ದೃಶ್ಯಕ್ಕೊಂದು ನುಡಿಗಟ್ಟು

ರಾ.ಒನ್: ಡಿಜಿಟಲ್ ರಾಮನಾಗಿ ಶಾರುಖ್

ಡಿಜಿಟಲ್ ರಾಮನ ಅವತಾರದಲ್ಲಿ ಶಾರುಖ್ ಕಾಣಿಸಿಕೊಳ್ಳುತ್ತಿರುವ ಚಿತ್ರ ರಾ.ಒನ್ ಈ ವಾರ ತೆರೆಕಾಣಲಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದುಬಾರಿ ಚಿತ್ರ ವೆಂಬ ಹಣೆಪಟ್ಟಿ ಹೊತ್ತಿರುವ ಈ ಚಿತ್ರದ ಬಜೆಟ್ ೧೫೦ ಕೋಟಿಯಂತೆ. ವಿದೇಶಿ ಮಾರುಕಟ್ಟೆಯಲ್ಲಿ ಮೋಸ್ಟ್ ಸೇಲೆಬಲ್ ಬ್ರಾಂಡ್ ಆಗಿರುವ ಶಾರುಖ್ ನ ಮೇಲೆ ಹೂಡಿರುವ ಹಣ ಲಾಭವಾಗಿ ಪರಿವರ್ತಿತವಾಗಿರುವುದರಲ್ಲಿ ಸಂದೇಹವಿಲ್ಲ.

ನಮ್ಮ ಕಲ್ಪನೆಗಳನ್ನೂ ಮೀರಿ ಬೆಳೆಯುತ್ತಿರುವ ತಂತ್ರಜ್ಞಾನದ ಆರ್ಭಟದ ದಿನಗಳಲ್ಲಿ , ರಾ.ಒನ್ ಎಂಬ ಚಿತ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ತಂತ್ರಜ್ಞಾನವನ್ನೇ ರಾವಣನಿಗೆ ಹೋಲಿಸಿ, ಜೀವನದ ರೂಪಕವಾಗಿ ಶಾರೂಕ್ ಯಾವ ಬಗೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ರಾಮ-ರಾವಣರ ಸಮರ ಇಂದಿನ ಬದಲಾದ ಕಾಲಮಾನಕ್ಕೆ ಹೇಗೆ ಪ್ರಸ್ತುತಗೊಳಿಸಲಾಗಿದೆ ಎಂಬುದು ಇನ್ನೂ ಹೆಚ್ಚಿನ ಕೌತುಕವನ್ನ ಹುಟ್ಟಿಸಿದೆ.

ಭಾರಿ ವೆಚ್ಚದ ಈ ಚಿತ್ರದ ಕಥೆ-ನಿರ್ದೇಶನ ಅನುಭವ ಸಿನ್ಹಾರದ್ದು. ತುಮ್ ಬಿನ್ ಎಂಬ ಸಂಗೀತಮಯ ಬ್ಲಾಕ್ ಬಸ್ಟರ್ ನೀಡಿದ ಅನುಭವ್ ಸಿನ್ಹಾ ನಂತರದ ಚಿತ್ರಗಳಲ್ಲಿ ದಸ್, ತಥಾಸ್ತು, ಕ್ಯಾಶ್ ಪ್ರಮುಖವಾದವು.

ತನ್ನ ಕಿಂಗ್ ಖಾನ್ ಇಮೇಜ್ ಅನ್ನು ಉಳಿಸಿಕೊಳ್ಳುವ ತುರ್ತಿನಲ್ಲಿರುವ ಶಾರುಖ್ ಗೆ ಈ ಚಿತ್ರ ಮಹತ್ವದ್ದಾಗಿದೆ. ಇನ್ನುಳಿದಂತೆ ಅರ್ಜುನ್ ರಾಮಪಾಲ್ ರಾ.ಒನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರೀನಾಗೆ ಶಾರುಖ್ ನ ಮಡದಿಯ ಪಾತ್ರ. ಅಮಿತಾಭ್ ಧ್ವನಿಯನ್ನ ಹಿನ್ನೆಲೆಯಲ್ಲಿ ಬಳಸಿಕೊಳ್ಳಲಾಗಿದ್ದು. ರಜನೀಕಾಂತ್, ಪ್ರಿಯಾಂಕಾ ಚೊಪ್ರಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇಟಾಲಿಯನ್ ಮೂಲದ ಸಿನೆಮಾಟೊಗ್ರೋಫರ್ ನಿಕೊಲಾ ಪೆಕೊರಿನಿ ಈ ಚಿತ್ರವನ್ನ ಸೆರೆಹಿಡಿದಿದ್ದರೆ, ಸಂಗೀತ ವಿಶಾಲ್-ಶೇಖರ್ ಅವರದ್ದು.

23-10-11


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು