"ರಾಷ್ಟ್ರೀಯ ಕಿರುಚಿತ್ರ ಹಬ್ಬ-2011"ನ್ನು ಇದೇ ನವೆಂಬರ್ 27ರಂದು ಬೆಂಗಳೂರಿನಲ್ಲಿ ಕೆ.ವಿ ಸುಬ್ಬಣ್ಣ ಆಪ್ತ ಸಮೂಹ ಮತ್ತು by2 coffee films ಜಂಟಿಯಾಗಿ ಆಯೋಜಿಸಿವೆ. ಆಸಕ್ತರು ತಮ್ಮ ಕಿರುಚಿತ್ರಗಳನ್ನು ಸೆಪ್ಟಂಬರ್-30ರ ಒಳಗಾಗಿ ಕಳುಹಿಸಬಹುದು.
ಕಥೆ-ಕಿರು ಕಥೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಬಾಲ್ಯಾವಸ್ಥೆಯಲ್ಲಿ ಕಥೆಗಳು ಅಜ್ಜಿಯ ಮುಖಾಂತರ ನಮಗೆ ತಲುಪಿದರೆ, ಬೆಳೆಯುತ್ತಾ ಕೇಳುವ ಪಾಠ-ಪ್ರವಚನಗಳಲ್ಲಿ ಕಿರು ಕಥೆ ಆಧಾರಿತ ಭೋಧನೆಯೆ ಶಿಕ್ಷಣದ
ಮೂಲ ಸರಕಾಗಿದೆ. ಈಗಿನ ಕಾಲದಲ್ಲಿ ಸದಾ ಎದುರಾಗೋ ಜಾಹೀರಾತು ಮತ್ತು ಸಿನಿಮಾಗಳಲ್ಲಿ ಸಣ್ಣ ಕಥೆಗಳೆ ಜೀವಾಳ. ಕಾದಂಬರಿಗಳನ್ನು ಸಿನಿಮಾಗಳಿಗೆ ಹೋಲಿಸಿದರೆ, ಸಣ್ಣ ಕಥೆಗಳನ್ನು ಕಿರುಚಿತ್ರಗಳಿಗೆ ಹೋಲಿಸಬಹುದು. ಎರಡೂ ತಮ್ಮದೇಯಾದ ರೀತಿಯಲ್ಲಿ ಪ್ರಭಾವಶಾಲಿ ಮಾಧ್ಯಮಗಳಾಗಿದ್ದರೂ, ಸಿನಿಮಾಗಳಿಗೆ ಸಿಗುತ್ತಿರುವ ಪ್ರಾಶಸ್ತ್ಯ ಕಿರುಚಿತ್ರಗಳಿಗೆ ಸಿಗುತ್ತಿಲ್ಲ. ಇಂತಹ ಈ ಸಂದರ್ಭದಲ್ಲಿ ಕಿರುಚಿತ್ರಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಪ್ರತಿಭಾವಂತರಿಗಾಗಿ, ಅವರ ಕೆಲಸಗಳಿಗೆ ಒಂದು ವೇದಿಕೆ ಒದಗಿಸುವ ಸಲುವಾಗಿ ಈ ಕಿರುಚಿತ್ರ ಹಬ್ಬ.ಇಷ್ಟೇ ಅಲ್ಲ, ಕಿರುಚಿತ್ರಗಳನ್ನು ಮಾಡುವವರಿದ್ದಾರೆ ಅನ್ನೋದೆ ಎಷ್ಟೊಂದು ಜನರಿಗೆ ಗೊತ್ತಿಲ್ಲ, ಹೀಗಿರುವಾಗ ಹಲವಾರು ಪ್ರತಿಭಾವಂತರು ಒಳ್ಳೊಳ್ಳೆ ಕಿರುಚಿತ್ರಗಳನ್ನು ಮಾಡಿದ್ದರೂ ಸಹ, ಅವರಿಗೆ ಪ್ರದರ್ಶಿಸಲು ವೇದಿಕೆ ಸಿಗುತ್ತಿಲ್ಲ ಅನ್ನೋದು ಒಂದು ಕೊರಗಾದರೆ, ಸಿಕ್ಕರೂ ಜಾಸ್ತಿ ಇರೋ ಪ್ರವೇಶ ಶುಲ್ಕ ಹಿಂದೇಟು ಹಾಕುವಂತೆ ಮಾಡುತ್ತೆ. ಯಾಕೆಂದರೆ ಸಾಮಾನ್ಯವಾಗಿ ಕಿರುಚಿತ್ರಗಳನ್ನು ಕಡಿಮೆ ಹಣದಲ್ಲಿ ಮಾಡಿರುತ್ತಾರೆ, ಅಂತಹವರು ಯಾವತ್ತೂ ಬೆಳಕಿಗೆ ಬಾರದೆ ಇರಬಹುದು, ಅದನ್ನ ತಡೆಗಟ್ಟ ಬೇಕಾಗಿದೆ.ಅಂತಹವರಿಗೋಸ್ಕರ ಪ್ರವೇಶ ಶುಲ್ಕವಿರದೆ ಕಿರುಚಿತ್ರ ಹಬ್ಬವನ್ನು ನಡೆಸುವುದು ನಮ್ಮ ಮೂಲ ಉದ್ದೇಶ. ಬೇರೆ ರಾಜ್ಯಗಳಲ್ಲಿ ನಡೆಯುವಂತೆ ಪ್ರಭಾವಶಾಲಿ ಮಾಧ್ಯಮವಾಗಿ ಕಿರುಚಿತ್ರ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲ. ಕಿರುಚಿತ್ರ ತಯಾರಕರನ್ನು ಒಂದೆಡೆ ಸೇರಿಸುವುದರ ಜೊತೆಗೆ ಪ್ರಾಯೋಜಕರಿಗೆ ಮತ್ತೊಂದು ಸಮೂಹವನ್ನು ತಲುಪುವ ಅವಕಾಶವನ್ನು ದೊರಕಿಸಿ ಕೊಡುವುದು ಈ ಕಾರ್ಯಕ್ರಮದ ಉದ್ದೇಶ.
Email (preferred): ShortFilmFest@by2coffeefilms.com
Shridhar Reddy
Director - by2coffee films Short Film Festival - 2011
by2coffee films
+91 99163 15540
ಹೆಚ್ಚಿನ ಮಾಹಿತಿಗಾಗಿ http://shortfilmfest.by2coffeefilms.com/ ಗೆ ಭೇಟಿ ಕೊಡಬಹುದು.
13-07-2011
