ದೃಶ್ಯಕ್ಕೊಂದು ನುಡಿಗಟ್ಟು

ಇಂದು ಮತ್ತು ನಾಳೆ ಬಸವಲಿಂಗಯ್ಯನವರ ನಾಟಕ "‘ಕಾತಚಿ ಕಥಾ ಲೋಕ" ರವೀಂದ್ರ ಕಲಾಕ್ಷೇತ್ರದಲ್ಲಿ

ಬಸವಲಿಂಗಯ್ಯ, ನಾಟಕ, ಕಾತಚಿ ಕಥಾರಂಗ, ರವೀಂದ್ರ ಕಲಾಕ್ಷೇತ್ರ, basavalingayya, kaatachi kathaaranga, samsa suresh, samvaada.comಇದೊಂದು ಅವಕಾಶ ಅಂತಾನೆ ತಿಳ್ಕೊಳ್ಳಿ. ರಂಗಾಯಣದಲ್ಲಿ ಅಹೋರಾತ್ರಿ ಪ್ರದರ್ಶನವೆಂದು ಪ್ರಸಿದ್ಧಗೊಂಡು ಯಶಸ್ವಿಯಾದ "ಮಲೆಗಳಲ್ಲಿ ಮದುಮಗಳು" ರಂಗ ರೂಪಾಂತರ ನಿರ್ದೇಶಿಸಿದ ಬಸವಲಿಂಗಯ್ಯನವರು ನಿರ್ದೇಶಿಸಿದ ನಾಟಕವೊಂದು ಕಲಾಕ್ಷೇತ್ರದಲ್ಲಿ ಪ್ರದರ್ಶನವಾಗುತ್ತಿದೆ. ನಿನ್ನೆ "‘ಕಾತಚಿ ಕಥಾ ಲೋಕ" ಪ್ರಯೋಗವನ್ನು ನೋಡಿ ಬಂದ ಮೇಲೆ ಮೈಸೂರಿನಲ್ಲಾದ ’ಮಲೆಗಳಲ್ಲಿ ಮದುಮಗಳು’ ಪ್ರಯೋಗವನ್ನು ಮಿಸ್ ಮಾಡಿಕೊಂಡಂತೆ ಬಹಳಷ್ಟು ಜನ ಇದನ್ನೂ,  ಬೆಂಗಳೂರಿನಲ್ಲಿದ್ದೂ ಮಿಸ್ ಮಾಡಿಕೊಳ್ತಾರೇನೋ ಅನ್ನಿಸಿತು.

"‘ಕಾತಚಿ ಕಥಾ ಲೋಕ" ನಾಟಕ ವಿಶಿಷ್ಟವಾಗಲಿಕ್ಕೆ ಹಲವು ಕಾರಣಗಳಿವೆ:

ನಾಟಕದ ಮೂಲವಸ್ತು ಕಾ ತ ಚಿಕ್ಕಣ್ಣನವರ ವಿವಿಧ ಕಥೆಗಳ ಮೂಲ ಸಂಸ್ಕೃತಿಯೆಡೆಗಿನ ಶೋಧ ಮತ್ತು ಬಾಲ್ಯಾನುಭವಗಳ ಸಾರ.

ಕನ್ನಡದ ಗ್ರಾಮೀಣ ಜಗತ್ತು ಇಲ್ಲಿ ವರ್ತಮಾನಕ್ಕೆ ಮುಖಾಮುಖಿಯಾಗುತ್ತದೆ.

Mind Blowing, Awesome ಎಂಬ ಉದ್ಗಾರಗಳ ನಡುವೆ Crisp ಆಗಿದೆ ಕೂಡಾ ಎನ್ನುವ ಐ ಟಿ ವಿಮರ್ಶೆಯೂ ಈ ನಾಟಕಕ್ಕಿದೆ.

ರಂಗ ಪರಿಕರ/set, ಧ್ವನಿ, ಬೆಳಕು, ಸಂಗೀತ ಎಲ್ಲದರಲ್ಲೂ ನಾಟಕ ಶ್ರೀಮಂತವಾಗಿದೆ.


"ಮಲೆಗಳಲ್ಲಿ ಮದುಮಗಳು" ಮತ್ತು "
‘ಕಾತಚಿ ಕಥಾ ಲೋಕ" ವಸ್ತುವಿನ ದೃಷ್ಟಿಯಲ್ಲಿ ಪರಸ್ಪರ ಹತ್ತಿರವೆನಿಸುತ್ತವೆ.     

EVENT PAGE:   http://www.facebook.com/event.php?eid=189915484406577


ಹಳ್ಳಿ ಬದುಕಿನ ಸಾಮಾನ್ಯರ ಕಥೆಗಳು ಇಲ್ಲಿ ಸಹಜ ನಿರೂಪಣೆಯಿಂದಾಗಿ ಪ್ರೇಕ್ಷಕನೊಡನೆ ನೇರ ಸಂವಾದಕ್ಕಿಳಿಯುತ್ತವೆ. ವರ್ತಮಾನದ ಆವೃತ್ತಿಗಳನ್ನು ಪ್ರಶ್ನಿಸುತ್ತವೆ.
ನಾಟಕಗಳು ಕಮರ್ಷಿಯಲ್ ಅಂಶಗಳನ್ನು ಅಳವಡಿಸಿಕೊಳ್ಳಬೇಕು, ಸಿಕ್ಕಾಪಟ್ಟೆ ಪಬ್ಲಿಸಿಟಿ ಇತ್ಯಾದಿ ಮಾಡಬೇಕು- ಹೀಗೆ ಒದ್ದಾಡುವ ಬೆಂಗಳೂರಿನ ನಾಟಕ ಕರ್ತೃಗಳು ಮತ್ತು ಹವ್ಯಾಸಿ/ಅಭ್ಯಾಸೀ ಪ್ರೇಕ್ಷಕರ ನಡುವೆಯೇ "ಕಾತಚಿ ಕಥಾ ಲೋಕ" ಗೆಲ್ಲಬೇಕಿದೆ.

ನಾಟಕ ಇಂದು ಮತ್ತು ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನವಾಗಲಿದೆ. ನಾಟಕ ಕುರಿತ ನಿಮ್ಮ ಅಭಿಪ್ರಾಯಗಳನ್ನು ಸಂವಾದ ಡಾಟ್ ಕಾಂನಲ್ಲಿ ಹಂಚಿಕೊಳ್ಳಿ. ಇ-ಅಂಚೆ: arehalliravi@gmail.com

ನಾಟಕ: ‘ಕಾತಚಿ ಕಥಾ ಲೋಕ'
ಬಸವಲಿಂಗಯ್ಯ, ನಾಟಕ, ಕಾತಚಿ ಕಥಾರಂಗ, ರವೀಂದ್ರ ಕಲಾಕ್ಷೇತ್ರ, basavalingayya, kaatachi kathaaranga, samsa suresh, samvaada.com
ಸ್ಥಳ: ರವೀಂದ್ರ ಕಲಾಕ್ಷೇತ್ರ

ದಿನಾಂಕ : ಆಗಸ್ಟ್ 5 ಮತ್ತು 6

ಸಮಯ: ಸಂಜೆ 7

ನಿರ್ದೇಶನ : ಸಿ ಬಸವಲಿಂಗಯ್ಯ

ನಿರ್ಮಾಣ : ಸಂಸ ಸುರೇಶ್

ಸಂಗೀತ: ಸಿದ್ಧರಾಮ ಕೇಸಾಪುರ, ಶಾಂತ ಕುಲಕರ್ಣಿ, ಮೇಘ ಮಾಲ, ಡಿ ಭರತ್(ತಬಲ)

ರಂಗ ವಿನ್ಯಾಸ: ಸುರೇಶ್ ಕುಮಾರ್

ಬೆಳಕು: ರವಿ ಮೋಹನ

ರಂಗ ನಿರ್ವಹಣೆ: ಸಂಪತ್‍ಕುಮಾರ್ ನಾ

05-08-2011

samvaada.com fan page on facebook


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು