ಮಂಗಳೂರು ಬಳಿಯ ಪುನರೂರಿನಲ್ಲಿ ನವಿಲಾದವರು ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಸಂವಾದ ಮಿತ್ರ ಅನಿರುದ್ಧ ಇನ್ನಂಜೆ ನಿರ್ಮಿಸುತ್ತಿರುವ ಮಕ್ಕಳ ಹಕ್ಕುಗಳ ಕುರಿತಾದ ಕಿರುಚಿತ್ರ ‘ಸಂಚಲನ’ದ ಮುಹೂರ್ತವೂ ನಡೆಯಲಿದೆ. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಚಿತ್ರಪ್ರದರ್ಶನದ ನಂತರ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ನವಿಲಾ
ದವರು(ಸದ್ಯ ‘ಅದ್ವೈತ’ ಚಿತ್ರ ನಿರ್ದೇಶಿಸುತ್ತಿದ್ದಾರೆ) ಚಿತ್ರದ ನಿರ್ದೇಶಕ ಗಿರಿರಾಜ್ ಬಿ ಎಂ ಭಾಗವಹಿಸಲಿದ್ದಾರೆ. ನವಿಲಾದವರು ಚಿತ್ರ ಕನಿಷ್ಟ ಎನ್ನಬಹುದಾದ ಮೂವತ್ತೈದು ಸಾವಿರ ರೂಪಾಯಿಗಳಲ್ಲಿ ನಿರ್ಮಾಣಗೊಂಡು ಕನ್ನಡ ಚಿತ್ರರಂಗ ಮತ್ತು ಚಿತ್ರ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಸಂವಾದ ಡಾಟ್ ಕಾಂ ನವಿಲಾದವರು ಚಿತ್ರದ ಹಲವು ಪ್ರದರ್ಶನ, ಸಂವಾದ ಮತ್ತು ವಿಚಾರಸಂಕಿರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.
ಕಾರ್ಯಕ್ರಮ ಅನನ್ಯ ಎಜುಕೇಶನಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿದೆ.
ಸ್ಥಳ: ಪುನರೂರು ವಿಶ್ವನಾಥ ದೇವಸ್ಥಾನದ ಸಭಾಂಗಣ
ದಿನಾಂಕ: ೧೦-೦೧-೨೦೧೨
ಸಮಯ: ಬೆಳಿಗ್ಗೆ ೯-೩೦ರಿಂದ
ಚಿತ್ರ ಪ್ರದರ್ಶನದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಸಂಪರ್ಕಿಸಿ : 99804 32111
08-01-2012
