ದೃಶ್ಯಕ್ಕೊಂದು ನುಡಿಗಟ್ಟು

ಗಮನಿಸಿ: ಕೆ ಎಚ್ ಕಲಾಸೌಧದಲ್ಲಿ ಎರಡು ನಾಟಕಗಳ ಪ್ರಯೋಗ 24, 25 ರಂದು

"ನಿಮ್ಮೊಳಗಿನ ನಮ್ಮನು" ಗುರುತಿಸುವ ಗುರಿಯೊಂದಿಗೆ ಈವರೆಗೂ ಅನೇಕ ಪ್ರದರ್ಶನಗಳನ್ನ ನೀಡಿರುವ "ರಂಗ ತಂತ್ರ" ನಾಟಕ ತಂಡವು ಬಾರಿ ಇದೇ ಸೆಪ್ಟೆಂಬರ್  ತಿಂಗಳ ೨೪ ಹಾಗೂ ೨೫ ರಂದು ಹಾಸ್ಯನಾಟಕೋತ್ಸವವನ್ನು ಆಯೋಜಿಸಿದೆ.

  ೨೪ ನೇ ಸೆಪ್ಟೆಂಬರ್:ಎಮ್ ಎಸ್ ನರಸಿಂಹಮೂರ್ತಿ ವಿರಚಿತ "ಲಾಕ್ ಔಟ್ ಅಲ್ಲ ನಾಕ್ ಔಟ್" ನಾಟಕ ಪ್ರದರ್ಶನ.

ನಾಟಕವು, ಒಂದು ಮದ್ಯಮವರ್ಗದ ಕೌಟುಂಬಿಕ ಚಿತ್ರಣವನ್ನು ನೀದುತ್ತದೆ. ಗಂಡ-ಹೆಂಡತಿ ಇಬ್ಬರು ದುಡಿಯುವ ಮನೆಯಲ್ಲಿ,ಗಂಡನ ಫ್ಯಾಕ್ಟರೀ ಲಾಕ್ ಔಟ್ ಆದಾಗ ,ಆತನಿಗಿಂತ ಒಳ್ಳೆಯ ಹುದ್ದೆಯಲ್ಲಿರುವ ಹೆಂಡತಿಯಿಂದ ಹೇಗೆ ಶೋಷಣೆಗೆ ಒಳಗಾಗುತ್ತಾನೆ ಎಂಬುದರ ಚಿತ್ರಣವನ್ನು ಹಾಸ್ಯಾತ್ಮಕ ರೂಪದಲ್ಲಿ ತೋರಿಸಲಾಗಿದೆ.

೨೫ನೇ ಸೆಪ್ಟೆಂಬರ್:'ಪ್ರಹಸನ ಪ್ರಪಿತಾಮಹ' - ಟಿ ಪಿ ಕೈಲಾಸಂ ರವರ ಸುಪ್ರಸಿದ್ದ "ಬಂಡ್ವಾಳ್ವಿಲ್ಲದ ಬಡಾಯಿ" ನಾಟಕ ಪ್ರದರ್ಶನ.

ನಾಟಕವು, ಒಬ್ಬ ವಕೀಲನ ನಿತ್ಯ ಜೀವನದ ಆಗುಹೋಗುಗಳು, ಆತನ ತಂತ್ರಗಳಿಗೆ ಬಲಿಯಾಗುವ ಆತನ ಜೂನಿಯರ್ ಹಾಗೂ ಕಕ್ಷಿಗಾರರುಗಳು, ಸ್ನೇಹಿತರೆದುರು ಕೊಚ್ಚಿಕೊಳ್ಳುವ ಬಡಾಯಿಗಳನ್ನ ಹಾಸ್ಯಾತ್ಮಕವಾಗಿ ಪ್ರಸ್ತುತ ಪಡಿಸಲಿದೆ.

 ಸ್ಥಳ: ಕೆ ಹೆಚ್ ಕಲಾಸೌಧ, ರಾಮಾಂಜನೇಯ ದೇವಸ್ಥಾನದ ಆವರಣ, ಹನುಮಂತ ನಗರ, ಬೆಂಗಳೂರು - ೫೬೦೦೧೯.

 ಸಮಯ: ಸಂಜೆ 7:3೦.

 ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಸಂಗಮೇಶ್ (9449795282)

Online ticket booking:  @ http://www.indianstage.in


16-09-2001

samvaada.com fan page on facebook


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು