ಪರಿಶುದ್ಧ ಪರಮಾತ್ಮ
ಪರಮಾತ್ಮ ಚಿತ್ರ ಮಾತನಾಡುವುದು ನಮ್ಮೊಳಗಿನ ಒಳ್ಳೆಯತನದ ಬಗ್ಗೆ, ಪರಿಶುದ್ಧ ಆತ್ಮದ ಬಗ್ಗೆ. ಎಮ್.ಎಸ್ ಸಿ ಯಲ್ಲಿ ಫೇಲಾಗುತ್ತ, ಹಿಮಾಲಯ ಹತ್ತಿ, ಕುಂಗ್ ಫು ಕಲಿತು, ಶೇರು ಮಾರುಕಟ್ಟೆಯಲ್ಲಿ ಹಣ ಮಾಡಿ ಬರುವ ನಾಯಕ ಕೊನೆಗೆ ಟಿಬೆಟಿನಲ್ಲಿ ಬದುಕಿನಲ್ಲಿ ಯಾವುದಕ್ಕೂ ಅರ್ಥ ಇಲ್ಲ ಎಂಬುದನ್ನ ಕೇಳಿಸಿಕೊಳ್ಳುತ್ತಾನೆ. ಹೀಗೆ ಅರ್ಥವಿಲ್ಲದ ಬದುಕಿನಲ್ಲಿ ನಾಯಕನಿಗೆ , ಸಿನೆಮಾ ಟಾಕೀಸಿನಲ್ಲಿ ಸಿಗುವ ನಾಯಕಿ, ಮುಂದೆ ಆಕೆಯ ಬೆನ್ನು ಹತ್ತಿ ಆಕೆಯ ಊರಿನವರೆಗೂ ಹೋಗುವ ನಾಯಕ ಅವಳನ್ನ ಪಡೆಯುತ್ತಾನೆ. ಭಟ್ಟರ ಮತ್ತು ಪುನೀತ್ ರ ಇಮೇಜ್ ಅನ್ನು ಮನಸಿನಲ್ಲಿಟ್ಟುಕೊಂಡು ನೀವೆನಾದರೂ ಚಿತ್ರ ನೋಡಿದಲ್ಲಿ ನಿರಾಸೆ ಖಂಡಿತ. ಯಾವುದೇ ಏರಿಳಿತಗಳಿಲ್ಲದೆ, ಭಾವನಾತ್ಮಕ ಸನ್ನಿವೇಶಗಳ ಆರ್ಭಟಗಳಿಲ್ಲದೆ, ಚಿತ್ರ, ತಣ್ಣಗೆ ಹರಿಯುವ ನದಿಯ ದಡದಲ್ಲಿ ಕುಳಿತು ಆಪ್ತ ಸ್ನೇಹಿತನೊಬ್ಬನ ನೆನಪುಗಳನ್ನ ಕೆದಕಿ ಕೇಳಿದಂತಿದೆ; ಆತ್ಮೀಯವಾಗಿದೆ. ತನ್ನ ಹಿಂದಿನ ಚಿತ್ರಗಳಲ್ಲಿ ಲೈಫು ಇಷ್ಟೇನೆ ಎಂದು ಸಿನಿಕರಾಗಿದ್ದ ಯೋಗರಾಜ್ ಭಟ್ಟ ಇಲ್ಲಿ ಮಾಗಿದ್ದಾರೆ. ಸ್ನೇಹ, ಪ್ರೇಮ, ಕಾಮಗಳ ನಡುವಿನ ಅರ್ಥ ಹುಡುಕುವ ಕುಸುರಿ ಕೆಲಸ ಮಾಡಿದ್ದಾರೆ, ಮತ್ತು ಬದುಕು ಇದೆಲ್ಲದನ್ನು ಮೀರಿದ್ದು ಎನ್ನುವುದರ ಜೊತೆಗೆ ಒಳ್ಳೆಯವರಾಗಿ ಬದುಕಬೇಕು ಎಂಬ ಗುಪ್ತ ಸಂದೇಶವೂ ಚಿತ್ರದೊಳಗಿದೆ. ಒಳ್ಳೆಯತನ ಎಂದಾಕ್ಷಣ ನಮ್ಮ ಸಿನೆಮಾಗಳಲ್ಲಿ ಬರುವ ದಾನಶೂರ ಕರ್ಣರೋ, ಪ್ರಜಾಪರಿಪಾಲಕರೋ, ದುಷ್ಟರನ್ನ ಸದೆ ಬಡೆಯುವ ದೈವಾಂಶ ಸಂಭೂತರೋ ಅಲ್ಲ. ಈ ಪರಮಾತ್ಮ ನಮ್ಮಷ್ಟಕ್ಕೆ ನಾವು ಒಳ್ಳೆಯವರಾಗಿರಬೇಕಾದ ಅಗತ್ಯದ ಕುರಿತು ಮಾತನಾಡುತ್ತದೆ. ಸಮಕಾಲೀನ ಚಿತ್ರಗಳಲ್ಲಿ ಬರುತ್ತಿರುವ ಎಲ್ಲಾ ರೀತಿಯ "ಅತಿ" ಗಳಿಗೂ, ಗ್ಲೋಬಲಿಕರಣದ ಸಂದರ್ಭದಲ್ಲಿ ಅರ್ಥ ಕಳೆದುಕೊಳ್ಳುತ್ತಿರುವ ಸಂಬಂಧಗಳ ಈ ಚಿತ್ರ ಪ್ರತಿಕ್ರಿಯೆಯಂತಿದೆ. ಸೂರಿ ಮತ್ತು ಭಟ್ಟರ ಚಿತ್ರಕಥೆಯಲ್ಲಿ ಇನ್ನೂ ಸ್ವಲ್ಪ ಬಿಗಿ ಬೇಕಿತ್ತು. ಸಾಕಷ್ಟು ದೃಶ್ಯಗಳನ್ನ ಎಡಿಟ್ ಮಾಡಿದ್ದರೆ ಚಿತ್ರ ಇನ್ನಷ್ಟು ಗಟ್ಟಿಯಾಗುತ್ತಿತ್ತು. ಸಂತೋಷ ರೈ ಪಾತಾಜೆ ಅವರ ಕ್ಯಾಮೆರಾ ಇಡೀ ಚಿತ್ರದ ಹೈಲೈಟ್. ಎಲ್ಲರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಪರಮಾತ್ಮ ಭಟ್ಟರ ಕೈ ಹಿಡಿಯುತ್ತಾನೋ? ಕೈ ಕೊಡುತ್ತಾನೋ?--- ಯಾವನಿಗ್ ಗೊತ್ತು? 06-10-2001
ಇಲ್ಲಿವರೆಗಿನ ಅಭಿಪ್ರಾಯಗಳುgeetha
2011-10-26 07:40:48 chitra haridwaradalli shantavagi hariyuva gangeyantide. Namma atma prama atmavagirali.Naavu hodaga talkies nalli tumba janariralilla. Bahusha hodi badi kadi sandeshagalu, chamakchallo yennisuva kunitagalu, double meaning dailogue yilladiruvude karanavirabeku. Yellaru omme nodabekada chitra yendu nanna anisike. Navu oohisidante climax illa. Modalidda lavalavike kone konege yilla adu bittre chitra chennagide. |
|
2011-10-08 02:33:15
nemmadiya baduku kanabekidare illi yavudu mukyavalla, ellavu nepa matra ashte jeevandlli ellavu avashyakte ashte. sambanda sneha prema preethi ivillavu jeevanadalli nireeksheglnna mudisidre baduku knditha artha kledukolluvalli samshayve illa. - hosadnna needuva bhattara i tuditve "paramatma" gellallu bunadiyagaballadu allave geleyare...............................