ದೃಶ್ಯಕ್ಕೊಂದು ನುಡಿಗಟ್ಟು

ರಾಮು ಅವರ ಛಾಯಾ-ಚಿತ್ತಾರ

ಪ್ರತಿಷ್ಟಿತ ಪತ್ರಿಕೆಯೊಂದರಲ್ಲಿ ಪುಟ ಸಂಯೋಜನೆ ಮಾಡುತ್ತಲೇ ಕನಸುಗಣ್ಣಿನ ಈ ಯುವಕ ಛಾಯಾಚಿತ್ರ  ಜಗತ್ತಿನ ಮೇರುಗಿರಿಗಳನ್ನ ಮುಟ್ಟುವ ಕನಸುಗಳನ್ನು ಕಟ್ಟಲಾರಂಭಿಸಿದ. ದಿನ ಕಳೆದಂತೆ ಆ ಕನಸುಗಳು ಬರಿ ಹಗಲುಗನಸುಗಳಾಗಿ ಉಳಿಯಲಿಲ್ಲ. ಯಶಸ್ಸಿನ ಮೆಟ್ಟಿಲುಗಳು ಆತನ ಪಾಲಿಗೆ ಒಂದೊಂದಾಗಿ ತೆರೆದುಕೊಳ್ಳಲಾರಂಭಿಸಿದವು. ಒಂದೊಂದೇ ಪ್ರಶಸ್ತಿಗಳು ಆತನ ಕಪಾಟನ್ನು ಭರ್ತಿ ಮಾಡತೊಡಗಿದವು,  ಹಾಗೇ ಆತನಲ್ಲಿ ಮತ್ತಷ್ಟು ಕನಸುಗಳನ್ನೂ, ಇನ್ನಷ್ಟು ಹುಮ್ಮಸ್ಸನ್ನೂ ಬಿತ್ತಿದವು. ಕಳೆದ ೨೦೧೧ ನೇ ವರ್ಷವಂತೂ ಸುಗ್ಗಿಯೋ ಸುಗ್ಗಿ. ಎರಡೆರಡು ಅಂತರ್ರಾಷ್ಟ್ರೀಯ ಮಾನ್ಯತೆಗಳು ಒಂದೇ ವರುಷದಲ್ಲಿ ಮುಡಿಗೇರಿದ ಸಂಭ್ರಮ.
  ಎಂ. ರಾಮು     ನಮ್ಮ ನಡುವಿನ, ಅತಿ ಕಿರಿಯ ವಯಸ್ಸಿನಲ್ಲೇ ವನ್ಯಜೀವಿ ಛಾಯಾಗ್ರಾಹಣದಲ್ಲಿ ಹಿರಿದಾದುದನ್ನ ಸಾಧಿಸುತ್ತಿರುವ ಸಾಧಕ.
ಮುಂದಿನ ಪೀಳಿಗೆಗೆ ಒಂದಿಷ್ಟು ನಿಸರ್ಗದ ಕೌತುಕಗಳನ್ನು ಪರಿಚಯಿಸುವ ಹಂಬಲ ಹೊತ್ತು ಈ ಕ್ಷೇತ್ರದಲ್ಲಿ ತನ್ನೆಲ್ಲಾ ಬಿಡುವಿನ ವೇಳೆಯನ್ನು ಮುಡುಪಿಟ್ಟಿದ್ದಾರೆ. ೨೦೦೫ ರಲ್ಲಿ ಕುತೂಹದಿಂದ ಛಾಯಾಚಿತ್ರಗಳನ್ನು ಗಮನಿಸಲಿಕ್ಕೆ ಶುರುಮಾಡಿದ ಇವರು ಇಂದು ತಮ್ಮ ಕೈಚಳಕದಿಂದ ಅತ್ಯಾಕರ್ಷಕ ಚಿತ್ರಗಳನ್ನು ಮೂಡಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೂವರೆಗೂ ಅವರ ೩೫೦ ಕ್ಕೂ ಹೆಚ್ಚು ವನ್ಯಜೀವಿ ಛಾಯಚಿತ್ರಗಳು ಯು.ಕೆ., ಜರ್ಮನಿ, ಕೆನಡಾ, ಫ್ರಾನ್ಸ್, ಫಿನ್ಲ್ಂಡ್ ಮುಂತಾದ ದೇಶ-ವಿದೇಶಗಳಲ್ಲಿ ಪ್ರದರ್ಶನಗೊಂಡು ವಿವಿಧ ಪ್ರಶಸ್ತಿ ಮನ್ನಣೆಗಳನ್ನು ಪಡೆದಿವೆ.

ಪ್ರತಿಯೊಬ್ಬ ಹವ್ಯಾಸಿ ಛಯಾಗ್ರಾಹಕನ ಕನಸು ಇಂಗ್ಲೇಂಡಿನ ರಾಯಲ್ ಫೋಟೊಗ್ರಫಿಕ್ ಸೊಸೈಟಿ (RPS) ಮತ್ತು ಪ್ಯಾರಿಸ್ಸಿನ ಫೆಡೆರೇಷನ್ ಇಂಟರ್‌ನಾಷನಲ್ ಡಿ’ ಆರ್ಟ್ ಫೋಟೊಗ್ರಫಿ(FIAP) ಯ ಮನ್ನಣೆ ಗಳಿಸಿಕೊಳ್ಳುವುದು. ಈ ಎರಡೂ ಸಂಸ್ಥೆಗಳ ಅಸೋಸಿಯೇಟ್‌ಶಿಪ್ ಮನ್ನಣೆಗಳನ್ನು ಒಂದೇ ವರ್ಷದಲ್ಲೇ ಪಡೆದದ್ದು ರಾಮು ಅವರ ಹೆಗ್ಗಳಿಕೆ.

೨೦೧೦ರಲ್ಲಿ ಯೂತ್ ಫೋಟೊಗ್ರಫಿಕ್ ಸೊಸೈಟಿಯ ಆಸ್ಕರಿ ಅವಾರ್ಡ್ ಮತ್ತು ಕಲ್ಕತ್ತದ ಫೆಡೆರೇಷನ್ ಇಂಡಿಯನ್ ಫೋಟೊಗ್ರಫಿ ಯ ಸದಸ್ಯತ್ವ ಇವರ ಸಾಧನೆಗೆ ಸಂದ ಗೌರವಗಳು.

ಇವರಿಗೆ ದೊರೆತ ಇತರೆ ಮನ್ನಣೆಗಳೆಂದರೆ,

೨೦೦೯ರಲ್ಲಿ ಕರ್ನಾಟಕ ಫೋಟೊಗ್ರಫಿಕ್ ಅಸೋಸಿಯೇಷನ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ೨ನೇ ಬಹುಮಾನ.
ಕೇರಳದಲ್ಲಿ ನೆಡೆದ ಆಲ್ ಇಂಡಿಯಾ ನೇಚರ್ ಫೊಟೊಗ್ರಫಿ ಸ್ಪರ್ಧೆಯಲ್ಲಿ ೩ನೇ ಬಹುಮಾನ.
೨೦೧೦ ರಲ್ಲಿ ಸಾಗರ ಫೋಟೊಗ್ರಫಿಕ್ ಕ್ಲಬ್ಬಿನ ರಾಜ್ಯಮಟ್ಟದ ಬಹುಮಾನ.
ಕಲ್ಕತ್ತದಲ್ಲಿ ನೆಡೆದ PAB Indian Digital salon 2010ನಲ್ಲಿ ಬಹುಮಾನ
Best Bird Southampton International photography, International Level in UK  SCC certifi cate.ಮಧ್ಯಪ್ರದೇಶದ ಅಂತರ್ರಾಷ್ಟ್ರೀಯ ಮಟ್ಟದ Photo lovers 2010, ನಲ್ಲಿ ಚಿನ್ನದ ಪದಕ.
4th International Salon – CELJE 2010, Slovenia PSA  ನಲ್ಲಿ ಖಂಚಿನ ಪದಕ.
ಅಂತರ್ರಾಷ್ಟ್ರೀಯ ಮಟ್ಟದ Grand Digital Circuit 2011, FIAP HM INDIA Print Circuit ನಲ್ಲಿ ಅರ್ಹತಾ ಪತ್ರ, ಮುಂತಾದವು

ವನ್ಯಜೀವಿ ಮತ್ತು ನಿಸರ್ಗದ ಚೆಲುವನ್ನೆಲ್ಲಾ ತಮ್ಮ ಕ್ಯಾಮೆರಾದಲ್ಲಿ ತುಂಬಿ ಕಾವ್ಯಾತ್ಮಕ ಛಾಯಾಚಿತ್ರ ರಚಿಸುವುದು ಅವರ ಕುಶಲತೆಗೆ ಹಿಡಿದ ಕನ್ನಡಿ.

ಅವರ ಬತ್ತಳಿಕೆಯಲ್ಲಿರು ಈ ಚೆಲುವಾದ ಚಿತ್ರಗಳ ಪ್ರದರ್ಶನ ಚಿತ್ರಕಲಾ ಪರಿಷತ್ತಿನಲ್ಲಿ ಇದೇ ಜನವರಿ ೧೫ರಿಂದ ೧೯ರ ವರೆಗೆ ನೆಡೆಯಲಿದೆ. ಪ್ರಕೃತಿ ಪ್ರೇಮಿಗಳಿಗೆ, ನಿಸರ್ಗವನ್ನು ಆರಾಧಿಸುವ ಆಸಕ್ತರಿಗೆ, ಶಾಲಾ ಮಕ್ಕಳಿಗೆ, ಈ ಐದೂ ದಿನ ಮನತಣಿಸುವ ಚಿತ್ರಗಳ ನೋಡುವ ಹಾಗೂ ರಾಮು ಅವರೊಂದಿಗೆ ಅವರ ವಿಚಾರಧಾರೆಗಳಿಗೆ ಸ್ಪಂದಿಸುವ ಅವಕಾಶ. 

ಹಿರಿಯ ಛಾಯಾಚಿತ್ರಗ್ರಹಕ ಶ್ರೀ ಬಿ. ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಮುನ್ನೆಡೆಯುತ್ತಿರುವ ಶ್ರೀ ರಾಮು ಅವರಿಗೆ ಇನ್ನಷ್ಟು ಸಾಧಿಸುವ ಅವಕಾಶಗಳು ಒದಗಿ ಬರುತ್ತಿರಲಿ ಎನ್ನುವುದೇ ಸಂವಾದ ತಂಡದ  ಆಶಯ.

 ಚಿತ್ರ ಪ್ರದರ್ಶನದ ವಿವರಗಳು:

ಸ್ಥಳ : ಚಿತ್ರಕಲಾ ಪರಿಷತ್ತು,
ದಿನಾಂಕ : ೧೫-೧೯ ಜನವರಿ ೨೦೧೨.
ಪ್ರವೇಶ : ಉಚಿತ.   

 

ರಾಮು ಅವರ ಜಾಲತಾಣ ವಿಳಾಸ : https://www.facebook.com/Wild.Frames
ಸಂಪರ್ಕ : 9480427376

ಮಿಂಚೆ : ramu.m2006@gmail.com

 

07-01-2012

samvaada.com fan page on facebook




ಇಲ್ಲಿವರೆಗಿನ ಅಭಿಪ್ರಾಯಗಳು

ಶ್ಯಾಮ್ ಪ್ರಕಾಶ್.
2012-01-09 01:56:33

ಅಭಿನಂದನೆಗಳು ನಿಮಗೆ ರಾಮುರವರೆ, ಛಾಯಾಚಿತ್ರ ಪ್ರದರ್ಶನ ಯಶಸ್ವಿಯಾಗಲಿ, ಇನ್ನು ಹೆಚ್ಚಿನ ಪ್ರದರ್ಶನ ಕಾಣುವಂತ್ತಾಗಲಿ ನಿಮಗೆ ಶುಭವಾಗಲಿ. . . ಶ್ಯಾಮ್ ಪ್ರಕಾಶ್.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು