ದೃಶ್ಯಕ್ಕೊಂದು ನುಡಿಗಟ್ಟು

ಸೋಲಿನ ಸುಳಿಯಲ್ಲಿ ದುಬಾರಿ ಚಿತ್ರಗಳು

ಈ ದೀಪಾವಳಿಯಂದು ತೆರೆ ಕಂಡಿರುವ ಮೂರು ಸೂಪರ್ ಸ್ಟಾರ್ ಗಳ ಬಿಗ್ ಬಜೆಟ್ ಸಿನೆಮಾಗಳು ಪ್ರೇಕ್ಷಕರ ಅವಕೃಪೆಗೆ ಒಳಗಾಗಿವೆ.

ಶಾರೂಖ್ ಅಭಿನಯದ ರಾ.ಒನ್, ವಿಜಯ್ ಅಭಿನಯದ ವೇಲಾಯುಧಂ, ಸೂರ್ಯ ಅಭಿನಯದ ೭ ಆಮ್ ಅರಿವು ಮೂರು ಚಿತ್ರಗಳೂ ಭಾರಿ ಭರವಸೆಯೊಂದಿಗೆ ದೀಪಾವಳಿಯ ದಿನ ಬಿಡುಗಡೆಯಾಗಿದ್ದವು. ಮೂರೂ ಚಿತ್ರಗಳು ಪ್ರೇಕ್ಶಕರ ನಿರೀಕ್ಷೆಯನ್ನ ಮುಟ್ಟುವಲ್ಲಿ ವಿಫಲವಾಗಿದ್ದು ಬಾಕ್ಸಾಪಿಸಿನಲ್ಲಿ ಸೋಲಿನ ಸುಳಿಗೆ ಸಿಲುಕಿವೆ.

ವಿಜಯ್ ಅಭಿನಯದ ವೇಲಾಯುದಂನ ದಿಗ್ದರ್ಶನ ಜಯಂ ರಾಜಾ ಅವರದ್ದು. ಆಜ಼ಾದ್ ಚಿತ್ರದ ರೀಮೇಕ್ ಎಂದು ಹೇಳುತ್ತಿರುವ ಈ ಚಿತ್ರದಲ್ಲಿ ವಿಶೇಷವೇನೂ ಇದ್ದಂತಿಲ್ಲ. ಇತರ ತಾರಾಗಣದಲ್ಲಿ ಜೆನಿಲಿಯಾ, ಹಂಸಿಕಾ ಮೋತ್ವಾನಿ ಶರಣ್ಯ ಮೋಹನ್ ಇದ್ದಾರೆ. ಸಂಗೀತ ವಿಜಯ್ ಆಂಟೋನಿಯದ್ದಾದರೆ, ಕ್ಯಾಮೆರಾ ಹಿಡಿದವರು ಪ್ರಿಯನ್

ಸೂರ್ಯಾ ದ್ವೀಪಾತ್ರದಲ್ಲಿ ಅಭಿನಯಿಸಿರುವ ಸೆವೆನ್ ಆಮ್ ಅರಿವು ಚಿತ್ರ ಕೂಡ ಹೇಳಿಕೊಳ್ಳುವಂತಿಲ್ಲ ಎಂಬ ವರದಿ ಬಂದಿದೆ. ಮುರುಗದಾಸ್ ನಿರ್ದೇಶನ್, ಹ್ಯಾರಿಸ್ ಜಯರಾಜ್ ಸಂಗೀತವಿದ್ದೂ ಚಿತ್ರ ನಿರೀಕ್ಷೆಯ ಮಟ್ಟ ತಲುಪಿದಂತಿಲ್ಲ. ಕಥಾ ಹಂದರ ವಿಶಿಷ್ಟವಾಗಿದ್ದೂ ಚಿತ್ರಕಥೆ ಬಿಗುವಾಗಿಲ್ಲ.

ಬಹು ವೆಚ್ಚದ ಶಾರೂಖ್ ಖಾನ್ ನಿರ್ಮಾಣದ ರಾ.ಒನ್, ಶಾರೂಖ್ ಖಾನ್ ಗೆ ಹೊಸ ಇಮೇಜ್ ಕೊಡುವಲ್ಲಿ ಸೋತಿದೆ. ಒಂದೆಡೆ ಸಲ್ಮಾನ್ ಅಮೀರ್ ರ ಪ್ರಯತ್ನಗಳು ಪ್ರೇಕ್ಷಕರಿಂದ ಪ್ರಶಂಸೆ ಪಡೆಯುತ್ತಿದ್ದರೆ , ಶಾರೂಖ್ ನ ಚಿತ್ರಗಳು ವೈಫಲ್ಯದ ಹಾದಿ ಹಿಡಿದಿವೆ.

ಒಟ್ಟಿನಲ್ಲಿ ಈ ದೀಪಾವಳಿಯ ಮೂರೂ ಪಠಾಕಿಗಳು ಟುಸ್ ಅನ್ನುವ ಲಕ್ಷಣಗಳು ಹೆಚ್ಚಿದೆ.

೨೬-೧೦-೧೧


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು