ದೃಶ್ಯಕ್ಕೊಂದು ನುಡಿಗಟ್ಟು

Sculpted Memories 2012 - ಪತ್ರಿಕಾ ಛಾಯಾಚಿತ್ರ ಪ್ರದರ್ಶನ

Sculpting Memories Photo exhibition Chitrakala Parishat, Photojournalists of various newspapers, agencies and magazines in Bangalore, s sureshkumar, Roshan baig, pooja gandhiಪತ್ರಿಕೆಗಳಲ್ಲಿ ಪ್ರಕಟವಾಗುವ ಒಂದು ಚಿತ್ರ ಹಲವಾರು ಸಂಗತಿಗಳನ್ನು ನಮ್ಮ ಮುಂದಿಡುವುದರ ಜೊತೆಗೆ ಬಹುಕಾಲ ಕಾಡಬಲ್ಲುದು. ತಾವು ಕೆಲಸ ಮಾಡುವ ಪತ್ರಿಕೆಯ ನೀತಿ ನಿಯಮಗಳಿಗೆ ಒಳಪಟ್ಟು ಹಲವಾರು ಮಿತಿಗಳಲ್ಲಿ ಕೆಲಸ ಮಾಡುವ ಫೋಟೋ ಜರ್ನಲಿಸ್ಟ್‌ಗಳ ಫೋಟೋಗಳು ಸವಾಲಿನ ನಡುವೆ ಮೂಡುವ ಕಲಾಕೃತಿಗಳು. ಒತ್ತಡದ ನಡುವೆ ಅರಳುವ ಸೃಜನಶೀಲತೆಯನ್ನು ಗುರುತಿಸುವ ಕೆಲಸವನ್ನು ಫೋಟೋ ಜರ್ನಲಿಸ್ಟ್‌ಗಳ ಸಂಘ ಮಾಡುತ್ತಿದೆ.

ವಿವಿಧ ಪತ್ರಿಕೆಗಳು, ನಿಯತಕಾಲಿಕಗಳು ಮತ್ತು ನ್ಯೂಸ್ ಏಜೆನ್ಸಿಗಳಿಗಾಗಿ ಕೆಲಸ ನಿರ್ವಹಿಸುತ್ತಿರುವ ಫೋಟೋ ಜರ್ನಲಿಸ್ಟ್‌ಗಳ ಚಿತ್ರಗಳ ವೀಕ್ಷಣೆಗೆ ಈ ತಿಂಗಳ ೫ರಿಂದ ೭ರವರೆಗೆ Sculpted Memories 2012 ಎಂಬ ಶೀರ್ಷಿಕೆಯ ಫೋಟೋ ಪ್ರದರ್ಶನವೊಂದನ್ನು ಏರ್ಪಡಿಸಲಾಗಿದೆ.

ರಾಜಕೀಯ, ಕ್ರೀಡೆ, ಜನಜೀವನ ಇತ್ಯಾದಿ ವಿಭಾಗಗಳ ತೊಂಭತ್ತು ಛಾಯಾಚಿತ್ರಗ್ರಾಹಕರು ತಮ್ಮ ಚಿತ್ರಗಳನ್ನು ಪ್ರದರ್ಶಿಸಲಿದ್ದಾರೆ. ಇದರ ಜೊತೆಗೆ ಹಿರಿಯ ದಶಕಗಳಿಂದ ಪತ್ರಿಕಾ ಛಾಯಾ ಚಿತ್ರಣ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಛಾಯಾಚಿತ್ರಗ್ರಾಹಕರ ಗತ ನೆನಪುಗಳ monochrome ಚಿತ್ರಗಳ ಪ್ರದರ್ಶನವೂ ಇರುತ್ತದೆ.

ಸ್ಥಳ: ಚಿತ್ರಕಲಾ ಪರಿಷತ್
ದಿನಾಂಕ: ಜನವರಿ ೫ರಿಂದ ೭ರವರೆಗೆ.
ಸಮಯ: ಬೆಳಿಗ್ಗೆ ೧೦ರಿಂದ ಸಂಜೆ ೬ರವರೆಗೆ
ಉದ್ಘಾಟಕರು: ಶ್ರೀಯುತ ಎಸ್ ಸುರೇಶ್‍ಕುಮಾರ್‌ರವರು , ಕಾನೂನು ಸಚಿವರು
ಅತಿಥಿಗಳು: ಶಾಸಕ ರೋಶನ್ ಬೇಗ್ ಮತ್ತು ನಟಿ ಪೂಜಾ ಗಾಂಧಿ

ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

05-01-2012

samvaada.com fan page on facebook


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು