ದೃಶ್ಯಕ್ಕೊಂದು ನುಡಿಗಟ್ಟು

ಯಕ್ಷ ಲೋಕಕ್ಕೆ ತೆರಳಿದ ಭೀಷ್ಮ: ಕೆರೆಮನೆ ಶಂಭು ಹೆಗಡೆ

ಕೆರೆಮನೆ ಶಂಭು ಹೆಗಡೆ
ಇಂಥ ಸಾವು ಅಪರೂಪ. ಜೀವನದುದ್ದಕ್ಕೂ ತಾವು ಪ್ರೀತಿಸಿದ ಯಕ್ಷಗಾನದ ಅಖಾಡದಲ್ಲೇ ತಮ್ಮ ಬದುಕಿನ ಕೊನೆಯುಸಿರೆಳೆದ ಕೆರೆಮನೆ ಶಂಭು ಹೆಗಡೆ ಕನ್ನಡ ಕಲಾ ಪ್ರಪಂಚದ ಹೆಮ್ಮೆಯ ಕುಡಿ.

ನಾನು ಮತ್ತು ಸೀತಾ ಅವರನ್ನು ಭೇಟಿ ಮಾಡಿ ತಮ್ಮ ತಂದೆಯವರ ಕುರಿತಾದ ಆತ್ಮ ಕತೆಯನ್ನ (ಜಿ ಎಸ್ ಭಟ್ ಬರೆದಿರುವ ಕೆರೆಮನೆ ಶಿವರಾಮ ಹೆಗಡೆಯವರ ಆತ್ಮ ಕಥನ- ನೆನಪಿನ ರಂಗಸ್ಥಳ ) ಅಂತರ್ಜಾಲದಲ್ಲಿ ಪ್ರಕಟಿಸಲು ಅನುಮತಿ ಕೇಳಿದಾಗ ಪ್ರೀತಿಯಿಂದ ಅದರ ನಿರೂಪಕರೊಡನೆ ಮಾತನಾಡಿ ಅನುಮತಿ ದೊರಕಿಸಿಕೊಟ್ಟಿದ್ದರು. ಸೌಜನ್ಯದ ಮೂರ್ತಿ ಯಾಗಿದ್ದ ಅಪರೂಪದ ಕಲಾವಿದ ಕೆರೆಮನೆ ಶಂಭು ಹೆಗಡೆಯವರಿಗೆ ಕನ್ನಡ ಸಾಹಿತ್ಯ ಡಾಟ್ ಕಾಂ ಮತ್ತು ಸಂವಾದ ಡಾಟ್ ಕಾಂ ನ ಭಾವಪೂರ್ಣ ಶೃದ್ಧಾಂಜಲಿ.

ಶೇಖರ್‌ಪೂರ್ಣ

caricature Courtesy: Pramod PT


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು