುಗಳನ್ನಾದರೂ ಕಳಿಸಿಕೊಡಬಹುದು ಆದರೆ ಪ್ರತಿಯೊಂದು ಕ್ಲಿಪ್ಪಿಂಗ್ ೨ ನಿಮಿಷಗಳ ಕಾಲಾವಧಿಯನ್ನು ಮೀರದಿರಲಿ. ಸ್ಪಷ್ಟವಾದ, ಕ್ರಿಯಾಶೀಲವಾದ ಮುದ್ರಿಕೆಗೆ ಆದ್ಯತೆ.

ಚಿತ್ರೀಕರಣದ ನಂತರ ವಿಡಿಯೋವನ್ನು ಸಿಡಿಗೆ ಹಾಕಿ ನಮಗೆ ಪೋಸ್ಟ್ ಅಥವಾ ಕೊರಿಯರ್ ಮೂಲಕ ತಲುಪಿಸಬಹುದು. ಇಲ್ಲವೆ ಖುದ್ದಾಗಿ ನಮ್ಮ ಕಚೇರಿಗೆ ಬಂದು ನೀಡಬಹುದು. ವಿಡಿಯೋ ಕಳಿಸಿಕೊಡುವುದಕ್ಕೆ ಕಡೆಯ ದಿನಾಂಕ ಜುಲೈ ೨೦,೨೦೧೧.

ನಮ್ಮ ವಿಳಾಸ ಹೀಗಿದೆ:

ASTITVA Legal Charitable Trust
No.8 Prerana Towers 2nd Floor
Ranka Colony
Off Bannerghatta Road
Bengaluru - 560 076

Phone : 080-41211322

Contact person : Ms. Archana

ಹೆಚ್ಚಿನ ವಿವರ ಬೇಕಿದ್ದರೆ astitvalegal@gmail.com ಗೆ ಈಮೇಲ್ ಮಾಡಿ.

 

 

12-07-2011

samvaada.com fan page on facebook


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು