ದೃಶ್ಯಕ್ಕೊಂದು ನುಡಿಗಟ್ಟು

`ನೆನಪಿಗೆ ಮೀರಿದ್ದು..' - ರಾಜು ಅನಂತಸ್ವಾಮಿಯವರ ನೆನಪಿನ ಸುಗಮ ಸಂಗೀತ

ರಾಜು ಅನಂತಸ್ವಾಮಿ, ಹಾಡು, ಹಾಡು, ಕಲೆ ತಂಡ, ನೆನಪಿಗೆ ಮೀರಿದ್ದು, raju anantaswami, mysore anantaswami, kannada music,samvaada.comಕರ್ನಾಟಕ ಕಂಡ ಒಳ್ಳೆಯ ಗಾಯಕ, ಸಂಗೀತ ಸಂಯೋಜಕ, ನಟ ಹೀಗೆ ಬಹುಮುಖ ಪ್ರತಿಭೆಯಾಗಿದ್ದ ‘ರಾಜು ಅನಂತಸ್ವಾಮಿ’ ಕೇವಲ ಹೆಸರಲ್ಲ, ಒಂದು ಅನುಭವ; ನೆನಪಿಗೆ ಮೀರಿದ ಅನುಭವ.

ರಾಜು ಅನಂತಸ್ವಾಮಿ ನಮಗಾಗಿ ಹಾಡಿದ ಹಾಗು ಅವರು ಇಷ್ಟಪಟ್ಟು ಹಾಡುತ್ತಿದ್ದ ಹಾಡುಗಳ ಮೂಲಕ ಅವರನ್ನು ನೆನೆಯುವ ಸಲುವಾಗಿ ಕಲೆ ತಂಡ ಹಲವು ಗೆಳೆಯರೊಂದಿಗೆ ಸೇರಿ ‘ನೆನಪಿಗೆ ಮೀರಿದ್ದು’ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ ರಾಜು ಅನಂತಸ್ವಾಮಿಯವರ ಕೆಲವು ಶಿಷ್ಯರು, ಆಪ್ತ ಕಲಾವಿದರು ಹಾಡಲಿದ್ದು, ಇದಕ್ಕೆ ಜೊತೆಯಾಗಿ ಅವರ ಜೊತೆಗೆ ವಾದ್ಯಗಳನ್ನು ನುಡಿಸುತ್ತಿದ್ದ ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ.
ದಿನಾಂಕ: ೧೭ ಜನವರಿ ೨೦೧೨
ಸ್ಥಳ:
ಕೆ.ಎಚ್.ಕಲಾಸೌಧ

ರಾಮಾಂಜನೇಯ ಗುಡ್ಡ
ಹನುಮಂತನಗರ
ಬೆಂಗಳೂರು
ಸಮಯ: ಸಂಜೆ ೭:೩೦ ರಿಂದ
ಪ್ರಸ್ತುತಿ: ಕಲೆ ತಂಡ ಹಾಗು ಗೆಳೆಯರು

ಹಾಡಿನಲ್ಲಿ:

ಸುಜಯ್ ಶಾಸ್ತ್ರಿ,
ಪ್ರದೀಪ್ ಬಿ ವಿ,
ಸ್ಮಿತಾ ವಸಂತ್
ಮಧುಮಾಲ
ಪ್ರವೀಣ್ ಬಿ ವಿ ಹಾಗು
ರಾಜು ಅನಂತಸ್ವಾಮಿಯವರೊಂದಿಗೆ ಹಾಡಿರುವ, ಅವರ ಬಳಿ ಕಲಿತಿರುವ ಅತಿಥಿ ಗಾಯಕರು.

ವಾದ್ಯ:ರಾಜು ಅನಂತಸ್ವಾಮಿ, ಹಾಡು, ಹಾಡು, ಕಲೆ ತಂಡ, ನೆನಪಿಗೆ ಮೀರಿದ್ದು, raju anantaswami, mysore anantaswami, kannada music,samvaada.com

  • ಗಿಟಾರ್: ಸುದರ್ಶನ್
  • ರಿದಂ ಪ್ಯಾಡ್ : ಜೆರಾಲ್ಡ್
  • ಕೀಬೋರ್ಡ್ : ಕೃಷ್ಣ ಉಡುಪ
  • ತಬಲ: ಎಂ.ಸಿ.ಶ್ರೀನಿವಾಸ್
  • ಕೊಳಲು: ವಸಂತ್

ಆಹ್ವಾನಿತರು:
ಈ ಕಾರ್ಯಕ್ರಮಕ್ಕೆ ರಾಜು ಅನಂತಸ್ವಾಮಿಯವರ ಒಡನಾಟದಲ್ಲಿದ್ದ ಹಲವು ಗೆಳೆಯರನ್ನು ಆಹ್ವಾನಿಸಲಾಗಿದೆ. ಅವರು ರಾಜು ಅನಂತಸ್ವಾಮಿಯವರ ಜೊತೆಗಿನ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.

ಕಾರ್ಯಕ್ರಮ ಸಹಯೋಗ: ಲಹರಿ ಆಡಿಯೋ ಸಂಸ್ಥೆ ಹಾಗು ಸಂವಾದ ಡಾಟ್ ಕಾಂ(samvaada.com)

ಹೆಚ್ಚಿನ ವಿವರಗಳಿಗೆ ವಿನಯ್ ಶೇಷಾದ್ರಿ(ಕಲೆ ತಂಡದ ನಿರ್ದೇಶಕ)ಯನ್ನು ೯೮೮೬೦ ೮೪೧೧೧ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.


14-01-2012

samvaada.com fan page on facebook


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು