ದೃಶ್ಯಕ್ಕೊಂದು ನುಡಿಗಟ್ಟು

ರಾಜಕೀಯ ಪರಿಹಾರಗಳನ್ನು ದೂರ ಇಟ್ಟ ಕಾಸರವಳ್ಳಿ

ಕರ್ನಾಟಕದಲ್ಲಿ ಸಾಹಿತ್ಯ ಕೃತಿಗಳ ನಿರೂಪಣೆಗೆ ಸಿನಿಮಾ ಪರಿಭಾಷೆಯನ್ನು ಸಮರ್ಥವಾಗಿ ಅಳವಡಿಸಿಕೊಂಡವರು girish kasaravalli, samvaada.com,ಗಿರೀಶ್ ಕಾಸರವಳ್ಳಿ,  ವಿ ಎನ್ ಲಕ್ಷ್ಮಿನಾರಾಯಣ, ಮೈಸೂರು ಕಾಸರವಳ್ಳಿ ಒಬ್ಬರೇ. ಅವರ ಇತ್ತೀಚಿನ ಚಿತ್ರ ಕನಸೆಂಬ ಕುದುರೆಯ ಬೆನ್ನೇರಿ  ಸಿನಿಮಾ ಪರಿಭಾಷೆಯನ್ನು ಸಮರ್ಥವಾಗಿ ಅಳವಡಿಸಿಕೊಳ್ಳುವ ಅವರ ಸಾಮರ್ಥ್ಯಕ್ಕೆ ಒಂದು ಮಾದರಿ ಉದಾಹರಣೆ.  ಬಹಳ ಯೋಚಿಸಿ ಅವರು ದೃಶ್ಯಗಳನ್ನು ಅಳವಡಿಸಿಕೊಂಡ ಬಗೆ ನೋಡಿದರೆ ಅಲ್ಲಿ ಭಾವನಾತ್ಮಕವೆನಿಸುವ ಅನುಭವಗಳು ಸಹಜವಾಗಿ ನಗಣ್ಯವಾಗಿವೆ. ಜಾತಿ, ನಂಬಿಕೆ, ಸಿದ್ಧಾಂತ ಇತ್ಯಾದಿಗಳನ್ನು ಮೀರಬಹುದಾದ ಸಾಧ್ಯತೆಗಳನ್ನು ಜಾಗತೀಕರಣ ಮತ್ತು ವಿಶೇಷ ಆರ್ಥಿಕವಲಯಗಳ ಕಾರಣದಿಂದಾಗಿ ಭೂಮಿ ಕಳೆದುಕೊಳ್ಳುವ ರೈತ ಸಮುದಾಯದ ಮುಂದೆ ಇಡುವುದು ಚಿತ್ರದ ಪ್ರಮುಖ ಅಂಶ. ಹುಟ್ಟು ಸಾವುಗಳ ಸುತ್ತ ಹಬ್ಬಿಕೊಂಡಿರುವ ಲೌಕಿಕದ ಬೇಕು ಬೇಡಗಳ ನಡುವೆ ಹುಟ್ಟಿಕೊಳ್ಳುವ ಜೀವನದ ವರ್ಣ ಚಿತ್ತಾರದಂತೆ ಕಾಣಿಸಿರುವುದು ವೈಚಾರಿಕ ಭ್ರಮೆಗಳನ್ನು ಮೀರುವ ಪ್ರಯತ್ನದ ವಿಧಾನವಾಗಿದೆ.  ಸಾಹಿತ್ಯದ ಕೃತಿಯನ್ನು ಸಿನಿಮಾಗೆ ಅಳವಡಿಸಿಕೊಳ್ಳುವ ಪ್ರಯತ್ನದಲ್ಲಿ ಕಾಸರವಳ್ಳಿ ಮೂಲ ಮತ್ತು ಪ್ರಾದೇಶಿಕ ಆಚರಣೆ, ಪ್ರತಿಕ್ರಿಯೆಗಳನ್ನು ಗಮನಕ್ಕೆ ತೆಗೆದುಕೊಳ್ಳುತ್ತಾ ಪ್ರಪಂಚದ ಶ್ರೇಷ್ಠ ನಿರ್ದೇಶಕರು ಪಾತ್ರ, ಸನ್ನಿವೇಷಗಳನ್ನು ಹೆಣೆಯುವ ಕ್ರಮಗಳನ್ನು ಅಪ್ರಯತ್ನಪೂರ್ವಕವಾಗಿ ಅನುಸರಿಸುತ್ತಾ ಹೋಗಿದ್ದಾರೆ. girish kasaravalli, samvaada.com, ಕಾಸರವಳ್ಳಿ, ಕನಸೆಂಬೋ ಕುದುರೆಯನೇರಿ

ಬಡತನದಿಂದ ನೊಂದ ಸ್ಮಶಾನದ ಗುಂಡಿ ತೋಡುವಾತ ಈರ್ಯ,  ಸೃಷ್ಟಿ, ಲಯಗಳ ಸತ್ಯ ಶೋಧನೆಗೆ ಹೊರಟ ಕಾರಣೀಕ(ಸುಡುಗಾಡು ಸಿದ್ಧ)ನ ಕನಸು ಕಂಡು ಆ ಮೂಲಕ ಯಾರೋ ಸತ್ತು ತನ್ನ ಜೀವನ ನಿರ್ವಹಣೆಯ ಲೌಖಿಕದ ಕಷ್ಟ ನಿವಾರಣೆಗೆ ಕಾತರಿಸುತ್ತಿರುತ್ತಾನೆ. ಸತ್ತವರಿಗೆ ಗುಂಡಿ ತೋಡುವ ಕೆಲಸದಲ್ಲಿ ಜೀವನದ ನಿರ್ವಹಣೆಯ ಅಸಾಧ್ಯತೆಯನ್ನು ಮನಗಂಡವನಿಗೆ ಸುಡುಗಾಡು ಸಿದ್ಧನ ಪಾರಂಪರಿಕ ಪಾತ್ರ ಆತನ ಗಿಡ ನೆಡುವ ಕನಸಿಗೆ ಆಸರೆಯಾಗಿ ನಿಲ್ಲುತ್ತದೆ. ಸುಡುಗಾಡು ಸಿದ್ಧನ ಸೂಚನೆಗಳು ಈರ್ಯನಿಗೆ ಅರ್ಥವಾಗುತ್ತಾ ಹೋಗುವ ಕ್ರಮದಲ್ಲಿ ಚಿತ್ರ ಕೊನೆಯಾಗುತ್ತದೆ.  ಗಿರೀಶ್ ತಮ್ಮ ಇತರ ಸಿನಿಮಾಗಳಂತೆ ಇಲ್ಲಿಯೂ ಸಾಮಾಜಿಕ ಸಾಂಸ್ಕೃತಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತ ಭಾರತದ ಬೇರೆ ಭಾಷೆಗಳಲ್ಲಿ ಆಗಿರುವಂತೆ ರಾಜಕೀಯ ಪ್ರತಿಕ್ರಿಯೆಗಳನ್ನು ನೀಡುವ ಬದಲಾಗಿ ಸಾಂಸ್ಕೃತಿಕ ಪರಿಹಾರಗಳ ಸಲಹೆ ನೀಡಿದ್ದಾರೆ. ಪ್ರಸಿದ್ಧ ನಿರ್ದೇಶಕರಾಗಿಯೂ ಕನ್ನಡ ಸಾಹಿತ್ಯ ಕೃತಿಗಳ ಮೇಲೆ ಅವಲಂಬಿತರಾದರಂತಿದ್ದರೂ ಸಿನಿಮಾ ನಿರ್ದೇಶನದ ಅವರ ಕೌಶಲ್ಯ ಪ್ರಾದೇಶಿಕ  ಚಿತ್ರರಂಗದ ಮಿತಿಗಳ ನಡುವೆ ಯಾವುದೇ ಬಗೆಯಲ್ಲೂ ಕಡಿಮೆಯೇನಿಲ್ಲ. ಆದರೆ ಅವರ ಇತ್ತೀಚಿನ ಚಿತ್ರದಲ್ಲಿ ಈ ಕೌಶಲ್ಯ ಸೊರಗಿದಂತೆ ಕಾಣುತ್ತದೆ. ಪ್ರಾಯೋಗಿಕ ಭಾವನಾತ್ಮಕ ಸಂಗತಿಗಳಿಲ್ಲದ ಚಿತ್ರ ವ್ಯರ್ಥಗೊಂಡ ಬೌದ್ಧಿಕ ಕಸರತ್ತಾಗಿ ಉಳಿಯುತ್ತದೆ

17-07-2011

samvaada.com fan page on facebook




ಇಲ್ಲಿವರೆಗಿನ ಅಭಿಪ್ರಾಯಗಳು

ರವಿ ಮೂರ್ನಾಡು
2011-07-17 06:18:50

ಕನ್ನಡ ಚಿತ್ರರಂಗಕ್ಕೆ ಸೃಜನಶೀಲತೆಯ ಕಿರೀಟ ತೊಡಿಸಿದವರಲ್ಲಿ ಕಾಸರವಳ್ಳಿ ಒಬ್ಬರು.ಮನುಷ್ಯನ ಅಂತರಂಗದ ಮಾತುಗಳನ್ನು ಪಿಸುಮಾತುಗಳು ಎಷ್ಟು ನಾಜೂಕಾಗಿ ಬರಹಗಳು, ಕವಿತೆಗಳು, ಕಥೆಗಳು, ಕಾದಂಬರಿಗಳು ತೆರೆದಿಡುತ್ತದೋ, ಅದನ್ನೇ ಚಲನಚಿತ್ರಗಳಾಗಿ ಮೂಡಿಸುವಲ್ಲಿ ಕಾಸರವಳ್ಳಿ ಒಂದು ಅಧ್ಯಾಯವಾಗುತ್ತಾರೆ. ಮಲಯಾಳಂನ ಅಡೂರು ಗೋಪಾಲಕೃಷ್ಣನ್‍ ಅವರ ಛಾಯೆ ಎಂದರೆ ಒಪ್ಪಿತವೆ. ಉತ್ತಮ ಲೇಖನ ಮೂಡಿಬಂದಿತು.ಧನ್ಯವಾದಗಳು.

Manju Kp
2011-07-17 06:44:09

ಕನ್ನಡವನ್ನು ಅಂತಾರಾಷ್ಟ್ರಿಯ ಮಟ್ಟದಲ್ಲಿ ತಮ್ಮ ಸೃಜನಾತ್ಮಕ ಚಿತ್ರಗಳ ಮೂಲಕ ಕಾಸರವಳ್ಳಿ ಯವರು ಬೆಳಗಿಸದ್ದಾರೆ.ಹಾಗೆಯೇ ಕನ್ನಡ ಚಿತ್ರರಂಗವನ್ನು ವಿಶ್ವಪ್ರಸಿಧ್ಧ ಮಾಡಿದವರಲ್ಲಿ ಇವರೇ ಅಗ್ರಗಣ್ಯರು.ಲೇಖನ ಉತ್ತಮವಾಗಿದೆ, ಈ ಮೂಲಕ ಗಿರೀಶ್ ಕಾಸರವಳ್ಳಿ ಧನ್ಯವಾದಗಳು.

Bhavana
2011-07-17 10:25:11

I dont understand what writer likes to say here. Kasarvalli is universal acclaimed director and I dont think he is following any other director. More over this writeup doesnt say anything about movie and there is no connection between title and article.. huh....

ರವಿ
2011-07-20 07:12:44

ಮೊದಲನೆಯದಾಗಿ, ಸಿನೆಮದ ಹೆಸರನ್ನು ಸರಿಯಾಗಿ ಗಮನಿಸಿ ಬರೆಯಿರಿ. ಆಮೇಲೆ ಗಿರೀಶರು ಜಗತ್ತಿನ ಯಾವ ನಿರ್ದೇಶಕರನ್ನು (ಅಪ್ರಯತ್ನಪೂರ್ವಕವಾಗಿ) ಅನುಸರಿಸಿದ್ದಾರೆ ಎಂದು ಉದಾಹರಣೆ ಸಹಿತ ವಿವರಿಸಿದರೆ ನಿಮ್ಮ ಹೇಳಿಕೆಗಳಿಗೆ ಶಕ್ತಿ ಬಂದೀತು.

V.N.Laxminarayana
2011-08-30 09:34:30

ಈ ಪ್ರತಿಕ್ರಿಯೆ ನಾನು ಬರೆದ ಿಇಂಗ್ಲಿಷ್ ಪ್ರತಿಕ್ರಿಯೆಯ ಅಸಮರ್ಪಕ ಅನುವಾದ. ಅದರೊಂದಿಗೆ ಕನ್ನಡದ ಅವತರಣಿಕೆಯನ್ನು ಹೋಲಿಸಿದರೆ ನನ್ನ ಅಭಿಪ್ರಾಯ ಸ್ಪಷ್ಟವಾಗಬಹುದು. ಸದುದ್ದೇಶದಿಂದ ಅನುವಾದ ಮಾಡಿಕಳಿಸಿದ ಶ್ರೀ ನಾರಾಯಣಸ್ವಾಮಿಯವರಿಗೂ, ಪ್ರಕಟಿಸಿದ ಸಂವಾದಕ್ಕೂ ಕೃತಜ್ಞತೆಯನ್ನು ಮಾತ್ರ ಹೇಳಬಲ್ಲೆ. ಮೂಲ ಬರಹ ಹೀಗಿದೆ: A Cerebral Dream of a Seasoned Craftsman Girish Kasaravalli is perhaps the only film maker in karnataka who employs cinematic idiom exclusively to create narratives based on literary works. His recent film Riding the Stallion of a Dream is another example of his ability to employ cinematic craft. Girish has contrived a film out of carefully chosen visuals which are charged more with cerebral ideas and obviously less with emotional experience. Using the back drop of globalisation, and the land issues kicked off by the SEZ in remote villages the film tries to portray viable alternatives thrown open to the villagers cutting accross caste and class, faith and philosophy. The specrtum of life colouring the haves and the have nots presents an’ intellectual dream’ of life and death interwoven. Girish Kasaravalli borrows subconsciously from veteran masters of world cinema in perceiving characters and situations of this film while trying to be original and regional in conceiving rituals and responses, ofcourse, drawn from the literary text which the film is based on. The poverty stricken grave digger and the imaginative peasants have a strange paradoxical act in common namely digging the earth to destroy and to create. The nomadic Sudugadu Siddha, being an ethnic symbol of both death and life simultaneously helps the grave digger to realise his dream of planting life though he is condemned to make a living by facilitating burial of the dead. Girish like in his other films picks up socio-cultural issues to portray and to suggest cultural waysout but unlike his lot in other Indian languages steadfastly avoids being political in his perception. As a deliberate film maker, heavily depending on literary works in kannada he betrays his weakness for borrowed talent though his strength of cinematic craft is unassailable from any corner of the regional film factory. His latest film suffers greatly from this. The absence of experiential emotional content in the film makes it a contrived cerebral dream. V.N.Laxminarayana, Mysore


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು